Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವನ್ನು ಬಟ್ಟೆಯಲ್ಲಿ ಸುತ್ತಿ ಏಕೆ ಮಲಗಿಸುತ್ತಾರೆ ಎಂದು ತಿಳಿದಿದೆಯೇ?

ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಇದನ್ನು ನೀವೂ ನೋಡಿರಬಹುದು. ಆದರೆ ಈ ರೀತಿ ಮಾಡುವುದಕ್ಕೆ ಕಾರಣವೇನು? ಕೆಲವರು ಈ ರೀತಿ ಮಾಡುವುದರಿಂದ ಮಕ್ಕಳಿಗೆ ಹಿಂಸೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಈ ರೀತಿಯ ಅಭ್ಯಾಸ ಮಕ್ಕಳಿಗೆ ಒಳ್ಳೆಯದೋ? ಅಲ್ಲವೋ? ಬಟ್ಟೆ ಸುತ್ತಿ ಮಲಗಿಸದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಮಗುವನ್ನು ಬಟ್ಟೆಯಲ್ಲಿ ಸುತ್ತಿ ಏಕೆ ಮಲಗಿಸುತ್ತಾರೆ ಎಂದು ತಿಳಿದಿದೆಯೇ?
ಸಾಂದರ್ಭಿಕ ಚಿತ್ರ Image Credit source: Getty Images
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 15, 2025 | 2:18 PM

ಹುಟ್ಟಿದ ಮಗುವನ್ನು ಬಟ್ಟೆಯಲ್ಲಿ ಸುತ್ತಿ (swaddle) ಮಲಗಿಸುವುದನ್ನು ನೀವು ನೋಡಿರಬಹುದು. ಆದರೆ ಶಿಶುಗಳನ್ನು (baby) ಈ ರೀತಿ ಮಲಗಿಸುವುದಕ್ಕೆ ನಿಜವಾದ ಕಾರಣವೇನು ಎಂಬುದು ತಿಳಿದಿದೆಯೇ? ಸಾಮಾನ್ಯವಾಗಿ ಈ ರೀತಿಯ ಅಭ್ಯಾಸ ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಈಗಲೂ ಇದನ್ನು ಪಾಲಿಸುವವರಿದ್ದಾರೆ. ಆದರೆ ಕೆಲವರು ಈ ರೀತಿ ಮಕ್ಕಳನ್ನು ಮಲಗಿಸುವುದಕ್ಕೆ ಒಪ್ಪುವುದಿಲ್ಲ. ಇದು ಮಕ್ಕಳಿಗೆ ಕಿರಿಕಿರಿಯಾಗುತ್ತದೆ ಎಂದು ಸ್ನಾನ ಮಾಡಿ ಹಾಗೆಯೇ ತೊಟ್ಟಿಲು ಅಥವಾ ಬೆಡ್ ನಲ್ಲಿ ಮಲಗಿಸುತ್ತಾರೆ. ಈ ರೀತಿ ಮಕ್ಕಳಿಗೆ ಬಟ್ಟೆ ಸುತ್ತಿ ಮಲಗಿಸದಿದ್ದರೆ ಏನಾಗುತ್ತದೆ? ಯಾಕಾಗಿ ಈ ರೀತಿ ಮಾಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಮಗುವನ್ನು ಕಾಟನ್ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಿ ಬಳಿಕ ಶಿಶುವನ್ನು ಮೆತ್ತನೆಯ, ಹಗುರವಾದ ಬಟ್ಟೆಯಿಂದ ಪೂರ್ತಿಯಾಗಿ ಸುತ್ತಿ ಕೈ- ಕಾಲು ಆಡದಂತೆ ಕಟ್ಟುತ್ತಾರೆ. ನಿಮಗೆ ಈ ಅಭ್ಯಾಸ ಮಗುವಿಗೆ ಹಿಂಸೆ ಕೊಟ್ಟಂತೆ ಭಾಸವಾಗಬಹುದು. ಕೆಲವರು ಮಕ್ಕಳಿಗೆ ಯಾಕಿಷ್ಟು ಹಿಂಸೆ ಕೊಡಬೇಕು ಎನ್ನುತ್ತಾರೆ. ಆದರೆ ಇದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು gallaryrk ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅವರು ತಿಳಿಸಿರುವ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ನೀರಿಗಿಳಿಯುವಾಗ ಈ ವಿಷಯಗಳ ಪಾಲನೆ ಮಾಡುವುದನ್ನು ಮರೆಯಬೇಡಿ

ಇದನ್ನೂ ಓದಿ
Image
ಬೇಸಿಗೆಯಲ್ಲಿ ಈಜಾಡಲು ಇಷ್ಟಪಡುವವರು ಈ ವಿಷಯ ಮರೆಯಬೇಡಿ
Image
ಗರ್ಭದಲ್ಲಿರುವ ಮಗು ಸ್ಮಾರ್ಟ್ ಆಗಲು ಈ ರೀತಿ ಮಾಡಿ
Image
ಈ ಮೂರು ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಿ, ಗ್ಯಾಸ್ಟ್ರಿಕ್ ಸಮಸ್ಯೆ ಬರಲ್ಲ
Image
ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಶಿಶುಗಳನ್ನು ಈ ರೀತಿ ಮಲಗಿಸುವುದಕ್ಕೆ ಕೆಲವು ಕಾರಣಗಳಿವೆ;

ಹಿರಿಯರು ಹಿಂದಿನಿಂದಲೂ ಹುಟ್ಟಿದ ಕಂದಮ್ಮಗಳಿಗೆ ಸ್ನಾನ ಆದ ಬಳಿಕ ಈ ರೀತಿ ಬಟ್ಟೆ ಸುತ್ತಿ ಮಲಗಿಸುವ ಒಂದು ಅಭ್ಯಾಸವನ್ನು ರೂಢಿಸಿಕೊಂಡು ಬಂದಿದ್ದರು. ಅವರ ಪ್ರಕಾರ, ಈ ರೀತಿ ಮಾಡುವುದರಿಂದ ಮಗು ಬೆಚ್ಚಗೆ ಇರಲಿ, ನೆತ್ತಿಗೆ ಹೊರಗಿನ ಗಾಳಿ ಹೋಗದಿರಲಿ ಜೊತೆಗೆ ಮಗುವಿನ ಕೈ- ಕಾಲು ಸೊಟ್ಟ ಆಗದೆ ಸರಿಯಾಗಿ ಬೆಳವಣಿಗೆ ಆಗಲಿ ಎಂಬುದಾಗಿತ್ತು. ಹಾಗಾಗಿಯೇ ಮಗುವನ್ನು ಪ್ರತಿನಿತ್ಯ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ.

ವೈಜ್ಞಾನಿಕ ಕಾರಣವೇನು?

ಈ ರೀತಿ ಮಾಡುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಮಗು ಹೊಟ್ಟೆಯಲ್ಲಿದ್ದಾಗ ಬೆಚ್ಚಗೆ ಒಂದು ಗೂಡಿನಲ್ಲಿದ್ದ ಹಾಗೆಯೆ ಇರುತ್ತದೆ. ಅದು ಒಂದೇ ಸಲ ಹೊರಗಡೆ ಬಂದ ಮೇಲೆ ಅದಕ್ಕೆ ಎಲ್ಲವೂ ಹೊಸದಾಗಿರುತ್ತದೆ. ಚಿಕ್ಕ ಚಿಕ್ಕ ಶಬ್ದಗಳಿಗೂ ಬೆಚ್ಚಿಬಿಳಲು ಪ್ರಾರಂಭಿಸುತ್ತದೆ. ಜೊತೆಗೆ ಮಲಗಿರುವಾಗ ಅದರ ಕೈ ಕಾಲು ಆಕಡೆ- ಈಕಡೆ ಆದರೂ ಅದಕ್ಕೆ ಎಚ್ಚರವಾಗಬಹುದು ಹಾಗಾಗಿಯೇ ವೈದ್ಯರು ಮಕ್ಕಳನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸಿ ಎಂದು ಸಲಹೆ ನೀಡುತ್ತಾರೆ. ಅದಲ್ಲದೆ ಈ ರೀತಿ ಮಾಡುವುದರಿಂದ ಮಕ್ಕಳ ಕೈ ಕಾಲು ನೇರವಾಗಿರುತ್ತದೆ ಇದರಿಂದ ನಡೆಯುವ ವಯಸ್ಸಿನಲ್ಲಿಯೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Tue, 15 April 25

ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ