FACT CHECK: ಪ್ರತಿನಿತ್ಯ ಬಿಸಿ ನೀರಿನ ಸ್ನಾನ ಮಾಡಿದರೆ ನಿಮ್ಮ ಪುರುಷತ್ವಕ್ಕೆ ಬೀಳುತ್ತಾ ಪೆಟ್ಟು? ಇಲ್ಲಿದೆ ಸತ್ಯಾಸತ್ಯತೆ
ನಮ್ಮಲ್ಲಿ ಅನೇಕರು ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ಆನಂದಿಸುತ್ತಾರೆ. ಆದರೆ ಹೆಚ್ಚಿನ ತಾಪಮಾನ ವೀರ್ಯಾಣುಗಳ ಸಂಖ್ಯೆ ಮತ್ತು ಪುರುಷ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದು, ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಎನ್ನುತ್ತಿದ್ದಾರೆ ಆದರೆ ಇದು ಸತ್ಯವೇ? ಬಿಸಿನೀರಿನ ಸ್ನಾನ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯೇ? ಇಲ್ಲಿದೆ ಮಾಹಿತಿ.

ಪ್ರತಿನಿತ್ಯ ಬಿಸಿ ನೀರಿನ ಸ್ನಾನ (Hot water bath) ಮಾಡುವುದು ಅನೇಕರ ದೈನಂದಿನ ದಿನಚರಿಯ ಭಾಗವಾಗಿದೆ. ಆದರೆ ಕೆಲವರು ಈ ಅಭ್ಯಾಸ ಪುರುಷರಲ್ಲಿ ವೀರ್ಯಾಣುಗಳ (Sperm) ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಎನ್ನುತ್ತಿದ್ದಾರೆ ಆದರೆ ಇದು ಸತ್ಯವೇ? ಬಿಸಿನೀರಿನ ಸ್ನಾನ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನು ತಿಳಿಯಬೇಕಾಗಿದೆ.
ವೈರಲ್ ಆಗುತ್ತಿರುವುದು ಏನು?
ಟ್ವಿಟ್ಟರ್ ನಲ್ಲಿ @menscoach1 ಎಂಬ ಖಾತೆಯಲ್ಲಿ ಈ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲಾಗಿದ್ದು, ಪ್ರತಿನಿತ್ಯ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ವೃಷಣಗಳು ಶಾಖಕ್ಕೆ ಒಡ್ಡಲ್ಪಡುತ್ತವೆ, ಇದು ನಿಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಆದಷ್ಟು ತಣ್ಣೀರನ್ನು ಬಳಸಿ ಎಂದಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್
2. Hot baths
Bathing with hotwater frequently exposes your testicles to heat, which reduces your sperm count.
The same thing happens to men who use saunas often.
In fact, if you’re worried about infertility, it’s best to bath with cold water.
Avoid hot water baths! pic.twitter.com/UNGcRArvq0
— TOP G (@menscoach1) September 29, 2024
ಬಿಸಿ ನೀರಿನ ಸ್ನಾನ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯೇ?
ಈ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯಲು ಟಿವಿ9 ಕನ್ನಡ ಕೆಲವು ಸಂಶೋಧನೆಗಳು ನೀಡಿದಂತಹ ಮಾಹಿತಿಯನ್ನು ಸಂಗ್ರಹ ಮಾಡಿದ್ದು, ಅವುಗಳ ಆಧಾರದ ಮೇಲೆ ಬಿಸಿ ನೀರಿನ ಸ್ನಾನ ವೀರ್ಯಾಣುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಜವಾಗಿದೆ. ಈ ಬಗ್ಗೆ ಮತ್ತಷ್ಟು ಅಧ್ಯಯನಗಳು ಏನು ಹೇಳುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾವಿನ ಹಣ್ಣಿನ ಮಿಲ್ಕ್ ಶೇಕ್ ಯಾರು ಸೇವನೆ ಮಾಡಬಾರದು? ಡಾ. ಪ್ರಿಯಾ ನೀಡಿರುವ ಮಾಹಿತಿ ಇಲ್ಲಿದೆ
ವೀರ್ಯವು ವೃಷಣಗಳಲ್ಲಿ ಉತ್ಪತ್ತಿಯಾಗುತ್ತದೆ, ಅಲ್ಲಿ ಒಂದು ವೀರ್ಯವು ಬೆಳೆಯಲು ಸುಮಾರು 72 ದಿನಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ವೀರ್ಯಾಣು ಉತ್ಪಾದನೆಗೆ ಸುತ್ತಮುತ್ತಲಿನ ತಾಪಮಾನದ ಅಗತ್ಯವಿರುತ್ತದೆ. ಆದರೆ ಪ್ರತಿನಿತ್ಯ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಅಂದರೆ ಬಿಸಿ ನೀರಿನ ಸ್ನಾನ ಮಾಡುವುದರಿಂದ ವೀರ್ಯಾಣುಗಳ ಸಂಖ್ಯೆ ಮೇಲೆ ಪರಿಣಾಮ ಬೀರಬಹುದು ಜೊತೆಗೆ ಇದು ಪುರುಷ ಬಂಜೆತನಕ್ಕೂ ಕೂಡ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ಪ್ರಕಾರ, ವೃಷಣಗಳೊಳಗಿನ ತಾಪಮಾನವನ್ನು ಕೇವಲ ಎರಡು, ಮೂರು, ಅಥವಾ ನಾಲ್ಕು ಡಿಗ್ರಿ ಫ್ಯಾರನ್ಹೀಟ್ ಹೆಚ್ಚಿಸಿದರೆ, ವೀರ್ಯಾಣು ಮತ್ತು ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾಗಬಹುದು. ಆದರೆ ಇದು ಯಾವಾಗಲು ಒಂದೇ ರೀತಿಯಾಗಿರುವುದಿಲ್ಲ.
ಇನ್ನು 2007 ರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಬಿಸಿ ನೀರಿನ ಸ್ನಾನ ಅಥವಾ ಹಾಟ್ ಟಬ್ ಗಳಲ್ಲಿ ಪದೇ ಪದೇ ಸ್ನಾನ ಮಾಡುವುದು ಪುರುಷ ಬಂಜೆತನಕ್ಕೆ ಕಾರಣವಾಗಬಹುದು ಎಂದು ಹೇಳಿದೆ. ಅಂದರೆ, ನೀರಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದ್ದು, 30 ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡಿದರೆ ವೀರ್ಯಾಣುಗಳ ಗುಣಮಟ್ಟ ಮತ್ತು ಅವುಗಳ ಸಂಖ್ಯೆ ಎರಡೂ ಕೂಡ ತಾತ್ಕಾಲಿಕವಾಗಿ ಕುಸಿಯಬಹುದು. ಬಳಿಕ ನೀವು ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಲ್ಲಿಸಿದ ತಿಂಗಳುಗಳ ಬಳಿಕ ವೀರ್ಯಾಣುಗಳ ಸಂಖ್ಯೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದರ ಜೊತೆಗೆ ಬಿಗಿಯಾದ ಬಟ್ಟೆ ಧರಿಸುವುದು, ಧೂಮಪಾನ ಮಾಡುವುದು ಮತ್ತು ಇತರ ಕೆಲವು ಜೀವನಶೈಲಿ ವೀರ್ಯಾಣುಗಳ ಸಂಖ್ಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ