ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಜೂನ್ 20 ಮತ್ತು 21ರ ಪ್ರವಾಸದ ಸಂಪೂರ್ಣ ವೇಳ ಪಟ್ಟಿ ಇಲ್ಲಿದೆ
Narendra Modi: ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ನಂಜನಗೂಡು ರಸ್ತೆಯ ಮರಗಳಿಗೆ ಕುತ್ತು ಎದುರಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ಬೆಳೆದು ನಿಂತಿರುವ ಮರಗಳನ್ನು ಕತ್ತರಿಸಲಾಗುತ್ತಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಜೂನ್ 20 ಮತ್ತು 21 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲೂ ಜೂನ್ 21ರಂದು ಮೈಸೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ(International Yoga Day 2022) ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 20 ಮತ್ತು 21ರ ಪ್ರಧಾನಿ ಮೋದಿ ಭೇಟಿ ವಿವರ ಇಲ್ಲಿದೆ.
ಜೂನ್ 20 ಮತ್ತು 21 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಪಟ್ಟಿ -ಜೂನ್ 20 ರಂದು ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. -ಮಧ್ಯಾಹ್ನ 12.20ಕ್ಕೆ ಯಲಹಂಕ ವಾಯುನೆಲೆಯಿಂದ ಹೆಲಿಕಾಫ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 12.30ರಿಂದ 1 ಗಂಟೆಯವರೆಗೆ ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಮತ್ತು ಬಾಗಚಿ ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ -ಮಧ್ಯಾಹ್ನ 1.15 ಕ್ಕೆ ಹೆಲಿಕಾಪ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ನಿಂದ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಪ್ರಯಾಣ -ಮಧ್ಯಾಹ್ನ 1.35ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 1.45ರಿಂದ 3 ಗಂಟೆಯವರೆಗೆ ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಮಾರಂಭ -ಮಧ್ಯಾಹ್ನ 3.15 ಕ್ಕೆ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟ ಹೆಲಿಪ್ಯಾಡ್ ನಿಂದ ಬೇಸ್ ಹೆಲಿಪ್ಯಾಡ್ ಗೆ ಪ್ರಯಾಣ -ಮಧ್ಯಾಹ್ನ 3.40 ಕ್ಕೆ ಬೇಸ್ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 3.45 ರಿಂದ ಸಂಜೆ 4.30 ರವರೆಗೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ, ಬೇಸ್ ಯುನಿವರ್ಸಿಟಿ ಉದ್ಘಾಟನೆ ಮತ್ತು ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐಗಳ ಲೋಕಾರ್ಪಣೆ -ಸಂಜೆ 4.30 ರಿಂದ 4.45 ವರೆಗೆ ಕಾಯ್ದಿರಿಸಲ್ಪಟ್ಟ ಸಮಯ -ಸಂಜೆ 5 ಗಂಟೆಗೆ ಬೇಸ್ ಹೆಲಿಪ್ಯಾಡ್ ನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ -ಸಂಜೆ 5.50 ಕ್ಕೆ ಮೈಸೂರಿಗೆ ಆಗಮನ -ಸಂಜೆ 6 ಗಂಟೆಯಿಂದ 7.15 ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ -ರಾತ್ರಿ 7.30 ರಿಂದ 8 ಗಂಟೆಯವರೆಗೆ ಸುತ್ತೂರು ಮಠದಲ್ಲಿ ಕಾರ್ಯಕ್ರಮ -ರಾತ್ರಿ 8.15 ರಿಂದ 8.30 ರವರೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ -ರಾತ್ರಿ 8.55 ಕ್ಕೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ
ಜೂನ್ 21ರ ವೇಳ ಪಟ್ಟಿ -ಜೂನ್ 21 ಬೆಳಗ್ಗೆ 6.30ಕ್ಕೆ ಖಾಸಗಿ ಹೋಟೆಲ್ ನಿಂದ ಮೈಸೂರು ಅರಮನೆ ಮೈದಾನಕ್ಕೆ ಆಗಮನ -ಬೆಳಗ್ಗೆ 6.30 ರಿಂದ 7.45 ರವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ -7.45 ರಿಂದ 8 ಗಂಟೆಯವರೆಗೆ ಕಾಯ್ದಿರಿಸಲ್ಪಟ್ಟ ಸಮಯ -8 ಗಂಟೆಯಿಂದ 8.20 ರವರೆಗೆ ಪ್ರದರ್ಶನ ವೀಕ್ಷಣೆ -8.30 ರಿಂದ 9 ಗಂಟೆಯವರೆಗೆ ಮೈಸೂರು ಅರಮನೆಗೆ ಭೇಟಿ -9.20ಕ್ಕೆ ಮೈಸೂರು ಏರ್ ಪೋರ್ಟ್ ನಿಂದ ದೆಹಲಿಗೆ ನಿರ್ಗಮನ.
ಮೋದಿ ಆಗಮನಕ್ಕೆ ವಿಮಾನ ನಿಲ್ದಾಣ ಬಳಿ ಮರಗಳಿಗೆ ಕೊಡಲಿ ಪೆಟ್ಟು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ನಂಜನಗೂಡು ರಸ್ತೆಯ ಮರಗಳಿಗೆ ಕುತ್ತು ಎದುರಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ಬೆಳೆದು ನಿಂತಿರುವ ಮರಗಳನ್ನು ಕತ್ತರಿಸಲಾಗುತ್ತಿದೆ. 2 ದಿನದ ಕಾರ್ಯಕ್ರಮಕ್ಕಾಗಿ ಹತ್ತಾರು ವರ್ಷಗಳಿಂದ ಬೆಳೆದಿರುವ ಮರಗಳ ಹನನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ ಹೊರ ಹಾಕಿದ್ದಾರೆ.
ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:45 pm, Fri, 17 June 22