Yoga utsav 2022: ಯೋಗ ಎಂಬ ಅಮೂಲ್ಯ ಗಣಿಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ ಸಚಿವ ಪ್ರಲ್ಹಾದ್ ಜೋಶಿ ಸಾರಥ್ಯದ ಕೇಂದ್ರ ಗಣಿ ಇಲಾಖೆ!

TV9kannada Web Team

TV9kannada Web Team | Edited By: sadhu srinath

Updated on: Jun 17, 2022 | 2:11 PM

Yoga utsav 2022: ಯೋಗ ಬಲ್ಲವನಿಗೆ ರೋಗ ಇಲ್ಲ. ಯೋಗ ನಮ್ಮ ಮಾನಸಿಕ ಸದೃಢತೆ ಹೆಚ್ಚಿಸೋದಿಕ್ಕೂ ಸಹಕಾರಿ. ಆರೋಗ್ಯ‌ಪೂರ್ಣ ಬದುಕಿಗಾಗಿ ಯೋಗ ಅನ್ನುವ ಕಾನ್ಸೆಪ್ಟ್‌ನಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ‌ಗಳ ಇಲಾಖೆಯು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಯೋಗೋತ್ಸವ‌ವನ್ನು ನಡೆಸುತ್ತಿದೆ.

Yoga utsav 2022: ಯೋಗ ಎಂಬ ಅಮೂಲ್ಯ ಗಣಿಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ ಸಚಿವ ಪ್ರಲ್ಹಾದ್ ಜೋಶಿ ಸಾರಥ್ಯದ ಕೇಂದ್ರ ಗಣಿ ಇಲಾಖೆ!
ಯೋಗವೆಂಬ ಬೆಲೆ ಕಟ್ಟಲಾಗದ ಅಮೂಲ್ಯ ಗಣಿಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ ಜೋಶಿ ನೇತೃತ್ವದ ಕೇಂದ್ರ ಗಣಿ ಇಲಾಖೆ!

ವಿಶ್ವಕ್ಕೆ ಯೋಗವನ್ನು, ಅದರಿಂದ ಆಗೋ ಉಪಯೋಗವನ್ನು ಪರಿಚಯಿಸಿದ್ದು ಹಿಂದೂಸ್ಥಾನ. ಈ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸೋದಿಕ್ಕೆ ಆರಂಭ ಮಾಡಿದ ನಂತ್ರ ‘ಯೋಗ’ಕ್ಕೇ ಶುಭಯೋಗ ಬಂದಿದೆ. ಯೋಗ ಎಲ್ಲರನ್ನೂ ತಲುಪುತ್ತಾ ಬಂದಿರೋದು ನಿಜಕ್ಕೂ ಸಂತಸದ ವಿಷಯ. ಜೂನ್ 21 ನ್ನು 2015 ರಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ‌ಲ್ಲಿ ಅಂತರಾಷ್ಟ್ರೀಯ ಯೋಗ ದಿನ ಅಂತ ಘೋಷಣೆ ಮಾಡಲಾಗುತ್ತೆ. ಅಲ್ಲಿಂದ ಇಲ್ಲಿವರೆಗೆ ಭಾರತೀಯರ ಜೊತೆಗೆ, ವಿದೇಶಿಗರೂ ಕೂಡಾ ಜೂನ್ 21 ನ್ನು ಯೋಗ ದಿನಾಚರಣೆ ಅಂತ ಆಚರಿಸಿಕೊಂಡು ಬರ್ತಾ ಇರೋದು ನಮ್ ದೇಶಕ್ಕೆ ಹೆಚ್ಚಿನ ಗೌರವ, ಹಿರಿಮೆ ತಂದ್ಕೊಟ್ಟಿದೆ. ಅವತ್ತು ದೇಶದ ಹಲವೆಡೆ, ವಿದೇಶಗಳಲ್ಲಿಯೂ ಸಾರ್ವಜನಿಕ‌ವಾಗಿ ಯೋಗ ಮಾಡೋದು, ಯೋಗದಿಂದ ಜೀವನ ಹೇಗೆ ಆರೋಗ್ಯಪೂರ್ಣ ಆಗುತ್ತೆ ಅಂತ ಜನರಿಗೆ ಮನವರಿಕೆ ಮಾಡೋದು ಮೊದಲಾದ ಕೆಲಸಗಳು ನಡೀತಾ ಇರೋದನ್ನು ನಾವು ಕಾಣ್ಬಹುದು.

ಇನ್ನು ಈ ಬಾರಿಯ ಯೋಗ ದಿನಾಚರಣೆ ಅಂಗವಾಗಿ ಕಳೆದ ಮೇ 25 ರಿಂದಾನೇ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ‌ಗಳ ಇಲಾಖೆಯ ವತಿಯಿಂದ ಯೋಗೋತ್ಸವ ಅನ್ನೋ ಕಾರ್ಯಕ್ರಮವನ್ನ ಕಳೆದ ಮೇ 25 ರಂದೇ ಆರಂಭಿಸಿ ನಿರಂತರವಾಗಿ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. Ministry of mines (https://www.mines.gov.in/) ನ ಸಾಮಾಜಿಕ ಜಾಲತಾಣಗಳ ವೇದಿಕೆ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ‌ವನ್ನು ಆರಂಭ ಮಾಡಲಾಗಿದ್ದು, ಈಗಾಗಲೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸ್ತಾ ಇರುವ ಅಧಿಕಾರಿಗಳು, ಸಿಬ್ಬಂದಿ‌ಗಳು ಯೋಗ ಮಾಡೋ ಮೂಲಕ ಭರ್ಜರಿ ಆರಂಭ ಕೂಡಾ ಮಾಡಿ ನಂತರ ಇಲಾಖೆಯ ಸಾಮಾಜಿಕ ಜಾಲತಾಣಗಳ ಮೂಲಕವೂ ಯೋಗ ಸಂದೇಶ ಪಸರಿಸುವ ಕೆಲಸ ಮಾಡ್ತಿದ್ದಾರೆ.

=20&t=ObtFS0J-oLLSeYyyX7sO6g

ಯೋಗ ಬಲ್ಲವನಿಗೆ ರೋಗ ಇಲ್ಲ. ಹಲವು ರೋಗಗಳಿಂದ ಯೋಗಪಟು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬಲ್ಲ. ಯೋಗ ನಮ್ಮ ಮಾನಸಿಕ ಸದೃಢತೆಯನ್ನು ಹೆಚ್ಚಿಸೋದಿಕ್ಕೂ ಸಹಕಾರಿ. ಆರೋಗ್ಯ‌ಪೂರ್ಣ ಬದುಕಿಗಾಗಿ ಯೋಗ ಅನ್ನುವ ಕಾನ್ಸೆಪ್ಟ್‌ನ ಅಡಿಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ‌ಗಳ ಇಲಾಖೆ ಈ ಯೋಗೋತ್ಸವ‌ವನ್ನು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ನಡೆಸುತ್ತ ಯೋಗ ಜಾಗೃತಿ ಮೂಡಿಸುತ್ತಿರುವುದು ಇಲಾಖೆಯ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ ಎನ್ನಬಹುದು.

ಯೋಗವನ್ನು ಜೀವನದ ಭಾಗವನ್ನಾಗಿಸಲು ಇಲಾಖೆಯ ಈ ಕ್ರಮ ಜನರಿಗೆ ದಾರಿದೀಪವಾಗಲಿದೆ. ಹಲವು ಜನರಿಗೆ ಯೋಗದ ಮಹತ್ವ ಈ ಯೋಗೋತ್ಸವ‌ದಿಂದ ಅರಿವಾಗುವುದರಲ್ಲಿ ಎರಡು ಮಾತಿಲ್ಲ. ಯೋಗವನ್ನು ಜಗದ್ವಿಖ್ಯಾತಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ಯೋಜನೆಗೆ, ಪ್ರಲ್ಹಾದ ಜೋಶಿ ನೇತೃತ್ವದ‌ಲ್ಲಿ ನಡೀತಾ ಇರುವ ‘ಯೋಗೋತ್ಸವ’ (Yoga utsav 2022) ಮತ್ತಷ್ಟು ಸಹಕಾರಿ ಆಗಲಿದೆ, ಮತ್ತಷ್ಟು ಜನರನ್ನು ದೈನಂದಿನ ಬದುಕಿನಲ್ಲಿ ಯೋಗ ಮಾಡುವಂತೆ ಪ್ರೇರೇಪಿಸಲಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಜನರನ್ನು ಯೋಗಕ್ಕೆ ಸಂಬಂಧಿಸಿದಂತೆ ಶಿಕ್ಷಿತರನ್ನಾಗಿಸುತ್ತಿರುವ ಭಾರತ ಸರ್ಕಾರಕ್ಕೆ, ಕೇಂದ್ರ ಗಣಿ ಇಲಾಖೆಗೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಸಾರ್ವಜನಿಕರಿಂದ ಹ್ಯಾಟ್ಸ್​ ಆಫ್​!

ಇದನ್ನೂ ಓದಿ:

TV9 Global Summit 2022: ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ: ಸಿಎಂ ಬಸವರಾಜ ಬೊಮ್ಮಾಯಿ

TV9 Global Summit 2022: ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದು ಕಲಿಯಬೇಕು: ಸಚಿವ ನಿತಿನ್ ಗಡ್ಕರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada