White Spot On Skin: ಮುಖದಲ್ಲಿ ಮೂಡುವ ಬಿಳಿ ಕಲೆಗಳು ಏನನ್ನು ಸೂಚಿಸುತ್ತವೆ?

ಮುಖದ ಮೇಲಿರುವ ಕೆಲವು ಬಿಳಿ ಕಲೆಗಳು ಮುಖದ ಅಂದವನ್ನು ಕೆಡಿಸುವುದಷ್ಟೇ ಅಲ್ಲದೆ ಕೆಲವು ರೋಗಗಳ ಅಪಾಯವನ್ನು ಕೂಡ ಸೂಚಿಸುತ್ತವೆ. ಕೆಲವು ದೇಹದಲ್ಲಿರುವ ಪೌಷ್ಠಿಕಾಂಶ ಹಾಗೂ ಹಾರ್ಮೊನುಗಳ ಏರುಪೇರಿನಿಂದ ಉಂಟಾಗುತ್ತದೆ. ಇದರಿಂದಾಗಿ ಮುಖದ ಹಾಗೂ ದೇಹದ ಇತರ ಭಾಗಗಳಲ್ಲಿ ಬಿಳಿ ಕಲೆಗಳು ಕಾಣಿಸುತ್ತದೆ.

White Spot On Skin: ಮುಖದಲ್ಲಿ ಮೂಡುವ ಬಿಳಿ ಕಲೆಗಳು ಏನನ್ನು ಸೂಚಿಸುತ್ತವೆ?
White Spot
Follow us
TV9 Web
| Updated By: ನಯನಾ ರಾಜೀವ್

Updated on:Jun 27, 2022 | 2:17 PM

ಚರ್ಮದ ಮೇಲೆ ಮೂಡುವ ಕೆಲವು ಬಿಳಿ ಕಲೆಗಳು ಮುಖದ ಅಂದವನ್ನು ಕೆಡಿಸುವುದಷ್ಟೇ ಅಲ್ಲದೆ ಕೆಲವು ರೋಗಗಳ ಅಪಾಯವನ್ನು ಕೂಡ ಸೂಚಿಸುತ್ತವೆ. ಕೆಲವು ದೇಹದಲ್ಲಿರುವ ಪೌಷ್ಠಿಕಾಂಶ ಹಾಗೂ ಹಾರ್ಮೊನುಗಳ ಏರುಪೇರಿನಿಂದ ಉಂಟಾಗುತ್ತದೆ. ಇದರಿಂದಾಗಿ ಮುಖದ ಹಾಗೂ ದೇಹದ ಇತರ ಭಾಗಗಳಲ್ಲಿ ಬಿಳಿ ಕಲೆಗಳು ಕಾಣಿಸುತ್ತದೆ. ಇವುಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ.

ಬಿಳಿ ಕಲೆಯು ಪಿಟಿರಿಯಾಸಿಸ್ ಆಲ್ಬಾ, ವಿಟಿಲಿಗೋ, ಪಾಲಿಮಾರ್ಫಿಕ್ ಲೈಟ್ ಎರಪ್ಷನ್ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪಿಟಿರಿಯಾಸಿಸ್ ಆಲ್ಬಾ: ಈ ರೋಗವನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸಬಹುದು, ನಿಮ್ಮ ದೇಹವನ್ನು ಸದಾ ಮಾಯ್ಚುರೈಸ್ ಆಗಿಡಬೇಕು, ನಿಮ್ಮ ಚರ್ಮಕ್ಕೆ ಮಾಯ್ಚುರೈಸರ್ ಅಥವಾ ಲೋಷನ್ ಹಚ್ಚಬೇಕು, ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಮಸ್ಯೆಯಾಗಿದೆ.

ಪಾಲಿಮಾರ್ಫಿಕ್ ಲೈಟ್ ಎರಪ್ಷನ್: ಇದು ದೇಹವು ತುಂಬಾ ಬೆಳಕಿಗೆ ಒಗ್ಗಿಕೊಂಡಾಗ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಯಾಗಿದೆ.

ಗುಣಪಡಿಸುವುದು ಹೇಗೆ?: ಸಾಮಾನ್ಯವಾಗಿ ಪ್ರತಿ ವರ್ಷ ಬೇಸಿಗೆಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಕಡಿಮೆ ಮಾಡಲು ಸ್ಡೀರಾಯ್ಡ್​ ಕ್ರೀಂಗಳನ್ನು ಪದೇ ಪದೇ ಹಚ್ಚಬೇಕು.

ವಿಟಿಲಿಗೋ: ವಿಟಿಲಿಗೋ ಸಮಸ್ಯೆಯುಂಟಾದರೆ ಬಿಳಿ ಬಣ್ಣ ದೊಡ್ಡ ಕಲೆಯುಂಟಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದರೆ ಪೋಷಕರು ಮಕ್ಕಳ ಥೈರಾಯ್ಡ್ ಟೆಸ್ಟ್​ ಮಾಡಿಸಬೇಕು, ಮಡಿಕೇಷನ್ ಮಾಡಬೇಕು. ಯಾವುದೇ ಕಾರಣಕ್ಕೂ ವೈದ್ಯರು ನೀಡಿರುವ ಔಷಧಿಯನ್ನು ಮರೆಯದೇ ಮಕ್ಕಳಿಗೆ ನೀಡಬೇಕು.

ಬಿಳಿ ಕಲೆಗಳನ್ನು ಹೋಗಲಾಡಿಸಲು ಮನೆಮದ್ದು -ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ 2 ವಾರಗಳಲ್ಲಿ ಅದು ಹೋಗುತ್ತದೆ.

-ಶುಂಠಿ ಪೇಸ್ಟನ್ನು ಕಲೆಗಳ ಮೇಲೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಕಲೆಗಳು ಕಡಿಮೆಯಾಗುತ್ತದೆ.

-1 ಚಮಚ ಅರಶಿನ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಸೇರಿಸಿ ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿದರೆ ಕಲೆ ಹೋಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಮಾಡಬೇಕು.

-ಕಹಿಬೇವಿನ ಎಲೆ ಹಾಗು ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿ ಪ್ರತಿದಿನ 1 ಗ್ಲಾಸ್ ನೀರಿಗೆ 1 ಚಮಚ ಪುಡಿ ಮಿಕ್ಸ್ ಮಾಡಿ ಕುಡಿಯಿರಿ. ಇಲ್ಲವಾದಲ್ಲಿ ಕಹಿಬೇವಿನ ಎಲೆ ಯನ್ನು ಅರೆದು ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ.

-1 ಚಮಚ ಗಂಧದ ಪೇಸ್ಟ್, 1 ಚಮಚ ಅರಶಿನ ಪುಡಿ, 1ಚಮಚ ಅಕ್ಕಿಹಿಟ್ಟು ಗಳನ್ನು 2 ಚಮಚ ಜೇನುತುಪ್ಪಕ್ಕೆ ಸೇರಿಸಿ ಕಲೆಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಬಿಳಿ ಕಲೆಗಳು ಕಡಿಮೆಯಾಗುತ್ತದೆ.

Published On - 2:15 pm, Mon, 27 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ