AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಕ್ಕಿಗಳ ಹಿಂಡು ʼVʼ ಆಕಾರದಲ್ಲಿಯೇ ಹಾರುವುದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಸಂಗತಿ ತಿಳಿಯಿರಿ

ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಆಗಸದಲ್ಲಿ ಹಕ್ಕಿಗಳ ಹಿಂಡು V ಶೇಪ್‌ನಲ್ಲಿ ಒಂದು ಹಕ್ಕಿಯ ಹಿಂದೆ ಒಂದರಂತೆ ಸಾಲಾಗಿ ಹಾರುವುದನ್ನು ನೋಡಿರುತ್ತೀರಿ ಅಲ್ವಾ. ಪಕ್ಷಿಗಳ ಹಿಂಡು ಹೀಗೆ ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಹಾರುತ್ತಾ ಹೋಗುತ್ತಿರುವುದನ್ನು ನೋಡುವುದೇ ಒಂದು ಚೆಂದ. ಅಷ್ಟಕ್ಕೂ ಈ ಹಕ್ಕಿಗಳು ಏಕೆ ಹೀಗೆ ವಿ ಆಕಾರದಲ್ಲಿಯೇ ಹಾರುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದು ಏನೆಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2025 | 3:18 PM

ಸಂಶೋಧಕರು ಹಕ್ಕಿಗಳು V ಆಕಾರದಲ್ಲಿ ಏಕೆ ಹಾರುತ್ತವೆ ಎಂಬುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ವಿ ಆಕಾರದಲ್ಲಿ ಹಾರುವುದರಿಂದ ಹಕ್ಕಿಗಳ ಹಿಂಡಿಗೆ ಸುಲಭವಾಗಿ  ಹಾರಲು ಸಾಧ್ಯವಾಗುತ್ತದೆ. ಜೊತೆಗೆ ಅವುಗಳು ಹಾರಾಡುವಾಗ ಪರಸ್ಪರ ಡಿಕ್ಕಿ ಹೊಡೆಯುವುದಿಲ್ಲ.

1 / 5
ಪಕ್ಷಿಗಳು ವಿ ಆಕಾರದಲ್ಲಿ ಹಾರುವುದರಿಂದ ಅವುಗಳು ತಮ್ಮ ವಿರುದ್ಧ ದಿಕ್ಕಿನಿಂದ ಬರುವ ಗಾಳಿಯನ್ನು ಭೇದಿಸಿ ಸುಲಭವಾಗಿ ಹಾರಾಡುತ್ತವೆ. ಅಂದರೆ ಮುಂದೆ ಇರುವ ಹಕ್ಕಿ ತನ್ನ ಹಿಂದೆ ಇರುವ ಹಕ್ಕಿಗಳಿಗೆ ಗಾಳಿಯ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ. ಇದು ಹಕ್ಕಿಗಳಿಗೆ ಸುಲಭವಾಗಿ ಹಾರಲು ಅನುವು ಮಾಡಿಕೊಡುತ್ತದೆ.

2 / 5
ಪ್ರತಿಯೊಂದು ಪಕ್ಷಿಗಳ  ಹಿಂಡಿನಲ್ಲಿಯೂ ಒಬ್ಬ ನಾಯಕ ಹಕ್ಕಿ ಇದ್ದು, ಅದು ಉಳಿದವುಗಳನ್ನು ಮುನ್ನಡೆಸುತ್ತದೆ. ಹಾರುವಾಗ, ನಾಯಕ V ಆಕಾರದಲ್ಲಿ ಮುಂಭಾಗದಲ್ಲಿದ್ದರೆ,  ಉಳಿದ ಪಕ್ಷಿಗಳು ನಾಯಕನ ಹಿಂದೆಯೇ ಸಾಲಾಗಿ ಹಾರುತ್ತವೆ. ಹೀಗೆ ಹಾರುವಾಗ ಒಂದು ಹಕ್ಕಿ ದಣಿದಾಗ ಇನ್ನೊಂದು ಹಕ್ಕಿ ತಂಡವನ್ನು ಮುನ್ನಡೆಸುತ್ತವೆ. ಹೀಗೆ ಮಾಡುವುದರಿಂದ ಅವುಗಳ ಶಕ್ತಿ ವ್ಯರ್ಥವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

3 / 5
ಹೆಚ್ಚಿನವರು ಹಕ್ಕಿಗಳು ಸ್ಪರ್ಧೆಯಿಂದ ಹೀಗೆ ಹಾರುತ್ತವೆ ಎಂದುಕೊಳ್ಳುತ್ತಾರೆ. ಆದರೆ ಹಕ್ಕಿಗಳು ಹಾರಾಡಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಹೀಗೆ ವಿ ಶೇಪ್‌ನಲ್ಲಿ ಹಾರುತ್ತವೆ. ಜೊತೆಗೆ ಹೀಗೆ ಹಾರುವಾಗ ತಂಡವನ್ನು ಮುನ್ನಡೆಸುವ ಹಕ್ಕಿ ದಣಿದಾಗ ಇನ್ನೊಂದು ಹಕ್ಕಿ ಅದರ ಜವಾಬ್ದಾರಿಯನ್ನು ವಹಿಸುತ್ತದೆ. ಇದರಿಂದ ಹಕ್ಕಿಗಳ ಶಕ್ತಿಯೂ ಕೂಡಾ ವ್ಯರ್ಥವಾಗುವುದಿಲ್ಲ.

4 / 5
ಹೆಚ್ಚಾಗಿ ವಲಸೆ ಹಕ್ಕಿಗಳು ದೀರ್ಘ ವಲಸೆಯ ಸಂದರ್ಭದಲ್ಲಿ ಅಂದರೆ ದೂರದ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಹಾರಾಟದ ವೇಳೆ ತಮ್ಮ ಶಕ್ತಿಯನ್ನು ಉಳಿಸಲು, ತಮ್ಮ ಗುಂಪಿನ ನಡುವೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ಹಾರಾಟದ ವೇಳೆ ಪರಸ್ಪರ ಡಿಕ್ಕಿಯಾಗುವುದನ್ನು ತಡೆದು ಸರಾಗವಾಗಿ ಹಾರಲು ಹಕ್ಕಿಗಳು ವಿ ಆಕಾರದಲ್ಲಿ ಹಾರುವ ವಿಧಾನವನ್ನು ಅನುಸರಿಸುತ್ತವೆ.

5 / 5
Follow us
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?

ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್

ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ

ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್

ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು

ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್

ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ

ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು