ಬೇಸಿಗೆಯಲ್ಲೂ ಬೆಳ್ಳುಳ್ಳಿ ತಿಂತೀರಾ ಜೋಕೆ! ಕಾರಣ ತಿಳಿದರೆ ಬೆಚ್ಚಿ ಬೀಳ್ತಿರಾ
ಬೆಳ್ಳುಳ್ಳಿಯ ಸುವಾಸನೆ ಮತ್ತು ರುಚಿಯಿಂದಾಗಿ ಕೆಲವರು ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಜೊತೆಗೆ ಇದರಲ್ಲಿರುವ ಔಷಧೀಯ ಗುಣಗಳು ಕೂಡ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಹಸ ಬೆಳ್ಳುಳ್ಳಿಯನ್ನು ತಿನ್ನುವಾಗ, ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಸೇವನೆ ಮಾಡುವಾಗ ಬಹಳ ಜಾಗೃತೆ ವಹಿಸಬೇಕು? ಹಾಗಾದರೆ ಇವುಗಳ ಸೇವನೆ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳ್ಳುಳ್ಳಿ (Garlic) ಹಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಅದರ ಪರಿಮಳ ಬಂದರೂ ಆಗುವುದಿಲ್ಲ. ಆದರೆ ಈ ಬೆಳ್ಳುಳ್ಳಿ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಅಲಿಸಿನ್ ಎಂಬ ಅಂಶವು ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮುಕ್ತಿ ನೀಡುತ್ತದೆ. ಜೊತೆಗೆ ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಅಡಕವಾಗಿದ್ದು ದೇಹಕ್ಕೆ ಶಕ್ತಿ ನೀಡುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಆದರೆ ಇವುಗಳನ್ನು ಬೇಸಿಗೆಯಲ್ಲಿ ಸೇವನೆ ಮಾಡಬಹುದೇ ಎಂಬ ಗೊಂದಲ ಹಲವರನ್ನು ಕಾಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರು ಹೇಳುವ ಪ್ರಕಾರ ಬೇಸಿಗೆ (Summer) ಸಮಯದಲ್ಲಿ ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಾಗಿಸುವ ಸ್ವಭಾವವನ್ನು ಹೊಂದಿರುತ್ತದೆ. ಇದರರ್ಥ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೇಸಿಗೆಯಲ್ಲಿ ಹವಾಮಾನವು ಈಗಾಗಲೇ ಬಿಸಿಯಾಗಿರುವುದರಿಂದ ಇವುಗಳನ್ನು ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ನಮ್ಮ ದೇಹದ ಶಾಖವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾದರೆ ಬೆಳ್ಳುಳ್ಳಿಯನ್ನು ಬೇಸಿಗೆ ಸಮಯದಲ್ಲಿ ಯಾರು ಸೇವನೆ ಮಾಡಬಾರದು? ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಯಾರಿಗೆ ಒಳ್ಳೆಯದಲ್ಲ?
ಬಾಯಿಯೊಳಗೆ ಹುಣ್ಣು, ಅಜೀರ್ಣ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಿರುವವರು ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು. ಏಕೆಂದರೆ ಇದು ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮಗೆ ತಿನ್ನಲೇಬೇಕಾದರೆ ವೈದ್ಯರ ಸಲಹೆ ತೆಗೆದುಕೊಂಡ ಆ ನಂತರವೇ ಸೇವನೆ ಮಾಡುವುದು ಬಹಳ ಸೂಕ್ತ.
ಇದನ್ನೂ ಓದಿ: ಕೀಲು ನೋವು ಬರಬಾರದು ಎಂದರೆ ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಯಾರು ಸೇವನೆ ಮಾಡಬಹುದು?
ಬೆಳ್ಳುಳ್ಳಿಯಲ್ಲಿರುವ ಆರೋಗ್ಯಕರ ಗುಣಲಕ್ಷಣಗಳು ಋತುಮಾನದ ಕಾಯಿಲೆಗಳಾದ ಜ್ವರ, ಶೀತ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ಹಸಿಯಾಗಿ ಸೇವನೆ ಮಾಡುವ ಬದಲು ಹುರಿದು ಆ ಬಳಿಕ ಅವುಗಳನ್ನು ತರಕಾರಿಗಳೊಂದಿಗೆ ಬೆರೆಸಿ ಸೇವನೆ ಮಾಡಬಹುದು. ಆದರೆ ಪ್ರತಿದಿನ ಒಂದೆರಡು ಬೆಳ್ಳುಳ್ಳಿ ಎಸಳುಗಳಿಗಿಂತ ಜಾಸ್ತಿ ಸೇವನೆ ಮಾಡಬೇಡಿ. ಹಸಿ ಬೆಳ್ಳುಳ್ಳಿ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ಬ್ಯಾಕ್ಟೀರಿಯಾಗಳಿಂದ ದೂರವಿರಿಸುತ್ತದೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಜೀರ್ಣಶಕ್ತಿಯ ಕೊರತೆ ಇದ್ದರೆ ಅಂತವರು ಬೇಸಿಗೆಯಲ್ಲಿ ಮಿತವಾಗಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಹುದು. ಇದು ಹೊಟ್ಟೆಯ ಉರಿಯೂತ, ಗ್ಯಾಸ್ ಸಮಸ್ಯೆ, ಅಜೀರ್ಣ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ