ವಿದೇಶಿ ಯುವಕನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ಸರ್ಜಾ ಪುತ್ರಿ
Arjun Sarja daughter: ಕಳೆದ ವರ್ಷ ಜನವರಿ ತಿಂಗಳಲ್ಲಿ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ, ತಮಿಳಿನ ನಟನೊಡನೆ ವಿವಾಹವಾದರು. ಇದೀಗ ಅವರ ಎರಡನೇ ಮಗಳು ವಿದೇಶಿ ಯುವಕನೊಟ್ಟಿಗೆ ಎಂಗೇಜ್ ಆಗಿದ್ದಾರೆ. ವಿದೇಶದಲ್ಲಿ ಈ ಇಬ್ಬರ ಎಂಗೇಜ್ಮೆಂಟ್ ನಡೆದಿದ್ದು ಇಲ್ಲಿವೆ ನೋಡಿ ಯುವ ಜೋಡಿಯ ರೊಮ್ಯಾಂಟಿಕ್ ಚಿತ್ರಗಳು.
ಅರ್ಜುನ್ ಸರ್ಜಾ ದಶಕದ ಮುಂಚೆಯೇ ಪ್ಯಾನ್ ಇಂಡಿಯಾ ನಟ. ಈಗಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅರ್ಜುನ್ ಸರ್ಜಾಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.
1 / 7
ಕಳೆದ ವರ್ಷ ಜನವರಿ ತಿಂಗಳಲ್ಲಿ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ, ತಮಿಳಿನ ನಟನೊಡನೆ ವಿವಾಹವಾದರು. ಈ ವಿವಾಹ ಕಾರ್ಯಕ್ರಮಕ್ಕೆ ಹಲವಾರು ಸಿನಿಮಾ ತಾರೆಯರು ಆಗಮಿಸಿದ್ದರು.
2 / 7
ಇದೀಗ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ವಿದೇಶಿ ಯುವಕನೊಟ್ಟಿಗೆ ಎಂಗೇಜ್ ಆಗಿದ್ದಾರೆ. ಚಿತ್ರಗಳನ್ನು ಅರ್ಜುನ್ರ ಪುತ್ರಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿಯಿಂದ ಹಂಚಿಕೊಂಡಿದ್ದಾರೆ.
3 / 7
ಅಂಜನಾ ಹೇಳಿರುವಂತೆ ಅವರು ಎಂಗೇಜ್ ಆಗಿರುವ ಯುವಕನೊಟ್ಟಿಗೆ 13 ವರ್ಷದ ಪರಿಚಯ ಅವರಿಗೆ ಇದೆಯಂತೆ. 13 ವರ್ಷ ಆದ ಬಳಿಕ ಮದುವೆಗೆ ಎಸ್ ಹೇಳದೆ ಹೇಗಿರಲಿ ಎಂದಿದ್ದಾರೆ ಅಂಜನಾ.
4 / 7
ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ವಿದೇಶದಲ್ಲಿ ಎಂಗೇಜ್ ಆಗಿದ್ದರೆ. ಅರ್ಜುನ್ ಸರ್ಜಾ ದಂಪತಿಯೂ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
5 / 7
ಅರ್ಜುನ್ ಸರ್ಜಾ ಮಾತ್ರವೇ ಅಲ್ಲದೆ ಅರ್ಜುನ್ ಅವರ ಮೊದಲ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಅವರ ಪತಿ ಸಹ ಈ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಚಿತ್ರಗಳು ಇನ್ಸ್ಟಾಗ್ರಾಂನಲ್ಲಿವೆ.
6 / 7
ಅಂಜನಾ ಅರ್ಜುನ್ ಈ ಹಿಂದೆ ಅವರ ಅಕ್ಕನ ಮದುವೆಗೂ ತಮ್ಮ ಬಾಯ್ಫ್ರೆಂಡ್ ಅನ್ನು ಕರೆದುಕೊಂಡು ಬಂದಿದ್ದರು. ಅವರೊಟ್ಟಿಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಮದುವೆ ಆಗಲಿದ್ದಾರೆ.