Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

Rishab Shetty Viral Video: ಸಂದರ್ಶನ​ ಮಾಡುತ್ತಲೇ ಸೂರಜ್​ ಕುಮಾರ್​ ಸಖತ್​ ಎಮೋಷನಲ್​ ಆಗಿದ್ದಾರೆ. ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​
ರಿಷಬ್ ಶೆಟ್ಟಿ ಸಂದರ್ಶನದ ವೈರಲ್​ ವಿಡಿಯೋ
Follow us
TV9 Web
| Updated By: ಮದನ್​ ಕುಮಾರ್​

Updated on: Oct 14, 2022 | 10:49 AM

ಸೂಪರ್​ ಹಿಟ್​ ಆಗಿರುವ ‘ಕಾಂತಾರ’ (Kantara) ಸಿನಿಮಾದಿಂದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರ ಜನಪ್ರಿಯತೆ ದೇಶಾದ್ಯಂತ ಹಬ್ಬಿದೆ. ಅವರಿಗೆ ಉತ್ತರ ಭಾರತದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಿಂದಿಗೂ ಈ ಚಿತ್ರ ಡಬ್​ ಆಗಿ ತೆರೆ ಕಂಡಿದೆ. ಈ ಪ್ರಯುಕ್ತ ಅನೇಕ ಮಾಧ್ಯಮಗಳಿಗೆ ಹಾಗೂ ಯೂಟ್ಯೂಬ್​ ಚಾನೆಲ್​ಗಳಿಗೆ ರಿಷಬ್​ ಶೆಟ್ಟಿ (Rishab Shetty) ಮತ್ತು ತಂಡದವರು ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಒಂದು ಸಂದರ್ಶನದ ತುಣುಕು ಸಖತ್​ ವೈರಲ್​ ಆಗುತ್ತಿದೆ. ಜನಪ್ರಿಯ ಯೂಟ್ಯೂಬರ್​ ಸೂರಜ್​ ಕುಮಾರ್​ ಅವರು ಈ ಸಂದರ್ಶನ (Rishab Shetty Interview) ನಡೆಸಿದ್ದಾರೆ. ಸಂದರ್ಶನದ ವೇಳೆ ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ಅವರು ಆ ಪರಿ ಭಾವುಕರಾಗಿದ್ದಾರೆ.

ರಿಷಬ್​ ಶೆಟ್ಟಿ ಅವರು ‘ಕಾಂತಾರ’ ಚಿತ್ರದಲ್ಲಿ ಶಿವ ಎಂಬ ಪಾತ್ರ ಮಾಡಿದ್ದಾರೆ. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಅವರ ನಟನೆಯನ್ನು ಕಂಡು ಅಭಿಮಾನಿಗಳಿಗೆ ಸಖತ್​ ಖುಷಿ ಆಗಿದೆ. ಭೂತಕೋಲದ ವೇಷದಲ್ಲಿ ಅವರ ಅಭಿನಯಕ್ಕೆ ಅನೇಕರು ಭೇಷ್​ ಎಂದಿದ್ದಾರೆ. ಯೂಟ್ಯೂಬರ್​ ಸೂರಜ್​ ಕುಮಾರ್​ ಕೂಡ ಫಿದಾ ಆಗಿದ್ದಾರೆ. ಸಂದರ್ಶನ ಮಾಡುವಾಗ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
Image
ರೇಟಿಂಗ್ ವಿಧಾನ ಬದಲಿಸಿದ ‘ಬುಕ್ ಮೈ ಶೋ’; ಈಗ ‘ಕಾಂತಾರ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?
Image
Kantara: ಹಿಂದಿಯಲ್ಲೂ ಅಬ್ಬರಿಸಲಿದೆ ‘ಕಾಂತಾರ’; ಅ.14ರಿಂದ 2500 ಪರದೆಗಳಲ್ಲಿ ರಿಲೀಸ್​
Image
Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ
Image
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

ತಮ್ಮದೇ ಶೈಲಿಯಲ್ಲಿ ಸಿನಿಮಾಗಳ ವಿಮರ್ಶೆ ಮಾಡುವ ಮೂಲಕ ಸೂರಜ್​ ಕುಮಾರ್​ ಫೇಮಸ್​ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳ ಸಂದರ್ಶನವನ್ನು ಅವರು ಮಾಡಿದ್ದಾರೆ. ರಿಷಬ್​ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಸಂದರ್ಶನ ಶುರುಮಾಡುವುದಕ್ಕೂ ಮುನ್ನ ‘ದಯವಿಟ್ಟು ನೀವು ಎದ್ದು ನಿಂತುಕೊಳ್ಳಿ ಸರ್​’ ಎಂದು ರಿಷಬ್​ಗೆ ಸೂರಜ್​ ಹೇಳಿದರು. ನಂತರ ರಿಷಬ್​ ಶೆಟ್ಟಿಯನ್ನು ತಬ್ಬಿಕೊಂಡರು. ಅದೂ ಸಾಲದೆಂಬಂತೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು!

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ‘ನಾನು ತಮಾಷೆ ಮಾಡುತ್ತಿಲ್ಲ ಸರ್​. ಈ ರೀತಿ ನಾನು ಯಾರಿಗೂ ಮಾಡಿಲ್ಲ. ನಿಮ್ಮ ನಟನೆ ನೋಡಿ ನಾನು ಬ್ಲ್ಯಾಂಕ್​ ಆಗಿಬಿಟ್ಟೆ. ನಾನು ತುಂಬಾ ಸಿನಿಮಾ ನೋಡಿದ್ದೇನೆ. ಆದರೆ ಈ ಚಿತ್ರದ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ. ನನ್ನ ಗರ್ಲ್​ಫ್ರೆಂಡ್​ಗಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಸೂರಜ್​ ಕುಮಾರ್​ ಹೇಳಿದ್ದಾರೆ.

ಹಿಂದಿಗೆ ‘ಕಾಂತಾರ’ ಸಿನಿಮಾ ಡಬ್​ ಆಗಿದೆ. ಇಂದಿನಿಂದ (ಅ.14) 2500 ಪರದೆಗಳಲ್ಲಿ ಹಿಂದಿ ವರ್ಷನ್​ ಪ್ರದರ್ಶನ ಕಾಣುತ್ತಿದೆ​. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾದ ಮೂಲಕ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ. ರಿಷಬ್​ ಶೆಟ್ಟಿ ಅವರ ಡಿಮ್ಯಾಂಡ್​ ಕೂಡ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ