ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಪಿಐ ಮುರುಗೇಶ್ ಚೆನ್ನಣ್ಣವರ್ ಅವರು ಶ್ರೀಲಂಕಾದಿಂದ ಭಾರತಕ್ಕೆ 28 ಕಿಮೀ ದೂರ ಈಜುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಇದು ರಿಲೇ ಈಜು ಸ್ಪರ್ಧೆಯಾಗಿತ್ತು, ಇದರಲ್ಲಿ ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಭಾಗವಹಿಸಿದ್ದರು. 8 ಗಂಟೆ 30 ನಿಮಿಷಗಳಲ್ಲಿ ಅವರು ರಾಮಸೇತು ಮೂಲಕ ಈ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಸಿಪಿಐ ಮುರುಗೇಶ್ ಚೆನ್ನಣ್ಣವರ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಶ್ರೀಲಂಕಾದಿಂದ ಭಾರತದ ದನುಷ್ ಕೋಡಿವರಗೆ ಈಜಿದ್ದಾರೆ. ಹಿಂದೂ ಮಹಾಸಾಗರದಲ್ಲಿ ರಾಮಸೇತು ಮೂಲಕ 28 ಕಿಲೋ ಮೀಟರ್ ಅನ್ನು ಕೇವಲ 8 ಗಂಟೆ 30 ನಿಮಿಷದಲ್ಲಿ ಈಜಿ ದಡ ಸೇರಿದ್ದಾರೆ. ರಿಲೇ ಮಾದರಿಯಲ್ಲಿ ನಾಲ್ವರು 28 ಕಿ.ಮೀ. ಈಜಿ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ ಕಿಮ್ಸ್ ನ ಓರ್ವ ವೈದ್ಯಕೀಯ ವಿದ್ಯಾರ್ಥಿ ಮತ್ತು ಹರಿಯಾಣ ಮೂಲದ ಇಬ್ಬರು ಐಎಎಸ್ ಅಧಿಕಾರಿಗಳನ್ನೊಳಗೊಂಡಿರುವ ತಂಡ ಸಮುದ್ರ ಈಜಿದೆ.
Published on: Apr 19, 2025 04:00 PM
Latest Videos

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ

ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್ಗೆ ಉಳಿಗಾಲವಿಲ್ಲ: ವಾಟಾಳ್
