TV9 Global Summit 2022: ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದು ಕಲಿಯಬೇಕು: ಸಚಿವ ನಿತಿನ್ ಗಡ್ಕರಿ

ನನಗೂ ಅಡೆತಡೆಗಳ ಕೊರತೆ ಇಲ್ಲ, ಆದರೆ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದನ್ನು ಕಲಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಟಿವಿ9 ನೆಟ್​ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೂ ಸಾಕಷ್ಟು ಅಡೆತಡೆಗಳಿವೆ ಆದರೆ ಯಾವುದಕ್ಕೂ ಹೆದರಬಾರದು

TV9 Global Summit 2022: ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದು ಕಲಿಯಬೇಕು: ಸಚಿವ ನಿತಿನ್ ಗಡ್ಕರಿ
Nitin Gadkari
Follow us
TV9 Web
| Updated By: ನಯನಾ ರಾಜೀವ್

Updated on: Jun 17, 2022 | 12:09 PM

ನನಗೂ ಅಡೆತಡೆಗಳ ಕೊರತೆ ಇಲ್ಲ, ಆದರೆ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದನ್ನು ಕಲಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಟಿವಿ9 ನೆಟ್​ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೂ ಸಾಕಷ್ಟು ಅಡೆತಡೆಗಳಿವೆ ಆದರೆ ಯಾವುದಕ್ಕೂ ಹೆದರಬಾರದು, ಆದರೆ ಸಮಸ್ಯೆಗಳನ್ನು ಅವಕಾಶವನ್ನಾಗಿ ಪರಿವರ್ತಿಸುವ ಬದಲು ಜನರು ಅವಕಾಶಗಳನ್ನೇ ಸಮಸ್ಯೆಗಳನ್ನಾಗಿ ಪತಿವರ್ತಿಸಿಕೊಳ್ಳುತ್ತಿದ್ದಾರೆ ಎಂದರು.

ಕೊರತೆ ಇರುವ ಕಡೆ ಕೆಲಸ ಮಾಡುತ್ತೇವೆ, ರಫ್ತು ಕಡಿಮೆ ಮಾಡುತ್ತೇವೆ, ಮುಂದೆ ಸಾಗಿ ಗೆಲ್ಲುತ್ತೇವೆ ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ, ಗಡ್ಕರಿ ಅವರು 18 ನೇ ಶತಮಾನವು ಮೊಘಲ್ ಸುಲ್ತಾನರ, 19 ನೇ ಶತಮಾನ ಯೂನಿಯನ್ ಜ್ಯಾಕ್, 20 ನೇ ಶತಮಾನ ಅಮೆರಿಕ ಮತ್ತು 21 ನೇ ಶತಮಾನ ಭಾರತದದ್ದಾಗಿದೆ ಎಂದು ಹೇಳಿದರು.

ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತು ಕೇಂದ್ರ ಸಚಿವ ಗಡ್ಕರಿ ಅವರು ಮಾತನಾಡಿ, ಇದು ಉದ್ಯೋಗವನ್ನು ತೆಗೆದುಹಾಕುವ ಯೋಜನೆಯಲ್ಲ, ಉದ್ಯೋಗವನ್ನು ಹೆಚ್ಚಿಸುವ ಯೋಜನೆಯಾಗಿದೆ. ನಾನು ಅದನ್ನು ಸಂಪೂರ್ಣವಾಗಿ ಓದಿದ್ದೇನೆ ಮತ್ತು ಇದು ತುಂಬಾ ಒಳ್ಳೆಯ ಯೋಜನೆಯಾಗಿದೆ. ಇನ್ನು 4 ವರ್ಷದಲ್ಲಿ ಯಾರ ಕೆಲಸವೂ ಮುಗಿಯುವುದಿಲ್ಲ, ಅದನ್ನು ಮೊದಲು ಜನರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, ದೇಶದಲ್ಲಿ ಇಥೆನಾಲ್ ತಯಾರಿಸಲು ಸಿದ್ಧತೆ ನಡೆದಿದೆ. ಪೆಟ್ರೋಲ್ ದರಕ್ಕಿಂತ ಅರ್ಧದಷ್ಟು ಬೆಲೆಗೆ ಇಥೆನಾಲ್ ದೊರೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಇಥೆನಾಲ್ ಬಳಕೆಯಿಂದ ಮಾಲಿನ್ಯವೂ ಕಡಿಮೆಯಾಗಲಿದೆ. ಒಂದು ಲೀಟರ್ ಪೆಟ್ರೋಲ್ ಒಂದು ಲೀಟರ್ ಇಥೆನಾಲ್​ಗೆ ಸಮನಾಗಿರುತ್ತದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಾಗುತ್ತಿದೆ. 80 ರೂ,ಗೆ ಒಂದು ಲೀಟರ್ ಇಥೆನಾಲ್ ದೊರೆಯಲಿದೆ.

ದೆಹಲಿ ಜನರ ಬಗ್ಗೆ ನನಗೆ ಬೇಸರವಿದೆ, ದೊಡ್ಡ ದೊಡ್ಡ ಮನೆಯನ್ನು ನಿರ್ಮಾಣ ಮಾಡುತ್ತಾರೆ, ಇಂತಹ ದೊಡ್ಡ ಮನೆಗಳನ್ನು ನಿರ್ಮಾಣ ಮಾಡುವವರು ಮನೆಯ ಕೆಳಗಡೆ ನಾಲ್ಕು ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಏಕೆ ಮಾಡುವುದಿಲ್ಲ. ಹಾಗಾಗಿ ಕಾನೂನು ಉಲ್ಲಂಘಿಸಿ ರಸ್ತೆಯಲ್ಲಿ ನಿಲ್ಲಿಸಿದ ಕಾರುಗಳ ಫೋಟೋವನ್ನು ನೀಡಿ ಹಣ ಪಡೆಯಿರಿ ಎಂಬುದನ್ನು ಜಾರಿಗೆ ತರಲಾಗಿತ್ತು ಎಂದರು.

ರಸ್ತೆಯಲ್ಲಿ ಹೋಗಲು 10 ರೂಪಾಯಿ, ರೈಲಿನಲ್ಲಿ ಹೋಗಲು 6 ರೂಪಾಯಿ ತೆಗೆದುಕೊಂಡರೆ, ಜಲಮಾರ್ಗದಲ್ಲಿ ಹೋಗಲು ಕೇವಲ 1 ರೂಪಾಯಿ ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜಲಮಾರ್ಗಗಳು ಬಹಳ ಮುಖ್ಯ.

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ