Kannada News National Agnipath scheme training of the first Agniveers would begin in December 2022
Agnipath scheme ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ಆಯ್ಕೆಯಾದವರಿಗೆ ಡಿಸೆಂಬರ್‌ನಲ್ಲಿ ತರಬೇತಿ ಆರಂಭ
ಎಎನ್‌ಐ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥರು, "ನೇಮಕಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗುವುದು..
ದೆಹಲಿ: ಮೊದಲ ಅಗ್ನಿವೀರ್ (Agniveer) ಅಥವಾ ಅಗ್ನಿಪಥ್ ನೇಮಕಾತಿ (Agnipath scheme) ಯೋಜನೆಯಡಿ ಆಯ್ಕೆಯಾದ ಜನರ ತರಬೇತಿಯು ಡಿಸೆಂಬರ್, 2022 ರಲ್ಲಿ ಪ್ರಾರಂಭವಾಗಲಿದೆ. ಅವರ ಸಕ್ರಿಯ ಸೇವೆಯು 2023 ರ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ (Manoj Pande) ಶುಕ್ರವಾರ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಎಎನ್‌ಐ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥರು, “ನೇಮಕಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗುವುದು. ಅದರ ನಂತರ ನಮ್ಮ ಸೇನಾ ನೇಮಕಾತಿ ಸಂಸ್ಥೆಗಳು ವಿವರವಾದ ವೇಳಾಪಟ್ಟಿಯನ್ನು ಘೋಷಿಸುತ್ತವೆ ಎಂದಿದ್ದಾರೆ.”ಅಗ್ನಿವೀರ್‌ಗಳು ನೇಮಕಾತಿ ತರಬೇತಿ ಕೇಂದ್ರಗಳಿಗೆ ಹೋಗುವ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರಿಸಿದ ಪಾಂಡೆ , ಮೊದಲ ಅಗ್ನಿವೀರ್‌ಗಳ ತರಬೇತಿಯು ಈ ಡಿಸೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಸಕ್ರಿಯ ಸೇವೆಯು 2023 ರ ಮಧ್ಯದಲ್ಲಿ ಪ್ರಾರಂಭವಾಗುತ್ತದೆ” ಎಂದು ಹೇಳಿದ್ದಾರೆ.
#WATCH | “…The first agniveer will join our regimental centres by December (2022) and will be available for deployment in our operational and non-operational by the middle of next year,” says Army Chief General Manoj Pande.#AgnipathSchemepic.twitter.com/VYOjmSQjQu
ಇದನ್ನೂ ಓದಿ
ಅಗ್ನಿಪಥವೋ ಅಥವಾ ಅಗ್ನಿಕುಂಡವೋ -ಮತ್ತೊಂದು CAA, Farm laws ಆಗದಿದ್ದರೆ ಸಾಕು, ಆಗುಹೋಗುಗಳ ವಿಶ್ಲೇಷಣೆ ಇಲ್ಲಿದೆ
ಆದಾಗ್ಯೂ ಅಗ್ನಿಪಥ್ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕವನ್ನು ಭಾರತ ಸರ್ಕಾರ ಇನ್ನೂ ಘೋಷಿಸಿಲ್ಲ. ಮುಂದಿನ 90 ದಿನಗಳಲ್ಲಿ ‘ಅಗ್ನಿವೀರ್ಸ್’ ನೇಮಕಾತಿ ಪ್ರಾರಂಭವಾಗಲಿದೆ ಮತ್ತು ಜುಲೈ 2023 ರ ವೇಳೆಗೆ ಮೊದಲ ಬ್ಯಾಚ್ ಸಿದ್ಧವಾಗಲಿದೆ ಎಂದು ಕೇಂದ್ರವು ಈ ಹಿಂದೆ ತಿಳಿಸಿತ್ತು.
ಈ ಯೋಜನೆಯಡಿಯಲ್ಲಿ, ಹದಿನೇಳೂವರೆ ಮತ್ತು 23 ವರ್ಷ ವಯಸ್ಸಿನ ನಡುವನ ಯುವಕರನ್ನು ಮೂರು ಸೇವೆಗಳಿಗೆ ಸೇರಿಸಲಾಗುತ್ತದೆ. ಹೊಸ ನೇಮಕಾತಿಯನ್ನು ‘ಅಗ್ನಿವೀರ್ಸ್ ‘ ಎಂದು ಕರೆಯಲಾಗುವುದು. ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಶೇ 25 ನೇಮಕಾತಿಗಳನ್ನು ನಿಯಮಿತ ಸೇವೆಗಾಗಿ ಉಳಿಸಿಕೊಳ್ಳಲಾಗುತ್ತದೆ.
ಹೊಸ ಸೇನಾ ನೇಮಕಾತಿ ಯೋಜನೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರವು ಅಗ್ನಿವೀರ್‌ಗಳನ್ನು ನೇಮಿಸಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಜೂನ್ 16 ರಂದು ಕೇಂದ್ರವು ಅಗ್ನಿಪತ್ ಯೋಜನೆಯ ಮೂಲಕ ನೇಮಕಾತಿಗಾಗಿ ಅಗ್ನಿವೀರ್ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದೆ.