Garbhageete: ಗರ್ಭಿಣಿಯು 4ನೇ ತಿಂಗಳಿನಲ್ಲಿ ಹೇಗೆಲ್ಲಾ ಜಾಗ್ರತೆವಹಿಸಬೇಕು ಇಲ್ಲಿದೆ ಮಾಹಿತಿ
ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ನಡೆಯುವಂತಹ ಸುಂದರವಾದ ಅನುಭವಗಳ ಗುಚ್ಚವೆಂದೇ ಹೇಳಬಹುದು. ಎಷ್ಟೇ ಸಂತೋಷವಿದ್ದರೂ ಗರ್ಭಾವಸ್ಥೆಯ ಪ್ರತಿಯೊಂದು ಹಂತವನ್ನು ತುಂಬಾ ಎಚ್ಚರಿಕೆಯಿಂದ ದಾಟಬೇಕು
ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ನಡೆಯುವಂತಹ ಸುಂದರವಾದ ಅನುಭವಗಳ ಗುಚ್ಚವೆಂದೇ ಹೇಳಬಹುದು. ಎಷ್ಟೇ ಸಂತೋಷವಿದ್ದರೂ ಗರ್ಭಾವಸ್ಥೆಯ ಪ್ರತಿಯೊಂದು ಹಂತವನ್ನು ತುಂಬಾ ಎಚ್ಚರಿಕೆಯಿಂದ ದಾಟಬೇಕು. ಗರ್ಭಿಣಿಯು ನಾಲ್ಕನೇ ತಿಂಗಳಲ್ಲಿ ಹೇಗಿರಬೇಕು, ಏನೇನು ಜಾಗ್ರತೆವಹಿಸಬೇಕು, ಯಾವ್ಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.
ನಾಲ್ಕನೇ ತಿಂಗಳನ್ನು ನಾವು ದೌಹೃದಿನಿ ಎಂದು ಕರೆಯುತ್ತೇವೆ, ಅಂದರೆ ಮಗುವಿನ ಮನಸ್ಸು ನಾಲ್ಕನೇ ತಿಂಗಳಲ್ಲಿ ವ್ಯಕ್ತವಾಗುತ್ತದೆ. ಇದು ವಾಗ್ಭಟಾಚಾರ್ಯಯ ವ್ಯಾಖ್ಯಾನವಾಗಿದೆ. ಭ್ರೂಣದ ಬೆಳವಣಿಗೆಯಾಗುವುದು ಅತ್ಯಂತ ಮಹತ್ವದಘಟ್ಟ, ಕೊರತೆಗಳು ಆಸೆಯಾಗಿ ಕಾಡುತ್ತವೆ.
ಅದನ್ನೇ ನಾವು ಬಯಕೆ ಎನ್ನುತ್ತೇವೆ. ದೌಹೃದಿನಿ ಎಂದರೆ ಎರಡೂ ಹೃದಯಗಳುಳ್ಳವಳು ಅಂದರೆ ತಾಯಿಯದು ಹಾಗೂ ಭ್ರೂಣದ್ದು ಎಂದರ್ಥ.
- ಮಗುವಿನ ಕಣ್ಣು, ಕಿವಿ, ಮೂಗು, ನಾಲಿಗೆ ,ಚರ್ಮ ಈ ಪಂಚೇದ್ರಿಯಗಳು ಇದೇ ಅವಧಿಯಲ್ಲಿ ಸ್ಪಷ್ಟವಾಗುತ್ತದೆ ಆದ್ದರಿಂದ ಮನಸ್ಸನ್ನು ಅರಳಿಸುವಂತಹ ಉತ್ತಮ ಸಾಹಿತ್ಯ, ಪುಸ್ತಕಗಳನ್ನು ಓದಬೇಕು, ನೋಡಬೇಕು.
- ಹಸಿರನ್ನು ವೀಕ್ಷಿಸಬೇಕು
- ಮನೆಯ ಒಳಗಡೆ ಹಾಗೂ ಹೊರಗಡೆ ಸ್ವಚ್ಛವಾಗಿಟ್ಟುಕೊಳ್ಳಬೇಕು
- ಬೆಳಗ್ಗೆ ಹಾಗೂ ಸಂಜೆ ಪರಿಮಳದ ಧೂಪ ಹಾಕಬೇಕು
- ತೀಕ್ಷ್ಣ ಸುವಾಸನೆಯ ಸುಗಂಧ ದ್ರವ್ಯಗಳು ಬಳಸುವುದು ಬೇಡ
- ಪನ್ನೀರು ಸಿಂಪಡಿಸಿಕೊಳ್ಳುವುದು ಒಳ್ಳೆಯದು.
- ಮಲ್ಲಿಗೆ, ಜಾಜಿ, ಸಂಪಿಗೆ ಹೂವನ್ನು ಮುಡಿದರೆ ಒಳ್ಳೆಯದು ಹಾಗಾಗಿ ನಮ್ಮಲ್ಲಿ ಮೊಗ್ಗಿನ ಜಡೆ ಹೆಣೆಯುವುದು ಸಂಪ್ರದಾಯಿಕವಾಗಿದೆ.
- ಕರ್ಕಶ ಶಬ್ದಗಳಿಂದ ಸಾಧ್ಯವಾದಷ್ಟು ದೂರವಿರಬೇಕು, ಕಿವಿಯ ಮೇಲೆ ಬೀಳುವ ಈ ಕರ್ಕಶ ಶಬ್ದವು ಗರ್ಭಿಣಿಯ ಗ್ರಹಣ ಶಕ್ತಿಯನ್ನು ಕಡಿಮೆ ಮಾಡುತ್ತದೆ.
- ರೇಡಿಯೋ, ಟಿವಿ, ಟೇಪ್ರೆಕಾರ್ಡರ್ ಬಳಕೆ ಮಾಡುವುದಾದರೆ ವಾಲ್ಯೂಮ್ ಕಡಿಮೆ ಇಟ್ಟುಕೊಳ್ಳಿ.
- ಒಂದೊಮ್ಮೆ ಹಾಗೆ ಕರ್ಕಶ ಶಬ್ದವನ್ನು ಆಲಿಸಿದರೆ ತಾಯಿ ಮಾತ್ರವಲ್ಲದೆ ಹೊಟ್ಟೆಯಲ್ಲಿರುವ ಮಗುವಿನ ಶ್ರವಣೇಂದ್ರಿಯಕ್ಕೂ ತೊಂದರೆಯಾಗಬಹುದು.
- ಕೆಲವೊಂದು ಮಹಿಳೆಯರು ಸಿಗರೇಟ್ ಸೇವನೆ ಮಾಡುತ್ತಾರೆ. ಇದರಿಂದಲೂ ಮಗುವಿನ ಶ್ರವಣ ಸಾಮರ್ಥ್ಯ ಕುಂಟಿತಗೊಳ್ಳುವುದು.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.