TV9 Global Summit 2022: ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ: ಸಿಎಂ ಬಸವರಾಜ ಬೊಮ್ಮಾಯಿ

ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಟಿವಿ9 ನೆಟ್​ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ What India Thinks Today Global Summit 2022: ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಆರ್ಥಿಕತೆ ಎಂದಾಕ್ಷಣ ಜನರ ಮನಸ್ಸಿಗೆ ಬರುವುದು ಹಣ, ಆದರೆ ಆರ್ಥಿಕತೆ ಹೆಚ್ಚಳಕ್ಕೆ ಮಾನವನ ಶಕ್ತಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ ಎಂದರು.

TV9 Global Summit 2022: ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ: ಸಿಎಂ ಬಸವರಾಜ ಬೊಮ್ಮಾಯಿ
Basavaraj Bommai
Follow us
| Updated By: ನಯನಾ ರಾಜೀವ್

Updated on:Jun 17, 2022 | 1:21 PM

ನವದೆಹಲಿ: ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಟಿವಿ9 ನೆಟ್​ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಆರ್ಥಿಕತೆ ಎಂದಾಕ್ಷಣ ಜನರ ಮನಸ್ಸಿಗೆ ಬರುವುದು ಹಣ, ಆದರೆ ಆರ್ಥಿಕತೆ ಹೆಚ್ಚಳಕ್ಕೆ ಮಾನವನ ಶಕ್ತಿ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್ಥಿಕತೆ ಎಂದರೆ ಹಣವಲ್ಲ, ಮಾನವ ಶಕ್ತಿ ಎಂದರು.

ಅಮಿತ್ ಶಾ ನೀಡಿರುವ ಮಿಷನ್ 150 ಕುರಿತು ಈಗಲೇ ಕೆಲಸ ಶುರು ಮಾಡಿದ್ದೇವೆ, ಮಾರ್ಚ್​ನಲ್ಲಿ ನೀಡಿರುವ ಬಜೆಟ್​ ಘೋಷಣೆಯನ್ನು ಕಾರ್ಯರೂಪಕ್ಕೆ ತರಬೇಕು. ನವಭಾರತಕ್ಕಾಗಿ ನವಕರ್ನಾಟಕ ಇದಕ್ಕಾಗಿ ಎಸ್​ಸಿಎಸ್​ಟಿ ಮಹಿಳೆಯರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪಠ್ಯಕ್ರಮದ ಬಗ್ಗೆ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಸರ್ಕಾರವು ಓಪನ್​ಮೈಂಡೆಡ್ ಸರ್ಕಾರ, ಯಾವುದೇ ಗೊಂದಲವಿದ್ದರೂ ಸರ್ಕಾರದ ಬಳಿ ಜನರು ಮುಕ್ತವಾಗಿ ಮಾತನಾಡಬಹುದು. ಮಕ್ಕಳಿಗೆ ಈಗ ಯಾವುದೇ ವಿಷಯಗಳಾದರೂ ಇಂಟರ್​ನೆಟ್ ಮೂಲಕ ಸುಲಭವಾಗಿ ಲಭ್ಯವಾಗುತ್ತದೆ ಎಂದರು.

ಕರ್ನಾಟಕದಲ್ಲಿ ಈ ಹಿಂದೆ ಸಮಾಜ ವಿರೋಧಿಗಳು ಸೃಷ್ಟಿಸಿದ ಗಲಾಟೆಗಳ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಮಾತನಾಡಿ ಅವುಗಳನ್ನು ಕಾನೂನುಬದ್ಧವಾಗಿ ಎದುರಿಸಲಾಗಿದೆ ಎಂದು ಹೇಳಿದರು. ಕರ್ನಾಟಕದ ಮನಸ್ಥಿತಿ ಶಾಂತಿಪ್ರಿಯವಾದ್ದು. ಇಂತಹ ಸಮಾಜ ವಿರೋಧಿ ಶಕ್ತಿಗಳು ಬೆಳೆಯಲು ಬಿಡುವುದಿಲ್ಲ ಮತ್ತು ಇದು ರಾಜ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಸೆಮಿಕಂಡಕ್ಟರ್ ಕೊರತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಮಿಕಂಡಕ್ಟರ್ ಗಳನ್ನು ತಯಾರಿಸಲು ಎಂಒಯುಗೆ ಸಹಿ ಹಾಕಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ರಾಜ್ಯ ಪಾತ್ರವಾಗಿದೆ ಮತ್ತು ಈಗ ಇಲ್ಲಿ ಅರೆವಾಹಕಗಳನ್ನು ತಯಾರಿಸಲಾಗುವುದು. ಇದು ನೇರವಾಗಿ ದೆಹಲಿಗೆ ಸಂಬಂಧಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಈ ನೀತಿ ಮಾಡಲಾಗಿದೆ.

ಕರ್ನಾಟಕದ ಇತಿಹಾಸ ಅತ್ಯಂತ ಶ್ರೀಮಂತವಾಗಿದೆ. ನಮ್ಮಲ್ಲಿ ತಂತ್ರಜ್ಞಾನವಿದೆ. ನಾವು ಉತ್ಪಾದನೆ, ಏರೋಸ್ಪೇಸ್ ಇತರೆ ಸೌಕರ್ಯ ಹೊಂದಿದ್ದೇವೆ, ಅದು ಭಾರತದ ಆರ್ಥಿಕತೆಗೆ ಕೊಡುಗೆ ನೀಡಬಹುದು. ಕರ್ನಾಟಕವು ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. 400 ಹೈಟೆಕ್ ಅಂತರಾಷ್ಟ್ರೀಯ ಕೇಂದ್ರಗಳಿವೆ. ರಾಜ್ಯದಲ್ಲಿ ಸದ್ದುಗದ್ದಲವಿಲ್ಲದೆ ಸಾಕಷ್ಟು ಕೆಲಸಗಳು ನಡೆಯುತ್ತಿವೆ.

500 ಫಾರ್ಚೂನ್ ಕಂಪನಿಗಳಲ್ಲಿ 400 ಕರ್ನಾಟಕದಲ್ಲಿವೆ. ನಾವು ಹೆಚ್ಚುತ್ತಿರುವ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ನಾವು ಹಲವು ರಂಗಗಳಲ್ಲಿ ಮುಂದಿದ್ದೇವೆ. ಉದಾಹರಣೆಗೆ, ಕೃಷಿ, ಐಟಿ, ಡಿಆರ್‌ಡಿಒ, ಏರೋಸ್ಪೇಸ್ ಮತ್ತು ಸ್ಟಾರ್ಟ್‌ಅಪ್‌ಗಳು. ಜಗತ್ತು ನಮ್ಮನ್ನು ಗಮನಿಸುತ್ತಿದೆ, ನಾವು ಕರ್ನಾಟಕವನ್ನು ಇನ್ನಷ್ಟು ಸಮೃದ್ಧಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಭಾರತದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಕರ್ನಾಟಕ ಸಹಾಯ ಮಾಡುತ್ತದೆ.

Published On - 1:20 pm, Fri, 17 June 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ