ರಿಕ್ಕಿ ರೈ ಮೂಗಿಗೆ ಗುಂಡು ತಾಕಿದೆ, ಮಾತಾಡಿದರೆ ರಕ್ತ ಬರುತ್ತಿದೆ: ಜಗದೀಶ್, ಜಯ ಕರ್ನಾಟಕ ಸಂಘಟನೆ
ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಆಧಾರಿತ ವರದಿಗಳು ಬಿತ್ತರವಾಗುತ್ತಿವೆ, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ, ಅವರೇ ತನಿಖೆಯನ್ನು ಪೂರ್ತಿಗೊಳಿಸಿ ವರದಿ ಸಲ್ಲಿಸಲಿದ್ದಾರೆ, ಹಾಗಾಗಿ ವರದಿ ಸಲ್ಲಿಸುವ ಮೊದಲೇ ಗುಂಡು ಹಾರಿಸಿದ್ದು ಯಾರು ಯಾಕೆ ಹಾರಿಸಿದ್ದು ಅಂತೆಲ್ಲ ತೀರ್ಮಾನಗಳಿಗೆ ಬರೋದು ಬೇಡ ಎಂದು ಜಗದೀಶ್ ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 19: ಇಂದು ಬೆಳಗಿನ ಜಾವ 1 ಗಂಟೆಗೆ ಬಿಡದಿಯಲ್ಲಿ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಜನ ತಮ್ಮದೇ ಆದ ವ್ಯಾಖ್ಯಾನ ನೀಡಲಾರಂಭಿಸಿದ್ದಾರೆ. ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್ (Jagadish) ರಿಕ್ಕಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ರಿಕ್ಕಿಯನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆಯಾದರೂ ಅದೊಂದು ಸ್ಪೆಶಲ್ ರೂಮಿನ ಹಾಗಿದೆ, ಚೇತರಿಸಿಕೊಳ್ಳುತ್ತಿದ್ದಾರೆ, ದೇಹದ ಸೂಕ್ಷ್ಮ ಭಾಗವಾಗಿರುವ ಮೂಗಿಗೆ ಗಾಯವಾಗಿರುವುದರಿಂದ ಮಾತಾಡಲಾಗುತ್ತಿಲ್ಲ, ಎರಡು-ಮೂರು ದಿನ ವಿಶ್ರಾಂತಿ ಬೇಕು ಎಂದು ಜಗದೀಶ್ ಹೇಳಿದರು.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಫೈರಿಂಗ್: ನಾಲ್ವರ ವಿರುದ್ಧ FIR ದಾಖಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ