ಏಜ್ ಈಸ್ ಜಸ್ಟ್ ಎ ನಂಬರ್: ಫುಟ್ಬಾಲ್ ಬ್ಯಾಲೆನ್ಸ್ ಮಾಡಿದ 64 ವರ್ಷದ ವೃದ್ಧ! ವಿಡಿಯೋ ವೈರಲ್
ತಲೆಯಲ್ಲಿ ಅಲ್ಪ ಸ್ವಲ್ಪ ಬಿಳಿ ಕೂದಲು, ಗಾಂಭೀರ್ಯತೆ ಮೆರೆಯಲು ಬಿಳಿ ಮೀಸೆ. ಇಂಥ ವಯಸ್ಸಿನಲ್ಲೂ ಫುಟ್ಬಾಲ್ ಕೌಶಲ್ಯ ಪ್ರದರ್ಶನ ಮಾಡಿದ 64 ವರ್ಷದ ವೃದ್ಧನ ಉತ್ಸಾಹಭರಿತ ವಿಡಿಯೋ ವೈರಲ್ ಆಗುತ್ತಿದೆ.
ತಲೆಯಲ್ಲಿ ಅಲ್ಪ ಸ್ವಲ್ಪ ಬಿಳಿ ಕೂದಲು, ಗಾಂಭೀರ್ಯತೆ ಮೆರೆಸುವಂತಿರುವ ಮೀಸೆ, ವಯಸ್ಸು 64. ಆದರೂ ಉತ್ಸಾಹ ಭರಿತ ಜೀವನ, ಇವರ ಉತ್ಸಾಹದ ಎದುರು ವಯಸ್ಸು ಕೇವಲ ಸಂಖ್ಯೆಯಷ್ಟೆ. ಜೀವನದಲ್ಲಿ ಉತ್ಸಾಹ ಒಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ವೃದ್ಧನೇ ಸಾಕ್ಷಿ. ಫುಟ್ಬಾಲ್ ಅನ್ನು ಬ್ಯಾಲೆನ್ಸ್ ಮಾಡುತ್ತಿರುವ ಕೇರಳ ಮೂಲದ ಈ ವೃದ್ಧನ ವಿಡಿಯೋ ಜೀವನದಲ್ಲಿ ನಮ್ಮಿಂದ ಏನೂ ಕಿಸಿಯಲು ಸಾಧ್ಯವಿಲ್ಲ, ನಮ್ಮಿಂದ ಇದಾಗದು ಎಂದು ಅಂದುಕೊಂಡಿರುವ ವ್ಯಕ್ತಿಗಳಿಗೆ ಜ್ಞಾನೋದಯ ಮಾಡಿದರೂ ಆಶ್ವರ್ಯಪಡಬೇಕಿಲ್ಲ.
ಇದನ್ನೂ ಓದಿ: Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ
ಯಾರೇ ಆಗಲಿ ಒಬ್ಬ ವ್ಯಕ್ತಿ ಸಾಮರ್ಥ್ಯವನ್ನು ಅವರ ವಯಸ್ಸಿನಿಂದ ಅಳೆಯಬಾರದು. ಏಕೆಂದರೆ ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಸಾಮರ್ಥ್ಯ, ಕೌಶಲ್ಯವಿರುತ್ತದೆ. ಇದನ್ನು ವ್ಯಕ್ತಪಡಿಸಲು ವೇದಿಕೆಯ ಅವಶ್ಯಕತೆ ಇದೆ. ನಾವೀಗ ಹೇಳಲು ಹೊರಟಿರುವುದು ತಮ್ಮ ಅದ್ಭುತ ಫುಟ್ಬಾಲ್ ಕೌಶಲ್ಯದಿಂದ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿರುವ ಜನರ ಗಮನಸೆಳೆಯುಂತೆ ಮಾಡಿದ ಕೇರಳ ಮೂಲದ 64 ವರ್ಷದ ವೃದ್ಧನ ಕಥೆ.
ಇದನ್ನೂ ಓದಿ: Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್
ವೈರಲ್ ವಿಡಿಯೋ (Viral Video)ದಲ್ಲಿ, ಯೂಟ್ಯೂಬರ್ ಪ್ರದೀಪ್ ತನ್ನ ಫುಟ್ಬಾಲ್ ಕೌಶಲ್ಯವನ್ನು ತೋರಿಸುವುದರ ಮೂಲಕ ವಿಡಿಯೋ ಪ್ರಾರಂಭಿಸಿದ್ದಾರೆ. ನಂತರ ಆ ಬಾಲ್ ಅನ್ನು ಜೇಮ್ಸ್ ಅವರಿಗೆ ಪಾಸ್ ಮಾಡುತ್ತಾರೆ. ಅವರು ಕಾಲಿನಲ್ಲಿ ಫುಟ್ಬಾಲ್ ಅನ್ನು ಬ್ಯಾಲೆನ್ಸ್ ಮಾಡುತ್ತಾ ಹಾಗೇ ತಲೆಗೆ ಪಾಸ್ ಮಾಡುತ್ತಾರೆ. ನಂತರ ಕೆಲವು ಸೆಕೆಂಡ್ಗಳ ಕಾಲ ತಲೆ ಮೇಲೆ ಬಾಲ್ ನಿಲ್ಲಿಸುತ್ತಾರೆ. ಬಳಿಕ ಭುಜದಿಂದ ಬಾಲ್ ಮೇಲಕ್ಕೆ ಹಾರಿಸುತ್ತಾ ಮತ್ತೆ ಹಣೆ ಮೇಲೆ ಬ್ಯಾಲೆನ್ಸ್ ಮಾಡುವುದನ್ನು ಕಾಣಬಹುದು.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಭಾರಿ ವೈರಲ್ ಆಗಿ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಜೇಮ್ಸ್ ಅವರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ