Art of Yoga: ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲವನ್ನು ಹೆಚ್ಚಿಸುವುದು ಹೇಗೆ ?

ನೀವು ಮಾಡುವ ಯೋಗದಿಂದ  ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು  ಬೆನ್ನು ಮೂಳೆ ನೋವುಗಳನ್ನು ಕಡಿಮೆ ಮಾಡಲು ಈ ಯೋಗ ಉತ್ತಮವಾಗಿರುತ್ತದೆ. 

Art of Yoga:  ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲವನ್ನು ಹೆಚ್ಚಿಸುವುದು ಹೇಗೆ ?
ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲಕ್ಕೆ ಆಸನ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 27, 2022 | 2:47 PM

ಯೋಗ ಎನ್ನುವುದು ನಮ್ಮ ದೇಹಕ್ಕೆ ವಿಶ್ರಾಂತಿ ಮತ್ತು ಹೊಸತನವನ್ನು ನೀಡುವ ಒಂದು ಪ್ರಯೋಗ ಶಾಲೆಯಂತೆ, ಯೋಗ ನಮ್ಮ ದೇಹವನ್ನು ಪ್ರತಿದಿನ ಹುಮ್ಮಸಿನಿಂದ ಇರುವಂತೆ ಮಾಡುತ್ತದೆ. ದೇಹದ ಪ್ರತಿ ಭಾಗವನ್ನು ಸೃಜನತ್ಮಕವಾಗಿ ಇಡುವಂತೆ ಮಾಡಲು ಸಹಾಯ ಮಾಡುತ್ತದೆ. ಯೋಗದ ಪ್ರತಿ ಭಂಗಿಯಿಂದ ನಮ್ಮ ದೇಹದ ಭಾಗಗಳು ಚಟುವಟಿಕೆಯಿಂದ ಇರುತ್ತದೆ ಮತ್ತು ನಮ್ಮ ಆರೋಗ್ಯವನ್ನು ಕೂಡ ಈ ಯೋಗ ಎನ್ನುವುದು ಕಾಪಾಡುತ್ತದೆ. ಈ ಯೋಗಗಳಿಂದ ನಮ್ಮ ಬೆನ್ನು ಮೂಳೆಗೆ ಯಾವ ರೀತಿಯಲ್ಲಿ ಮತ್ತು ಯಾವ ಆಸನವನ್ನು ಮಾಡಿದರೆ ವಿಶ್ರಾಂತಿ ಸಿಗುತ್ತದೆ ಹಾಗೂ ಭುಜಗಳ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸುವುದು ಎನ್ನುವ ಬಗ್ಗೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.

ನೀವು ಮಾಡುವ ಯೋಗದಿಂದ  ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು  ಬೆನ್ನು ಮೂಳೆ ನೋವುಗಳನ್ನು ಕಡಿಮೆ ಮಾಡಲು ಈ ಯೋಗ ಉತ್ತಮವಾಗಿರುತ್ತದೆ.  ಭುಜವನ್ನು ಮತ್ತಷ್ಟು  ಬಲಗೊಳಿಸುವ ಕಾರ್ಯವನ್ನು ಈ ಯೋಗ ಮಾಡುತ್ತದೆ. ದಿನದ ಎರಡು ಬಾರಿ ಈ ಯೋಗವನ್ನು ಮಾಡುವುದರಿಂದ ಈ ಲಾಭಗಳನ್ನು ಪಡೆದುಕೊಳ್ಳಬಹುದು.

ಗೋಡೆಯ ಬದಿಯಲ್ಲಿ ನೇರವಾಗಿ ನಿಂತುಕೊಂಡು ಎಡದ ಕೈಯನ್ನು ಗೋಡೆಗೆ ಹಾಗೂ ಬಲದ ಕೈಯನ್ನು ನೇರವಾಗಿ ಕಾಲಿನ ತೊಡೆಯ ಮೇಲೆ ಇಟ್ಟುಕೊಂಡು,  ದೃಷ್ಟಿ ನೇರವಾಗಿಟ್ಟು ಈ ಆಸನವನ್ನು ಮಾಡಬೇಕು. ಇದನ್ನು  10ರಿಂದ 15  ನಿಮಿಷಗಳ ಕಾಲ ಈ ಆಸನವನ್ನು ಮಾಡಿದರೆ ನಮ್ಮ  ಬೆನ್ನು ಮೂಳೆಗೆ ವಿಶ್ರಾಂತಿ ಮತ್ತು ಭುಜದ ಬಲಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಈ ಆಸನದಿಂದ ದೇಹ ರಕ್ತ ಪರಿಚಲನೆಗೂ ಉಪಯೋಗ ಆಗುತ್ತದೆ.

ಇದನ್ನೂ ಓದಿ
Image
ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಜೂನ್ 20 ಮತ್ತು 21ರ ಪ್ರವಾಸದ ಸಂಪೂರ್ಣ ವೇಳ ಪಟ್ಟಿ ಇಲ್ಲಿದೆ
Image
Yoga utsav 2022: ಯೋಗ ಎಂಬ ಅಮೂಲ್ಯ ಗಣಿಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ ಸಚಿವ ಪ್ರಲ್ಹಾದ್ ಜೋಶಿ ಸಾರಥ್ಯದ ಕೇಂದ್ರ ಗಣಿ ಇಲಾಖೆ!
Image
ಸೋಷಿಯಲ್ ಮೀಡಿಯಾದಲ್ಲಿ ಸಾಮಾಜಿಕ ಕಳಕಳಿ! ಕೇಂದ್ರ ಸಚಿವ ಜೋಶಿ ಯೋಗವನ್ನು ಮತ್ತಷ್ಟು ಪರಿಚಯ ಮಾಡಿಸ್ತಿದ್ದಾರೆ ನೋಡಿ
Image
Art Of Yoga: ಸಿಂಗಲ್ ಲೆಗ್ ಸ್ಟ್ರೆಚಿಂಗ್ ವ್ಯಾಯಾಮ ಎಂದರೇನು? ಉಪಯೋಗಗಳೇನು?

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಸಿಂಗಲ್ ಲೆಗ್ ಸ್ಟ್ರೆಚಿಂಗ್ ವ್ಯಾಯಾಮ ಎಂದರೇನು? ಉಪಯೋಗಗಳೇನು?

ಒಬ್ಬ ವ್ಯಕ್ತಿಯು ಬೆನ್ನು ನೋವು ಉಂಟಾದರೆ ಅದು ನಿಮ್ಮ ಬೆನ್ನು ಮೂಳೆಗೆ ವಿಶ್ರಾಂತಿ ಇಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಅದಕ್ಕಾಗಿ ನಾವು ಈ ಆಸನವನ್ನು ಮಾಡುವುದು ಉತ್ತಮ.

ಬೆನ್ನು ನೋವಿನಿಂದ ಆಗುವ ಸಮಸ್ಯೆಗಳು

1. ಹಾರ್ಮೋನುಗಳ ಬದಲಾವಣೆಗಳು

2. ಗರ್ಭಾವಸ್ಥೆ ಸಮಸ್ಯೆ

3. ಬೆನ್ನಿನ ಗಾಯಗಳು

4. ಗ್ಯಾಸ್ ಮತ್ತು ಜಠರಗರುಳಿನ ಸಮಸ್ಯೆಗಳು

5. ಒತ್ತಡ

6. ಮೂತ್ರನಾಳದ ಸೋಂಕು

ಆದರೆ ಇವುಗಳನ್ನು ತಡೆಯುವ  ಶಕ್ತಿ ಇರುವುದು ಈ ಆಸನಕ್ಕೆ ಮಾತ್ರ, ಏಕೆಂದರೆ ನಮ್ಮ ದೇಹದಲ್ಲಿ ಇಂತಹ ಬದಲಾವಣೆಗಳು ಕಂಡು ಬಂದರೆ ಭವಿಷ್ಯದಲ್ಲಿ ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.  ಈಗಾಗಲೇ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ತಕ್ಷಣ ಈ ಬಗ್ಗೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಈ ಬೆನ್ನು ಮೂಳೆಗಳಿಗೆ ವಿಶ್ರಾಂತಿ ಸಿಕ್ಕರೇ ಖಂಡಿತ ನಿಮ್ಮಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಇಂತಹ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಈ ಆಸನವನ್ನು ಮಾಡಿ.

ಇನ್ನೂ ಭುಜಗಳ ಬಲವನ್ನು ಉತ್ತಮ ಮತ್ತು ಶಕ್ತಿಯುತವಾಗಿ ನೋಡಿಕೊಳ್ಳಲು ಈ ಆಸನವು ತುಂಬಾ ಪ್ರಯೋಜನಕಾರಿಯಾಗಿದೆ.  ಕೈಗಳಿಗೆ ಬಲವನ್ನು ಹೆಚ್ಚಿಸುವುದರ ಜೊತೆಗೆ ಭುಜಗಳ ಚಟುವಟಿಕೆಗಳನ್ನು ಹೆಚ್ಚು ಮಾಡುತ್ತದೆ. ಯೋಗದಿಂದ  ಭುಜಗಳು, ತೋಳುಗಳು ಮತ್ತು ಎದೆಯಂತಹ ನಮ್ಮ ದೇಹದ ಮೇಲ್ಭಾಗದ ಸ್ನಾಯುಗಳು ಹೆಚ್ಚು  ಹೆಚ್ಚು ಕೆಲಸವನ್ನು ಮಾಡಲು ಸಹಾಯ ಮಾಡುತ್ತದೆ.  ಭುಜದ ಸ್ನಾಯುಗಳು  ದೈಹಿಕ ಚಲನೆಗೆ ಸಹಾಯ ಮಾಡುತ್ತದೆ.

ಚಲನೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಹಾಗೆಯೇ ನಿಮ್ಮ ಭುಜಗಳ ಸ್ನಾಯು ಮತ್ತು ಜಂಟಿ ಬಲವನ್ನು ಹೆಚ್ಚಿಸಲು, ಯೋಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯೋಗ ಪ್ರಾಚೀನ ಭಾರತೀಯ ಅಭ್ಯಾಸವು ಹೌದು. ವ್ಯಾಯಾಮ ಚಲನೆಗಳು ಮತ್ತು ಧ್ಯಾನ ತಂತ್ರಗಳ ಸಂಯೋಜನೆಯಾಗಿದ್ದು ಅದು ಮನಸ್ಸು ಮತ್ತು ದೇಹವನ್ನು ಸ್ಥಿರಲದಲ್ಲಿ ಇಡಡುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕರೆಂಟ್ ರಿಸರ್ಚ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ, ಯೋಗ ತರಬೇತಿಯು ಭುಜದ ಸ್ನಾಯುಗಳ ಚಲನೆ ಮತ್ತು ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:27 pm, Fri, 17 June 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ