ಧ್ರುವ ಸರ್ಜಾ- ಪ್ರೇಮ್ ಸಿನಿಮಾಗೆ ‘ಕೆಡಿ’ ಟೈಟಲ್; ಅದ್ದೂರಿಯಾಗಿ ಲಾಂಚ್ ಆಯ್ತು ಶೀರ್ಷಿಕೆ
ಟೈಟಲ್ ಟೀಸರ್ನಲ್ಲಿ ಧ್ರುವ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ನಿರೀಕ್ಷೆ ದುಪ್ಪಟ್ಟಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾನ ನಿರ್ಮಾಣ ಮಾಡುತ್ತಿದೆ.
ನಿರ್ದೇಶಕ ಪ್ರೇಮ್ (Prem) ಅವರು ಸಿನಿಮಾ ಮಾಡುತ್ತಾರೆ ಎಂದರೆ ಸದ್ದು ಜೋರಾಗಿರುತ್ತದೆ. ಈ ಬಾರಿ ಈ ಸದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿದೆ. ಧ್ರುವ ಸರ್ಜಾ ಜತೆ ಅವರು ಸಿನಿಮಾ ಮಾಡುತ್ತಿದ್ದಾರೆ ಎಂಬುದು ಒಂದು ಕಡೆಯಾದರೆ, ಸಂಜಯ್ ದತ್ ಮೊದಲಾದ ಪರಭಾಷೆಯ ಸ್ಟಾರ್ಗಳು ಆಗಮಿಸಿ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ ಅನ್ನೋದು ಮತ್ತೊಂದು ಕಡೆ. ಈ ಚಿತ್ರದ ಶೀರ್ಷಿಕೆ ಇಂದು (ಅಕ್ಟೋಬರ್ 20) ಅನಾವರಣಗೊಂಡಿದೆ. ‘ಕೆಡಿ’ (KD Movie)ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ. ‘ದಿ ಡೆವಿಲ್’ ಎಂಬ ಅಡಿ ಬರಹ ಇದೆ. ಶೀರ್ಷಿಕೆ ಮೂಲಕವೇ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ನಿರ್ದೇಶಕ ಪ್ರೇಮ್ ಅವರು ಸ್ಯಾಂಡಲ್ವುಡ್ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ‘ಜೋಗಿ’ ಚಿತ್ರವನ್ನು ಸಿನಿಪ್ರಿಯರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರ ಅಭಿಮಾನಿ ಬಳಗ ದೊಡ್ಡದು. ಇನ್ನು, ಧ್ರುವ ಸರ್ಜಾ ಸ್ಯಾಂಡಲ್ವುಡ್ನ ಬೇಡಿಕೆಯ ನಟ. ಅವರು ‘ಅದ್ದೂರಿ’, ‘ಭರ್ಜರಿ’ ಮೊದಲಾದ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಈಗ ಇವರಿಬ್ಬರೂ ಒಂದಾಗಿದ್ದಾರೆ. ಇಂದು ಟೈಟಲ್ ಲಾಂಚ್ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಲಾಗಿದೆ.
ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ರಿಲೀಸ್ ಆಗಿದ್ದ ಪೋಸ್ಟರ್ನಲ್ಲಿ ಆ ವಿಚಾರ ರಿವೀಲ್ ಆಗಿತ್ತು. ಈಗ ಟೈಟಲ್ ಟೀಸರ್ನಲ್ಲಿ ಧ್ರುವ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ನಿರೀಕ್ಷೆ ದುಪ್ಪಟ್ಟಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾನ ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಈ ಟೀಸರ್ ಕೇವಲ 15 ನಿಮಿಷದಲ್ಲಿ 40 ಲಕ್ಷ ಬಾರಿ ವೀಕ್ಷಣೆ ಕಂಡಿದೆ.
“Once you enter the battlefield, war is inevitable. If you die, the heaven is yours. If you win, the throne is yours.”
Presenting the Title Teaser of #KD – The Devil.@DhruvaSarja @directorprems @ArjunJanyaMusic @SUPRITH_87 #KDTitleTeaser pic.twitter.com/wSwFEBi5kp
— KVN Productions (@KvnProductions) October 20, 2022
ಇದನ್ನೂ ಓದಿ: ಧ್ರುವ ಸರ್ಜಾ-ಪ್ರೇಮ್ ಸಿನಿಮಾ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮ ಲೈವ್ ನೋಡಿ
ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ರಿಲೀಸ್ ದಿನಾಂಕ ವಿಳಂಬ ಆಗಿದೆ.
Published On - 6:17 pm, Thu, 20 October 22