Dhruva Sarja: ‘ಹೆಣ್ಮಕ್ಕಳ ಮೇಲೆ ಗೌರವ ಜಾಸ್ತಿ ಆಗಿದೆ’; ಮಗಳು ಜನಿಸಿದ ಬಳಿಕ ಧ್ರುವ ಸರ್ಜಾ ಫಸ್ಟ್​ ರಿಯಾಕ್ಷನ್

Dhruva Sarja Child: ಹೆಣ್ಣು ಮಗು ಜನಿಸಬೇಕು ಎಂಬುದು ಧ್ರುವ ಸರ್ಜಾ ಅವರ ಆಸೆ ಆಗಿತ್ತು. ಅವರ ಆಸೆ ಈಡೇರಿದೆ. ಈ ಸಂದರ್ಭದಲ್ಲಿ ಒಂದಷ್ಟು ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ.

Dhruva Sarja: ‘ಹೆಣ್ಮಕ್ಕಳ ಮೇಲೆ ಗೌರವ ಜಾಸ್ತಿ ಆಗಿದೆ’; ಮಗಳು ಜನಿಸಿದ ಬಳಿಕ ಧ್ರುವ ಸರ್ಜಾ ಫಸ್ಟ್​ ರಿಯಾಕ್ಷನ್
ಧ್ರುವ ಸರ್ಜಾ
Follow us
TV9 Web
| Updated By: ಮದನ್​ ಕುಮಾರ್​

Updated on:Oct 02, 2022 | 2:26 PM

ನಟ ಧ್ರುವ ಸರ್ಜಾ (Dhruva Sarja) ಅವರು ತಂದೆ ಆಗಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್​ (Prerana Shankar) ಅವರು ಇಂದು (ಅ.2) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಧ್ರುವ ಸರ್ಜಾ ಅವರ ಅಭಿಮಾನಿ ಬಳಗಕ್ಕೆ ಖುಷಿ ಆಗಿದೆ. ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗು ಜನಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಧ್ರುವ ಮಾತನಾಡಿದ್ದಾರೆ. ಖುಷಿಯ ಸುದ್ದಿಯನ್ನು ಹಂಚಿಕೊಂಡು ನಗು ಚೆಲ್ಲಿದ್ದಾರೆ. ‘ಮಗಳು ಜನಿಸಿದ ಮೇಲೆ ಹೆಣ್ಮಕ್ಕಳ ಮೇಲಿನ ಗೌರವ ಇನ್ನೂ ಜಾಸ್ತಿ ಆಯ್ತು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ-ಪ್ರೇರಣಾ ದಂಪತಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹೆಣ್ಣು ಮಗು ಜನಿಸಬೇಕು ಎಂಬುದು ಧ್ರುವ ಸರ್ಜಾ ಅವರ ಆಸೆ ಆಗಿತ್ತು. ಅವರ ಆಸೆ ಈಡೇರಿದೆ. ‘ನನಗೆ ತುಂಬ ಖುಷಿ ಆಗಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಹಜವಾಗಿಯೇ ಹುಡುಗಿಯರು ಎಂದರೆ ನನ್ನ ಮನದಲ್ಲಿ ಗೌರವ ಇತ್ತು. ಇಂದು ಎಲ್ಲ ಪ್ರಕ್ರಿಯೆಗಳನ್ನು ನೋಡಿದ ಮೇಲೆ ಆ ಮರ್ಯಾದೆ ಸ್ವಲ್ಪ ಜಾಸ್ತಿ ಆಯ್ತು’ ಎಂದು ಅವರು ಹೇಳಿದ್ದಾರೆ.

‘ಎಲ್ಲರ ಜೀವನದಲ್ಲೂ ಏಳು-ಬೀಳು ಇದ್ದೇ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಇತ್ತು. ಸಾಕಷ್ಟು ದಂಪತಿಗಳಿಗೆ ಗರ್ಭಪಾತ ಆಗಿರುತ್ತದೆ. ಅದರ ಬಗ್ಗೆ ಕೆಲವರು ಹೇಳಿಕೊಳ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳಲ್ಲ. ಹೆಣ್ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ನಾವೇ ಉದಾಹರಣೆ. ಅದನ್ನೆಲ್ಲ ಈಗ ಮಾತನಾಡೋದು ಬೇಡ. ಸದ್ಯಕ್ಕೆ ನಾವು ಖುಷಿಯಾಗಿದ್ದೇವೆ. ವೈದ್ಯರಿಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇದನ್ನೂ ಓದಿ
Image
Dhruva Sarja: ನಾ ಅಣ್ಣನನ್ನು ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ: ಖುಷಿಯ ನಡುವೆ ಧ್ರುವ ಸರ್ಜಾರ ನೋವು..!
Image
Dhruva Sarja and Prerana: ಸರ್ಜಾ ಕುಟುಂಬಕ್ಕೆ ಹೊಸ ಕುಡಿ ಆಗಮನ: ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ
Image
Prerana Sarja: ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಸೀಮಂತ; ಇಲ್ಲಿವೆ ಫೋಟೋಗಳು
Image
Dhruva Sarja: ‘ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ’: ಬರ್ತ್​ಡೇ ಬಗ್ಗೆ ಮುಖ್ಯ ನಿರ್ಧಾರ ಪ್ರಕಟಿಸಿದ ಧ್ರುವ ಸರ್ಜಾ

‘ಎಲ್ಲರ ಆಶೀರ್ವಾದದಿಂದ ನಮಗೆ ಮುದ್ದಾದ ಮಗು ಜನಿಸಿದೆ. ಇಡೀ ನಮ್ಮ ಕುಟುಂಬ ಖುಷಿಯಾಗಿದೆ. ಈ ಸಮಯದಲ್ಲಿ ನಾನು ನಮ್ಮ ಅಣ್ಣನನ್ನು ಮಿಸ್​ ಮಾಡಿಕೊಳ್ಳುತ್ತೇನೆ. ನಮ್ಮ ಅಜ್ಜಿಯನ್ನೂ ಮಿಸ್​ ಮಾಡಿಕೊಳ್ಳುತ್ತೇನೆ. ಅಂಕಲ್​ (ಅರ್ಜುನ್​ ಸರ್ಜಾ) ಬರುತ್ತಾರೆ’ ಎಂದಿದ್ದಾರೆ ಧ್ರುವ.

2019ರಲ್ಲಿ ಧ್ರುವ ಮತ್ತು ಪ್ರೇರಣಾ ವಿವಾಹ ನೆರವೇರಿತ್ತು. ಈಗ ಮೊದಲ ಮಗು ಜನಿಸಿದೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಧ್ರುವ ಸರ್ಜಾ ಗುರುತಿಸಿಕೊಂಡಿದ್ದಾರೆ. ‘ಪೊಗರು’ ಬಳಿಕ ‘ಮಾರ್ಟಿನ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:26 pm, Sun, 2 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ