AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಂಠಿ ಚಹಾ ಅಂದ್ರೆ ಇಷ್ಟನಾ? ಮೇ ತಿಂಗಳು ಮುಗಿಯುವ ತನಕ ಕುಡಿಯಲೇಬೇಡಿ ಯಾಕೆ ಗೊತ್ತಾ?

ಬೇಸಿಗೆಯ ಸಮಯದಲ್ಲಿ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದರಲ್ಲಿಯೂ ಅನೇಕರಿಗೆ ಬೆಳಿಗ್ಗೆ ಶುಂಠಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಬೇಸಿಗೆ ಸಮಯದಲ್ಲಿ ಇವುಗಳ ಸೇವನೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾದರೆ ಇದನ್ನು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶುಂಠಿ ಚಹಾ ಅಂದ್ರೆ ಇಷ್ಟನಾ? ಮೇ ತಿಂಗಳು ಮುಗಿಯುವ ತನಕ ಕುಡಿಯಲೇಬೇಡಿ ಯಾಕೆ ಗೊತ್ತಾ?
Ginger Tea in SummerImage Credit source: Getty Images
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Apr 19, 2025 | 1:03 PM

ಬೇಸಿಗೆಯಲ್ಲಿ, ಹೆಚ್ಚಿನ ಜನರು ತಾಪಮಾನ ಹೆಚ್ಚಾಗುವುದರಿಂದ ತಲೆನೋವು (Headache), ಆಯಾಸ ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೂ ಕೂಡ ಚಹಾ (Tea), ಕಾಫಿ, ಸೇವನೆ ಮಾಡುವುದನ್ನು ಬಿಡುವುದಿಲ್ಲ. ಈ ರೀತಿಯ ಬಿಸಿಯಾಗಿರುವ ಪಾನೀಯಗಳು ಕೆಲವೊಮ್ಮೆ ದೇಹದಲ್ಲಿ ಶಾಖ ಹೆಚ್ಚಾಗುವಂತೆ ಮಾಡುತ್ತದೆ. ಪರಿಣಾಮವಾಗಿ, ಒತ್ತಡ, ಅಸ್ವಸ್ಥತೆ ಮತ್ತು ಅತಿಯಾದ ಬೆವರುವಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳು ವಯಸ್ಸಾದವರು, ಚಿಕ್ಕ ಮಕ್ಕಳು ಮತ್ತು ದೇಹ ಸ್ವಲ್ಪ ತೆಳ್ಳಗಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಮಾಸಗಳಲ್ಲಿ ಸಾಧ್ಯವಾದಷ್ಟು ದೇಹವನ್ನು ತಂಪಾಗಿಡುವುದು ಅವಶ್ಯಕ. ಆದ ಕಾರಣ ಚಹಾ, ಕಾಫಿ ಅದರಲ್ಲಿಯೂ ಶುಂಠಿ ಚಹಾದ (Ginger tea) ಬಳಕೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಆದರೆ ಇದರ ಸೇವನೆ ಮಾಡುವುದರಿಂದ ಯಾವ ರೀತಿಯ ತೊಂದರೆಯಾಗುತ್ತದೆ? ಬೇಸಿಗೆಯಲ್ಲಿ ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಗ್ಯಾಸ್, ಆಮ್ಲೀಯತೆ, ಅಜೀರ್ಣಕ್ಕೆ ಕಾರಣವಾಗಬಹುದು:

ಶುಂಠಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದರಿಂದ ಚಹಾ ಮಾಡಿ ಸೇವನೆ ಮಾಡುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಇದನ್ನು ದಿನದಲ್ಲಿ ಹೆಚ್ಚು ಹೆಚ್ಚು ಬಾರಿ ಕುಡಿಯುವುದರಿಂದ ಗ್ಯಾಸ್, ಆಮ್ಲೀಯತೆ, ಅಜೀರ್ಣ, ಎದೆಯುರಿಯಂತಹ ಸಮಸ್ಯೆಗಳು ಉಂಟಾಗಬಹುದು.ಈಗಾಗಲೇ ತಾಪಮಾನ ಹೆಚ್ಚಾಗಿರುವುದರಿಂದ ಶುಂಠಿ ಚಹಾ ಈ ಸಮಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ಬಾಣಂತಿಯರೇ, ಎದೆ ಹಾಲು ಕಡಿಮೆಯಾದಾಗ ತಪ್ಪದೆ ಈ ಆಹಾರಗಳ ಸೇವನೆ ಮಾಡಿ

ಇದನ್ನೂ ಓದಿ
Image
ಎದೆ ಹಾಲನ್ನು ಹೆಚ್ಚಿಸಿಕೊಳ್ಳಲು ಈ ಆಹಾರಗಳೇ ಬೆಸ್ಟ್
Image
ಪುರುಷರು ಬಿಸಿನೀರಿನ ಸ್ನಾನ ಮಾಡಿದರೆ ಬಂಜೆತನ ಬರುತ್ತಾ?
Image
CT Scan: ಕಾಯಿಲೆ ಪತ್ತೆ ಮಾಡುವ ಈ ಸ್ಕ್ಯಾನಿಂಗ್ ನಿಂದಲೇ ಬರಬಹುದು ಮಾರಕ ರೋಗ
Image
ಮಾವಿನ ಹಣ್ಣಿನ ಮಿಲ್ಕ್ ಶೇಕ್ ಯಾರಿಗೆ ಒಳ್ಳೆಯದು? ಯಾರು ಸೇವನೆ ಮಾಡಬಾರದು?

ತಲೆನೋವು, ಆಯಾಸ ಉಂಟಾಗಬಹುದು:

ಬೇಸಿಗೆಯಲ್ಲಿ, ದೇಹ ಬೆವರುವುದರಿಂದ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಬಿಸಿ ಬಿಸಿಯಾಗಿರುವ ಶುಂಠಿ ಚಹಾವನ್ನು ಕುಡಿಯುವುದರಿಂದ ಇದು ದೇಹದಲ್ಲಿನ ನೀರಿನ ಅಂಶವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಇದು ನಿರ್ಜಲೀಕರಣ, ತಲೆನೋವು, ಆಯಾಸ, ಅತಿಯಾದ ಬಾಯಾರಿಕೆ ಮತ್ತು ದೇಹದಲ್ಲಿ ದೌರ್ಬಲ್ಯಕ್ಕೂ ಕಾರಣವಾಗಬಹುದು. ಅತಿಯಾಗಿ ಹೊರಗೆ ಹೋಗುವವರು ಅಥವಾ ನೀರು ಕುಡಿಯದವರು ಈ ರೀತಿಯ ಸಮಸ್ಯೆಗೆ ಒಳಗಾಗುತ್ತಾರೆ.

ನಿದ್ರಾಹೀನತೆಗೆ ಕಾರಣವಾಗಬಹುದು:

ಬೇಸಿಗೆಯಲ್ಲಿ ಶುಂಠಿ ಚಹಾವನ್ನು ಪದೇ ಪದೇ ಕುಡಿಯುವುದರಿಂದ ಕೆಲವರಿಗೆ ಅತಿಸಾರ, ಕರುಳಿನ ಸಮಸ್ಯೆಗಳು, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಮತ್ತು ಚರ್ಮದ ಅಲರ್ಜಿಗಳಂತಹ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ಶುಂಠಿ ಚಹಾವನ್ನು ರಾತ್ರಿ ಸಮಯದಲ್ಲಿ ಕುಡಿಯುವುದರಿಂದ, ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಬಹುದು. ಇದಲ್ಲದೆ, ಅಲರ್ಜಿ ಮತ್ತು ಉಸಿರಾಟ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಬೇಸಿಗೆಯಲ್ಲಿ ಶುಂಠಿ ಚಹಾದ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.

ರಕ್ತವನ್ನು ತೆಳುಗೊಳಿಸುತ್ತದೆ:

ಶುಂಠಿ ಚಹಾವು ರಕ್ತ ತೆಳುವಾಗಲು ಕಾರಣವಾಗಬಹುದು. ಹಾಗಾಗಿ ಇದು ಚಳಿಗಾಲಕ್ಕೆ ಒಳ್ಳೆಯದಾಗಿದ್ದು ಬೇಸಿಗೆ ಸಮಯದಲ್ಲಿ ಸೇವನೆ ಮಾಡುವುದು ಹಾನಿಕಾರಕವಾಗಿದೆ. ಅದರಲ್ಲಿಯೂ ರಕ್ತ ತೆಳುಗೊಳಿಸುವ ಔಷಧಿಗಳನ್ನು ಬಳಸುವವರು ಬಹಳ ಜಾಗರೂಕರಾಗಿರಬೇಕು. ಚಳಿಗಾಲಕ್ಕೆ ಬಹಳ ಉಪಯುಕ್ತವಾಗಿರುವ ಪಾನೀಯ ಬೇಸಿಗೆ ಸಮಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮಿತವಾಗಿ ಕುಡಿಯುವುದು ಅಥವಾ ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಬಹಳ ಉತ್ತಮ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sat, 19 April 25