5 ವರ್ಷಗಳಿಂದ ಪರಿಹಾರವಾಗದ ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!
ಮನುಷ್ಯನಿಗೆ ತಕ್ಕಂತೆ ಈ ತಂತ್ರಜ್ಞಾನಗಳು ಕೂಡ ಇದೆ. ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಕಲಿಯಬೇಕು. ಇಡೀ ಲೋಕದಲ್ಲಿ ಎಐ ಹವಾ ಹೆಚ್ಚಾಗಿದೆ. ಎಲ್ಲ ಕ್ಷೇತ್ರದಲ್ಲಿ ಎಐ ತನ್ನ ತಕ್ಕೆಗೆ ತೆಗೆದುಕೊಳ್ಳುತ್ತಿದೆ. ಈಗಾಗಲೇ ಅನೇಕ ಕಡೆ ಎಐಯನ್ನು ಬಳಸಲಾಗುತ್ತಿದೆ. ಇದೀಗ ವೈದ್ಯಕೀಯ ಕ್ಷೇತ್ರಕ್ಕೂ ಬಂದಿದೆ. ಇಲ್ಲೊಬ್ಬರು 5 ವರ್ಷಗಳಿಂದ ದವಡೆ ಸಮಸ್ಯೆಯಿಂದ ಬಳಲುತ್ತಿದ್ದರು. ಅನೇಕ ತಜ್ಞರನ್ನು ಭೇಟಿಯಾದರೂ ಈ ಸಮಸ್ಯೆ ಬಗೆಹರಿಯಲಿಲ್ಲ. ಆದರೆ ಈ ಸಮಸ್ಯೆಯನ್ನು ಚಾಟ್ ಜಿಪಿಟಿ 60 ಸೆಕೆಂಡುಗಳಲ್ಲಿ ಪರಿಹರಿಸಲು ಸಹಾಯ ಮಾಡಿದೆ. ಅದು ಹೇಗೆ ಇಲ್ಲಿದೆ ನೋಡಿ.

AI ನ ಚಾಟ್ GPT ದಿನಕ್ಕೊಂದು ವಿಚಾರಗಳನ್ನು ಸಂಶೋಧನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನ ಈ AI (Artificial intelligence) ಇಲ್ಲದೆ ಬದಕಲು ಸಾಧ್ಯವಿಲ್ಲ ಎನ್ನುವಷ್ಟು ಬದಲಾವಣೆಗಳನ್ನು ತಂದಿದೆ. ಕೃತಕ ಬುದ್ಧಿಮತ್ತೆ (AI) ಜನರ ಮೇಲೆ ತುಂಬಾ ಪರಿಣಾಮವನ್ನು ಉಂಟು ಮಾಡುತ್ತಿದೆ. ಜನರು ಈ ಕೃತಕ ಬುದ್ಧಿಮತ್ತೆಗೆ ಹೊಂದಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಚಾಲ್ತಿಗೆ ತರಲಾಗಿದೆ. ಹಲವಾರು ಕಂಪನಿಗಳು ಈ ಎಐಯನ್ನು ಉಪಯೋಗಿಸಲು ಪ್ರಾರಂಭಿಸಿದೆ. ಶಿಕ್ಷಣ ಕ್ಷೇತ್ರ, ತಂತ್ರಜ್ಞಾನ ಎಲ್ಲದರಲ್ಲೂ ಎಐ ಬಂದಿದೆ. ಜನರಿಗೆ ಬೇಕಾದ ಸಾಮಾನ್ಯ ಜ್ಞಾನ ಹಾಗೂ ಕೆಲವೊಂದು ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಇದೀಗ ವೈದ್ಯಕೀಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇತ್ತೀಚೆಗಷ್ಟೇ ಎಐ ಸಹಾಯದಿಂದ ತಾಯಿಯೊಬ್ಬರು ಮಗವಿಗೆ ಜನ್ಮ ನೀಡಿದ್ದಾರೆ. ಹೀಗೆ ಅನೇಕ ಕಡೆಗಳಲ್ಲಿ ಎಐ ಪ್ರಯೋಗ ನಡೆಯುತ್ತಿದೆ. ಎಐ ಸಹಾಯದಿಂದ ವ್ಯಕ್ತಿಯೊಬ್ಬರಿಗೆ ಐದು ವರ್ಷಗಳಿಗೂ ಹೆಚ್ಚು ಕಾಲ ತಮ್ಮನ್ನು ಕಾಡುತ್ತಿದ್ದ ದವಡೆಯ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಲು ಸಹಾಯ ಮಾಡಿದೆ. ರೆಡ್ ಇಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.
ತುಂಬಾ ದಿನಗಳಲ್ಲಿಂದ ಎಡಭಾಗದಲ್ಲಿ ದವಡೆ ನೋವು ಕಾಣಿಸಿಕೊಂಡಿತ್ತು. ಈ ಸಮಸ್ಯೆಯ ಬಗ್ಗೆ ಅನೇಕ ವೈದ್ಯರಿಗೆ ತೋರಿಸಿ ಆಗಿತ್ತು. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಎರಡು ಎಂಆರ್‌ಐ, ಅನೇಖ ತಜ್ಞರ ಸಲಹೆ, ಎಲ್ಲವನ್ನು ಮಾಡಿತ್ತು. ಆದರೆ ಯಾವುದೇ ಪರಿಹಾರ ಕಾಣಲಿಲ್ಲ. ಚಾಟ್ ಜಿಪಿಟಿಯಲ್ಲಿ ಈ ಸಮಸ್ಯೆಯ ಬಗ್ಗೆ ಸಲಹೆ ಕೇಳಿದೆ. ಸಮಸ್ಯೆಗಳ ಬಗ್ಗೆ ವಿವರಿಸಿದೆ. ಅದಕ್ಕೆ ಸೂಕ್ತ ಪರಿಹಾರವನ್ನು ಚಾಟ್ ಜಿಪಿಟಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಯಾರಿಗಾದರೂ ದವಡೆ ನೋವು ಕಾಣಿಸಿಕೊಂಡರೆ ನೀವು ಚಾಟ್ ಜಿಪಿಟಿಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿನಿತ್ಯ ಬಿಸಿ ನೀರಿನ ಸ್ನಾನ ಮಾಡಿದರೆ ನಿಮ್ಮ ಪುರುಷತ್ವಕ್ಕೆ ಬೀಳುತ್ತಾ ಪೆಟ್ಟು? ಇಲ್ಲಿದೆ ಸತ್ಯಾಸತ್ಯತೆ
ಈ ಬಗ್ಗೆ ರೆಡ್ ಇಟ್ನಲ್ಲಿ ಹಂಚಿಕೊಂಡ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ, ನಮಗೂ ಕೂಡ ಚಾಟ್ ಜಿಪಿಟಿ ಇಂತಹ ಸಮಸ್ಯೆಗೆ ಸಹಾಯ ಮಾಡಿದೆ. ಹಾಗೂ ಅದು ಪರಿಹಾರ ಆಗಿದೆ ಎಂದು ಹೇಳಿದ್ದಾರೆ. ನಮಲ್ಲಿ ಕೆಲವೊಂದು ಟೆಂಪೊರೊಮ್ಯಾಂಡಿಬ್ಯುಲರ್ ಕೀಲುಗಳ ಅಸ್ವಸ್ಥತೆಗಳಲ್ಲಿ ತೀವ್ರವಾದ ನೋವುಗಳು ಕಾಣಿಸಿಕೊಂಡರೆ. ಅದಕ್ಕೂ ವೈದ್ಯರು ಅನೇಕ ಚಿಕಿತ್ಸೆ ನೀಡುತ್ತಾರೆ. ಆದರೆ ಚಾಟ್ ಜಿಪಿಟಿ ನೀಡುವ ಸಲಹೆಗಳು ಮಾತ್ರ ಸಿಂಪಲ್ ಆಗಿರುತ್ತದೆ. ಹಾಗೂ ಅದರ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡುತ್ತದೆ. ಈ ಮೂಲಕ ದೇಶದಲ್ಲಿ ಎಐ ಪ್ರಭಾವ ಎಷ್ಟಿದೆ ಎಂದು ನೋಡಬಹುದು. ಮುಂದಿನ ದಿನಗಳಲ್ಲಿ ಚಾಟ್ ಜಿಪಿಟಿ ಎಐ, ಆರೋಗ್ಯದ ಬಗ್ಗೆ ಕಾಳಜಿಯನ್ನು ನೀಡುವ ಸಾಧ್ಯತೆ ಕೂಡ ಇದೆ. ನಮ್ಮ ಜೀವನಶೈಲಿಯ ಜತೆಗೆ ಅದು ಕೂಡ ಬೆರೆತ್ತುಕೊಳ್ಳುವ ಸಾಧ್ಯತೆ ಇದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ