Trending: ಭಾರಿ ಟ್ರೆಂಡಿಂಗ್ ಆಗುತ್ತಿದೆ ಪ್ರಧಾನಿ ಮೋದಿ ರಾಜೀನಾಮೆ ಹ್ಯಾಶ್‌ಟ್ಯಾಗ್, ಯಾಕೆ ಗೊತ್ತಾ?
ಗುರುವಾರ ಆರಂಭವಾದ #ModiMustResign ಎಂಬ ಹ್ಯಾಶ್‌ಟ್ಯಾಗ್ ಇನ್ನೂ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕಾರಣಗಳಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಅಗ್ನಿಪಥ್ ಯೋಜನೆ ಕೂಡ ಒಂದಾಗಿದೆ.
ಶ್ರೀಲಂಕಾ, ಅದಾನಿ ಸಮಸ್ಯೆಯ ಮೇಲೆ ಆರಂಭವಾಗಿದ್ದ #ModiMustResign ಹ್ಯಾಶ್‌ಟ್ಯಾಗ್, ಇದೀಗ ಮತ್ತೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜೀನಾಮೆ(Resign)ಯ ಹ್ಯಾಶ್‌ಟ್ಯಾಗ್ (Hashtag) ಬಳಸಿ ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಗುರುವಾರ ಆರಂಭವಾದ #ModiMustResign ಎಂಬ ಹ್ಯಾಶ್‌ಟ್ಯಾಗ್ ಇನ್ನೂ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರ ಜಾರಿ ಮಾಡಿದ ಅಗ್ನಿಪಥ್ ಯೋಜನೆ ಕೂಡ ರಾಜೀನಾಮೆ ಒತ್ತಾಯದ ಕಾರಣಗಳಲ್ಲಿ ಒಂದಾಗಿದೆ.
ಅಗ್ನಿಪಥ್ ಯೋಜನೆ ಬಗ್ಗೆ ನೆಟ್ಟಿಗರು ಹಾಗೂ ಸೇನಾ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ವಿರೋಧಿಸಿ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಸರ್ಕಾರದ ವಿರುದ್ಧ ಆಂದೋಲನಗಳು ಮತ್ತು ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಆಂದೋಲನದ ವಿಡಿಯೋ ಹಂಚಿಕೊಂಡ ನೆಟ್ಟಿಗರೊಬ್ಬರು, “ಸರ್ಕಾರ ತೆಗೆದುಕೊಂಡ ಕೆಟ್ಟ ಹೆಜ್ಜೆ. ಲಕ್ಷಗಟ್ಟಲೆ ಯುವಕರ ಬದುಕನ್ನು ಹಾಳುಮಾಡಿದೆ” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಮೋದಿಯ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು, “ಈಗ ಆಂಧಭಕ್ತರು, ‘ಮೋದಿಜಿ ನೆ ಕಿಯಾ ಹೈ ತೋ ಸೋಚ್ ಸಮಾಜ್ ಕರ್ ಕಿಯಾ ಹೋಗಾ‘ ಎಂದು ಹೇಳುತ್ತಾರೆ ಎಂಬ ಪೋಸ್ಟರ್ ಹಂಚಿಕೊಂಡಿದ್ದಾರೆ.
ಮತ್ತೆ ಕೆಲವರು ಇಂಧನ ಬೆಲೆ ಏರಿಕೆ, ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಪೋಸ್ಟರ್ ಹಂಚಿಕೊಂಡು ಮೋದಿ ರಾಜೀನಾಮೆ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ. ಇದನ್ನೂ ಓದಿ: International Coastal Cleanup Day: ದೇಶಾದ್ಯಂತ 75 ದಿನಗಳಲ್ಲಿ 75 ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ
The worst step taken by government.Destroyed life of lakh's of young boys??#ModiMustResign#अग्निवीर #boycottangnipath pic.twitter.com/zhYpLdJJ1N
— FARMER??? (@imtaara) June 16, 2022
Now andhbhakts will say this..?#अग्निवीर #ModiMustResign #AgnipathRecruitmentScheme #IndianArmy pic.twitter.com/3DWseB3FUV
— Shubham Pandey?? (@ssspanday50) June 17, 2022
ಏನಿದು ಅಗ್ನಿಪಥ್ ಯೋಜನೆ?
ಭಾರತೀಯ ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಅಗ್ನಿಪಥ್ ಎಂಬ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಘೋಷಿಸಿದ್ದರು. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ‘ಅಗ್ನಿವರ್ಸ್ ಎಂದು ಕರೆಯಲಾಗುತ್ತದೆ. ‘ಅಗ್ನಿವರ್ಸ್’ನ ಅಧಿಕಾರಾವಧಿ ನಾಲ್ಕು ವರ್ಷ ಆಗಿರಲಿದ್ದು, ಸೇವೆಯ ಕೊನೆಯಲ್ಲಿ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುತ್ತದೆ.
ಆದಾಗ್ಯೂ ಯೋಜನೆ ಘೋಷಣೆಯ ನಂತರ, ಬಿಹಾರ, ರಾಜಸ್ಥಾನ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಸೇನೆಗೆ ಸೇರಬೇಕೆಂಬ ಕನಸು ಹೊತ್ತುಕೊಂಡಿರುವ ಅಭ್ಯರ್ಥಿಗಳಿಂದ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಬಿಹಾರದ ಹಲವು ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗಿತ್ತಿದೆ.
ಇದನ್ನೂ ಓದಿ: Agnipath Protest: ಅಗ್ನಿಪಥ್ ಯೋಜನೆಗೆ ವಿರೋಧ; ಬಿಹಾರದಲ್ಲಿ 2 ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
ಪ್ರತಿಪಕ್ಷಗಳು ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಟೀಕಿಸಿ ತರಾಟೆಗೆ ತೆಗೆದುಕೊಂಡಿವೆ. ಈ ಯೋಜನೆಯು ಬಹು ಅಪಾಯಗಳನ್ನು ಹೊಂದಿದೆ ಮತ್ತು ಸಶಸ್ತ್ರ ಪಡೆಗಳ ದೀರ್ಘಕಾಲದ ಸಂಪ್ರದಾಯಗಳು ಮತ್ತು ನೀತಿಗಳನ್ನು ಬುಡಮೇಲು ಮಾಡುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆ ಮತ್ತು ಆಂದೋಲನ ಭುಗಿಲೆದ್ದ ಬೆನ್ನಲ್ಲೆ ಕೇಂದ್ರವು ಗುರುವಾರ ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ಏರಿಸಿದೆ. ”ಕಳೆದ ಎರಡು ವರ್ಷಗಳಲ್ಲಿ ನೇಮಕಾತಿಯನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಅರಿತು 2022ಕ್ಕೆ ಪ್ರಸ್ತಾವಿತ ನೇಮಕಾತಿಗೆ ಒಂದು ಬಾರಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ