AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agnipath Scheme Protest ಅಗ್ನಿಪಥ್ ಆಕ್ರೋಶ ತೀವ್ರ: ಸಿಕಂದರಾಬಾದ್​​​ನಲ್ಲಿ 1 ಸಾವು, 8 ಮಂದಿಗೆ ಗಾಯ; 200 ರೈಲುಗಳಿಗೆ ಹಾನಿ

ಆಕಾಂಕ್ಷಿಗಳು ಶುಕ್ರವಾರ ಸಮಸ್ತಿಪುರದ ಮೊಯಿಹುದ್ದೀನ್ ನಗರದಲ್ಲಿ ರೈಲಿನ ಆರು ಬೋಗಿಗಳಿಗೆ ಮತ್ತು ಲಖಿಸರಾಯ್ ನಿಲ್ದಾಣದಲ್ಲಿ ಮತ್ತೊಂದು ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.

Agnipath Scheme Protest ಅಗ್ನಿಪಥ್ ಆಕ್ರೋಶ ತೀವ್ರ: ಸಿಕಂದರಾಬಾದ್​​​ನಲ್ಲಿ 1 ಸಾವು, 8 ಮಂದಿಗೆ ಗಾಯ; 200 ರೈಲುಗಳಿಗೆ ಹಾನಿ
TV9 Web
| Edited By: |

Updated on:Jun 17, 2022 | 3:07 PM

Share

ದೆಹಲಿ: ಕೇಂದ್ರದ ಅಗ್ನಿಪಥ್ ನೇಮಕಾತಿ (Agnipath Scheme) ಯೋಜನೆಯ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಮೂರನೇ ದಿನವೂ ಪ್ರತಿಭಟನೆಗಳು (Protest) ಮುಂದುವರೆದಿದೆ. ಆಕಾಂಕ್ಷಿಗಳು ಶುಕ್ರವಾರ ಸಮಸ್ತಿಪುರದ ಮೊಯಿಹುದ್ದೀನ್ ನಗರದಲ್ಲಿ ರೈಲಿನ ಆರು ಬೋಗಿಗಳಿಗೆ ಮತ್ತು ಲಖಿಸರಾಯ್ ನಿಲ್ದಾಣದಲ್ಲಿ ಮತ್ತೊಂದು ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಎರಡೂ ಘಟನೆಗಳಲ್ಲಿ, ಪ್ರತಿಭಟನಾಕಾರರು ಬೋಗಿಗಳಿಗೆಬೆಂಕಿ ಹಚ್ಚುವ ಮೊದಲು ಅವುಗಳನ್ನು ಖಾಲಿ ಮಾಡಿದ್ದರಿಂದ ಯಾರಿಗೂ ಗಾಯವಾಗಿಲ್ಲ. ತೆಲಂಗಾಣ ಪೊಲೀಸರು ಸಿಕಂದರಾಬಾದ್ (Secunderabad) ರೈಲು ನಿಲ್ದಾಣದಲ್ಲಿ ಜನಸಮೂಹದ ಮೇಲೆ ಗುಂಡು ಹಾರಿಸಿದ್ದು ಓರ್ವ ವ್ಯಕ್ತಿ ಸಾವಿಗೀಡಾಗಿದ್ದು ಹಲವಾರು ಮಂದಿಗೆ ಗಾಯಗಳಾಗಿವೆ. ಶುಕ್ರವಾರ ಬೆಳಗ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನೂರಾರು ಯುವಕರು ಜಮಾಯಿಸಿ ಹೊಸ ನಾಲ್ಕು ವರ್ಷಗಳ ಸೇವಾ ಅವಧಿಯ ಬದಲಾಗಿ ದೀರ್ಘಾವಧಿಯ ಸೇನಾ ನೇಮಕಾತಿಗೆ ಒತ್ತಾಯಿಸಿದರು. ಪ್ರತಿಭಟನಾಕಾರರು ಆಕ್ರೋಶಗೊಂಡು, ಕನಿಷ್ಠ ನಾಲ್ಕು ರೈಲ್ವೇ ಕೋಚ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ದ್ವಿಚಕ್ರ ವಾಹನಗಳು, ಮರದ ಪೆಟ್ಟಿಗೆ, ಕಸದ ತೊಟ್ಟಿಗಳು ಮತ್ತು ರೈಲ್ವೇ ಹಮಾಲಿಗಳ ಚಕ್ರದ ಕೈಬಂಡಿಗಳಿಂದ ರೈಲು ಮಾರ್ಗಗಳನ್ನು ತಡೆದಿದ್ದಾರೆ. ಒಂದು ರೈಲಿಗೆ ಬೆಂಕಿ ಹಚ್ಚಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಭಟನಾಕಾರರು ಪ್ಲಾಟ್‌ಫಾರ್ಮ್ ಸಂಖ್ಯೆ 1 ಮತ್ತು 10 ರಲ್ಲಿನ ಕಚೇರಿಗಳನ್ನು ಹಾನಿಗೊಳಿಸಿದ್ದು, ಕಂಪ್ಯೂಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳನ್ನು ದೋಚಿದ್ದಾರೆ. ಎಲ್ಲಾ 10 ಪ್ಲಾಟ್‌ಫಾರ್ಮ್‌ಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳು, ಲೈಟ್‌ಗಳು ಮತ್ತು ಫ್ಯಾನ್‌ಗಳನ್ನು ನಾಶಪಡಿಸಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದರು. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿನ ಆಹಾರ ಮತ್ತು ಅನುಕೂಲಕ್ಕಾಗಿ ಅಂಗಡಿಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಯಿತು. ಪ್ರತಿಭಟನಾಕಾರರು ಎಲೆಕ್ಟ್ರಿಕ್ ಇಂಜಿನ್‌ಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ರೈಲ್ವೆ ಅಧಿಕಾರಿಗಳು ಇಡೀ ರೈಲು ನಿಲ್ದಾಣಕ್ಕೆ ವಿದ್ಯುತ್ ಕಡಿತಗೊಳಿಸಿದರು. ಪ್ರತಿಭಟನಾಕಾರರು ಅಜಂತಾ ಎಕ್ಸ್‌ಪ್ರೆಸ್, ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ಮತ್ತು ಎಂಎಂಟಿಎಸ್ ರೈಲಿಗೆ ಬೆಂಕಿ ಹಚ್ಚಿದ್ದಾರೆ.

ಗುಂಪನ್ನು ಚದುರಿಸಲು ಪೊಲೀಸರು ಕನಿಷ್ಠ 10 ಸುತ್ತು ಗುಂಡು ಹಾರಿಸಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ವಾರಂಗಲ್ ಮೂಲದ ದಾಮೋದರ್ ಕುಮಾರ್ ಎಂದು ಗುರುತಿಸಲಾಗಿದೆ. 8 ಮಂದಿ ಗಾಯಾಳು ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪ್ರಯಾಣಿಕರಿಗಿದ್ದ ಸಕಲ ಸೌಲಭ್ಯಗಳು, ರೈಲ್ವೆ ಅಧಿಕಾರಿಗಳ ಕ್ಯಾಬಿನ್‌ಗಳು ಮತ್ತು 10 ಪ್ಲಾಟ್‌ಫಾರ್ಮ್‌ಗಳಲ್ಲಿನ ಆಸ್ತಿಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ತುರ್ತು ಸಭೆ ಕರೆದಿದ್ದು, ಕನಿಷ್ಠ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ.

ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲುಗಳನ್ನು ಹತ್ತಿರದ ಇತರ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ನಿಲ್ದಾಣದಿಂದ ಹೊರಡಬೇಕಿದ್ದ ಇತರ ಎಲ್ಲ ರೈಲುಗಳು ತಡವಾಗಿ ಹೊರಡಲಿವೆ. ರೈಲಿಗಾಗಿ ಕಾಯುತ್ತಿದ್ದ ಸಾವಿರಾರು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಪೊಲೀಸರು  ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದ ನಂತರ, ಪ್ರತಿಭಟನಾಕಾರರು ಕೇಂದ್ರವು ಸೇನಾ ನೇಮಕಾತಿ ದಿನಾಂಕವನ್ನು ತಕ್ಷಣವೇ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಹೈದರಾಬಾದ್ ಪ್ರದೇಶದ ಇತರ ರೈಲು ನಿಲ್ದಾಣಗಳಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗಲಭೆ ತಡೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಹೈದರಾಬಾದ್ ಮೆಟ್ರೋ ರೈಲು ದಿನದ ಸೇವೆಗಳನ್ನು ರದ್ದುಗೊಳಿಸಿದೆ. ನಗರದಲ್ಲಿ ಕೆಲವು ಅಡಚಣೆಗಳಿಂದಾಗಿ, ಹೈದರಾಬಾದ್ ಮೆಟ್ರೋ ರೈಲು ನಿಲ್ದಾಣದ ಎಲ್ಲಾ ಮೂರು ಮಾರ್ಗಗಳಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರಯಾಣಿಕರಿಗೆ ತಿಳಿಸಲಾಗಿದೆ. ಪ್ರಯಾಣಿಕರು ಕಾಳಜಿ ವಹಿಸಲು ಮತ್ತು ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದೇ ಹೇಳಿಕೆಯಲ್ಲಿ ಹೇಳಲಾಗಿದೆ.

ಅಲಿಗಢದಲ್ಲಿ ರಸ್ತೆಮಾರ್ಗದ ಬಸ್ಸುಗಳಿಗೆ ಬೆಂಕಿ; ಬಲ್ಲಿಯಾದಲ್ಲಿ 100 ಜನರ ಬಂಧನ

ಅಲಿಘರ್‌ನ ತಪ್ಪಲ್ ಬಳಿ ರಸ್ತೆ ಮಾರ್ಗದ ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ 100 ಜನರನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಎರಡು ರೈಲುಗಳನ್ನು ಧ್ವಂಸವಾಗಿದ್ದು, ಕಲ್ಲು ತೂರಾಟ, ರೈಲಿನ ಕಂಪಾರ್ಟ್‌ಮೆಂಟ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಈ ಬಂಧನಗಳು ನಡೆದಿವೆ.

ಅಶ್ರುವಾಯು ಪ್ರಯೋಗ

ಅಗ್ನಿಪಥ್ ಆಂದೋಲನದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಪೊಲೀಸರು ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಕೆಲವು ವಾಹನಗಳು ಜಖಂಗೊಂಡಿವೆ, ಆದರೆ ಸಂಚಾರ ಸಂಚಾರ ಈಗ ಸಾಮಾನ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ ಬಿಜೆಪಿ ಮುಖ್ಯಸ್ಥನ ಮನೆ ಮೇಲೆ ದಾಳಿ

ಕೇಂದ್ರದ ಹೊಸ ‘ಅಗ್ನಿಪಥ’ ನೇಮಕಾತಿ ಯೋಜನೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೇ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಿಹಾರದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರ ಮನೆ ಮೇಲೆ ಶುಕ್ರವಾರ ದಾಳಿ ನಡೆದಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 2:23 pm, Fri, 17 June 22

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು