ಗರ್ಭಗೀತೆ: ಗರ್ಭಿಣಿಯರ ಆಹಾರ ನಿಯಮಗಳು ಹೇಗಿರಬೇಕು?
Garbhageete: ಮಗುವು ಆರೋಗ್ಯಯುತವಾಗಿ ಹುಟ್ಟುವಲ್ಲಿ ಗರ್ಭಿಣಿಯರು ಸೇವಿಸುವ ಆಹಾರವು ಪ್ರಮುಖ ಪಾತ್ರವಹಿಸುತ್ತದೆ. ಇಂದು ನಾವು ಗರ್ಭಿಣಿಯರ ಆರೋಗ್ಯ ನಿಯಮಗಳು ಹೇಗಿರಬೇಕು ಎಂಬುದನ್ನು ನೋಡೋಣ.
ಮಗುವು ಆರೋಗ್ಯಯುತವಾಗಿ ಹುಟ್ಟುವಲ್ಲಿ ಗರ್ಭಿಣಿಯರು ಸೇವಿಸುವ ಆಹಾರವು ಪ್ರಮುಖ ಪಾತ್ರವಹಿಸುತ್ತದೆ. ಇಂದು ನಾವು ಗರ್ಭಿಣಿಯರ ಆರೋಗ್ಯ ನಿಯಮಗಳು ಹೇಗಿರಬೇಕು ಎಂಬುದನ್ನು ನೋಡೋಣ. ಗರ್ಭಿಣಿಯರು ಸೇವಿಸುವ ಆಹಾರ ಹೇಗಿರಬೇಕು, ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಗರ್ಭಿಣಿಯರು ಸಮತೋಲನವಾದ ಆಹಾರವನ್ನು ಎಂದಿಗೂ ಸೇವಿಸಬೇಕು, ಅವುಗಳೆಂದರೆ ಹಾಲು, ತುಪ್ಪ, ಜೇನುತುಪ್ಪ ಇವುಗಳನ್ನು ಗರ್ಭ ಧರಿಸಿದ ಮೂರು ತಿಂಗಳು ಸ್ವಲ್ಪ ಹೆಚ್ಚೇ ತಿನ್ನಬೇಕು.
ಗರ್ಭಿಣಿಯರು ಏನೇ ತಿಂದರೂ ಅದು ಮೃದುವಾಗಿರಬೇಕು, ಬೇಯಿಸಿದ ಅನ್ನವನ್ನು ಹಾಲಿನೊಂದಿಗೆ ಸೇವಿಸಬೇಕು. ಹಾಗೆಯೇ ಕೆಲವೊಂದು ಮನೆಯಲ್ಲಿ ಹೋಟೆಲ್ನಲ್ಲಿ ಸೋಡ ಹಾಕಿದ ಅನ್ನದ ರೀತಿ ಉದುರು ಉದುರಾದ ಅನ್ನವನ್ನು ಮಾಡುತ್ತಾರೆ. ಆದರೆ ಗರ್ಭಿಣಿಯರು ಸೇವಿಸುವ ಆಹಾರ ಚಿಕ್ಕ ಮಕ್ಕಳಿಗೆ ತಿನ್ನಿಸುವ ಮೆತ್ತನೆಯ ಅನ್ನದಂತಿರಬೇಕು. ಸಿಹಿ ಪಾನೀಯಗಳನ್ನು ಸೇವಿಸಬಹುದು.
ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳು
ಜೇನು ತುಪ್ಪ: ಇದು ಸುಲಭವಾಗಿ ಜೀರ್ಣವಾಗುವಂಥದ್ದು, ಜಠರಾಗ್ಬಿ ಉತ್ತಮವಾಗುತ್ತದೆ, ದೇಹಕ್ಕೆ ಮಾರ್ಧ್ವವತೆಯನ್ನುಂಟು ಮಾಡುತ್ತದೆ. ಬುದ್ಧಿಯನ್ನು ಕೂಡ ಚುರುಕುಗೊಳಿಸುತ್ತದೆ. ಬಾಯಿ ರುಚಿ ಕೂಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೆ ಸುಸ್ತು, ಬಾಯಾರಿಕೆ, ವಾಂತಿ, ಆಯಾಸ ಬಿಕ್ಕಳಿಕೆ, ಮಲಬದ್ಧತೆ, ಮೂಲವ್ಯಾಧಿ ಇವೆಲ್ಲವುಗಳ ಸಮಸ್ಯೆಯನ್ನು ಜೇನುತುಪ್ಪ ಕಡಿಮೆ ಮಾಡುತ್ತದೆ.
ಮಗುವು ಹುಟ್ಟುವುದು ತುಂಬಾ ತಡವಾದಾಗ ಅದರ ಅಡ್ಡಪರಿಣಾಮವೆಂಬಂಥೆ ಪೈಲ್ಸ್ ಕಾಣಿಸಿಕೊಳ್ಳುತ್ತದೆ. ಮಗು ಹೊಟ್ಟೆಯಲ್ಲಿದ್ದಾಗಲೇ ಖಾರವಾಗಿರುವ ಆಹಾರವನ್ನು ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸಿಬಿಡಿ. ಈಗ ಉತ್ತಮ ಆಹಾರವನ್ನು ಸೇವಿಸಿದರೆ ಅದರ ಪ್ರಯೋಜನವನ್ನು ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆ ಬಳಿಕ ನೀವು ಕಾಣಬಹುದು.
ತುಪ್ಪ: ತುಪ್ಪವನ್ನು ತಿಂದರೆ ಬೊಜ್ಜು ಬರುತ್ತದೆ, ಹೆಚ್ಚಾಗಿ ತುಪ್ಪವನ್ನು ತಿಂದು ನೀನು ನೋಡು ದಪ್ಪ ಆಗ್ತಾ ಇದ್ದೀಯ ಎನ್ನುವ ಮಾತೆಲ್ಲಾ ಸುಳ್ಳು. ಮನೆಯಲ್ಲೇ ತಯಾರಿಸಿದ ಶುದ್ಧ ತುಪ್ಪವು ಗರ್ಭಿಣಿಯರಿಗೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಹಾಗೆಯೇ ಹಸು ಕೂಡ ಕಾಡು ಮೇಡುಗಳನ್ನು ಅಲೆದು ಸಾಕಷ್ಟು ಗಿಡಮೂಲಿಕೆಗಳನ್ನು ತಿಂದು ಹಸುವಿನಿಂದ ಬಂದ ಹಾಲು ಬಳಿಕ ಮೊಸರು ನಂತರ ಅದರಿಂದ ಬೆಣ್ಣೆ ಬಳಿಕ ತುಪ್ಪ. ತುಪ್ಪವು ಮೆದುಳಿನ ಬೆಳವಣಿಗೆಗೆ ತುಂಬಾ ಸಹಕಾರಿ. ಜತೆಗೆ ಬೇಳೆ, ಮೊಳಕೆ ಕಾಳು, ಸೊಪ್ಪು, ತರಕಾತಿಗಳನ್ನು ಕೂಡ ಸೇವಿಸಬೇಕು.
ಗರ್ಭಿಣಿಯರು ಊಟ ಮಾಡುವ ತಟ್ಟೆ ಕಲರ್ಪೂಲ್ ಆಗಿರಬೇಕು: ಗರ್ಭಿಣಿಯರು ಊಟ ಮಾಡುವ ತಟ್ಟೆ ಕಲರ್ಫುಲ್ ಆಗಿರಬೇಕು. ಪ್ರತಿದಿನ ವಿಟಮಿನ್, ಮಿನರಲ್ ಆಹಾರವೆಂದರೆ ಸ್ವಲ್ಪ ಗೊಂದಲವಾಗುವುದು ಸಹಜ, ಆದರೆ ಹಣ್ಣು, ತರಕಾರಿಗಳನ್ನು ನೀವು ಸೇವಿಸಬಹುದು.
ಉಪ್ಪು ಸೇವನೆ ಕಡಿಮೆ ಮಾಡಿ ಉಪ್ಪನ್ನು ಕಡಿಮೆ ತಿಂದರೆ ಒಳಿತು ಇಲ್ಲವಾದಲ್ಲಿ ಗರ್ಭಧರಿಸಿ ಸ್ವಲ್ಪ ಸಮಯದ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಅಷ್ಟು ಉಪ್ಪು ಬೇಕೇಬೇಕು ಎಂದಿದ್ದರೆ ಕಲ್ಲುಪ್ಪು ಬಳಕೆ ಮಾಡಿ. ಖಾರವನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ, ವೈದ್ಯರು ಎಲ್ಲವನ್ನು ತಿನ್ನಿ ಎಂದು ಹೇಳುತ್ತಾರೆ. ಆದರೆ ನಮ್ಮ ಗರ್ಭಸಂಸ್ಕಾರದ ಪ್ರಕಾರ ಪಥ್ಯವನ್ನು ಫಾಲೋ ಮಾಡಲು ಹೇಳುತ್ತೇವೆ.
ಹಿತಭುಕ್ : ಕರಿದ ಪದಾರ್ಥ ಹಪ್ಪಳ ಉಪ್ಪಿನಕಾಯಿ ಮಿತವಾಗಿರಲಿ. ಆಯುರ್ವೇದದಲ್ಲಿ ಹೇಳುವಂತೆ ಹಿತಭುಕ್ ಅಂದರೆ ನೀವು ತಿನ್ನುವ ಆಹಾರಗಳು ನಿಮ್ಮ ದೇಹಕ್ಕೆ ಹಿತವಾಗಿರಬೇಕು, ಕ್ಷೀರಾನ್ನ ರೀತಿಯ ಹಿತವಾದ ಆಹಾರ ಸೇವಿಸಿ.
ಮಿತಭುಕ್: ಮಿತಭುಕ್ ಎಂದರೆ ಮಿತವಾಗಿ ತಿನ್ನಿ, ಮನೆಯಲ್ಲಿ ಸಾಮಾನ್ಯವಾಗಿ ಗರ್ಭಿಣಿಯಾಗಿದ್ದಾಗ ತುಂಬಾ ಆಹಾರವನ್ನು ತಿನ್ನುವಂತೆ ಒತ್ತಡ ಹಾಕುತ್ತಾರೆ. ನೀವು ಒಬ್ಬರಿಗೋಸ್ಕರ ತಿನ್ನುತ್ತಿಲ್ಲ ಇಬ್ಬರಿದ್ದೀರಿ ಎಂದು ಹೇಳುತ್ತಾರೆ. ಆದರೆ ತುಂಬಾ ತಿಂದರೆ ಓಡಾಡಟಕ್ಕೆ ಸಮಸ್ಯೆಯಾಗುತ್ತದೆ. ಇಡೀ ದಿನ ಹಾಸಿಗೆಯಲ್ಲೇ ಮಲಗಿರಬೇಕಾಗುತ್ತದೆ. ಯಾವುದೇ ಲವಲವಿಕೆಯೂ ಇರುವುದಿಲ್ಲ ಇದರಿಂದ ಮುಂದೆ ಹುಟ್ಟುವ ಮಗುವು ಕೂಡ ಥಾಮಸಗುಣವನ್ನು ಹೊಂದಬಹುದು.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಧಾರಣೆ, ಗರ್ಭಿಣಿಯರ ಆರೈಕೆ, ಗರ್ಭಿಣಿಯರು ಎಂತಹ ಆಹಾರ ಸೇವಿಸಬೇಕು, ನ್ಯಾಚ್ಯುರಲ್ ಬರ್ಥಿಂಗ್ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ