ಭಾರತೀಯರು ಡೋಲೋ 650ಯನ್ನು ಕ್ಯಾಡ್ಬರಿ ಜೆಮ್ಸ್ ನಂತೆ ಸೇವಿಸುತ್ತಾರೆ! ವೈದ್ಯರ ಪೋಸ್ಟ್ ವೈರಲ್
ಜ್ವರ ಅಥವಾ ತಲೆನೋವು ಬರುವಾಗಲೇ ಡೋಲೊ 650 ಹೊಟ್ಟೆ ಸೇರಿರುತ್ತದೆ. ಈ ಔಷಧಿ ಅಲ್ಪಾವಧಿ ಸಮಸ್ಯೆಯನ್ನು ಪರಿಹರಿಸಬಹುದಾದರೂ, ದೀರ್ಘಾವಧಿಯಲ್ಲಿ ನಾನಾ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದು ತಿಳಿದಿದ್ದರೂ ಕೂಡ ಅದನ್ನು ಸೇವನೆ ಮಾಡುತ್ತೇವೆ. ಇದನ್ನೇ, ವೈದ್ಯರೊಬ್ಬರು ಭಾರತೀಯರು ಡೋಲೊ 650 ಮಾತ್ರೆಯನ್ನು ಕ್ಯಾಡ್ಬರಿ ಜೆಮ್ಸ್ ನಂತೆ ಸೇವನೆ ಮಾಡುತ್ತಾರೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರ ಕುರಿತಾದ ಮಾಹಿತಿ ಇಲ್ಲಿದೆ.

ನವದೆಹಲಿ, ಏಪ್ರಿಲ್ 18: ಭಾರತೀಯರು ಜ್ವರ, ಕೆಮ್ಮು, ತಲೆ ನೋವಿನಂತಹ ಸಮಸ್ಯೆಗಳು ಬಂದಾಗ ಸ್ವಯಂ ಆರೈಕೆ ಮಾಡಿಕೊಳ್ಳುವುದೇ ಹೆಚ್ಚು. ಅಂದರೆ ಸರಳ ಮನೆಮದ್ದುಗಳಿಂದ ಹಿಡಿದು ಕೆಲವು ಔಷಧಗಳನ್ನು ಸೇವನೆ ಮಾಡುವ ಮೂಲಕ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳುತ್ತಾರೆ. ಹೀಗೆ ಸಣ್ಣ ಪುಟ್ಟ ಕಾಯಿಲೆ ಬಂದಾಗ ತೆಗೆದುಕೊಳ್ಳುವ ಔಷಧಿಗಳಲ್ಲಿ ಡೋಲೊ 650 ಅಗ್ರ ಸ್ಥಾನದಲ್ಲಿರುತ್ತದೆ. ಈ ರೀತಿ ಜ್ವರ, ಶೀತ, ಕೆಮ್ಮು, ತಲೆನೋವು ಬಂದರೆ ತಾವೇ ಮಾತ್ರೆ ತೆಗೆದುಕೊಳ್ಳುವುದರಿಂದ, ಆರೋಗ್ಯ (Health) ತಜ್ಞ ಡಾ. ಪಳನಿಯಪ್ಪನ್ ಮಾಣಿಕಂ ಎನ್ನುವವರು “ಭಾರತೀಯರು ಡೋಲೊ 650 (Dolo 650) ಮಾತ್ರೆಯನ್ನು ಕ್ಯಾಡ್ಬರಿ ಜೆಮ್ಸ್ (Cadbury Gems) ನಂತೆ ಸೇವನೆ ಮಾಡುತ್ತಾರೆ” ಎಂದು ಹೇಳಿದ್ದಾರೆ. ಇದೀಗ ಈ ಕುರಿತಾದ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.
ಡೋಲೊ 650ಯಂತಹ ಮಾತ್ರೆಗಳು ಅಲ್ಪಾವಧಿಯಲ್ಲಿ ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದಾದರೂ ಕೂಡ, ದೀರ್ಘಾವಧಿಯಲ್ಲಿ ಇದು ನಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ಇದೆಲ್ಲಾ ತಿಳಿದಿದ್ದರೂ ಕೂಡ ಆ ಮಾತ್ರೆಗಳ ಸೇವನೆ ಮಾಡುವುದನ್ನು ತಪ್ಪಿಸುವುದಿಲ್ಲ. ಇನ್ನೇನು ಜ್ವರ ಬರುತ್ತದೆ ಎನ್ನುವಾಗಲೇ ಡೋಲೊ 650 ಹೊಟ್ಟೆ ಸೇರಿರುತ್ತದೆ. ಮನೆಯಲ್ಲಿ ದಿನಸಿ ಖಾಲಿಯಾಗುವುದಕ್ಕಿಂತ ಮೊದಲು ಎಲ್ಲವೂ ಯಾವ ರೀತಿ ಮತ್ತೆ ಭರ್ತಿಯಾಗುತ್ತವೆಯೋ ಹಾಗೆಯೇ ಮನೆಯಲ್ಲಿ ಡೋಲೊ 650 ಮಾತ್ರೆ ಖಾಲಿ ಆಗಲು ಬಿಡುವುದಿಲ್ಲ. ಈ ರೀತಿ ಅತಿಯಾಗಿ ಮಾತ್ರೆ ಸೇವನೆ ಮಾಡುವ ಅಭ್ಯಾಸವನ್ನೇ ಡಾ. ಪಳನಿಯಪ್ಪನ್ ಮಾಣಿಕಂ ಎನ್ನುವವರು ಭಾರತೀಯರು ಡೋಲೊ 650 ಮಾತ್ರೆಯನ್ನು ಕ್ಯಾಡ್ಬರಿ ಜೆಮ್ಸ್ ಗಳ ರೀತಿಯಲ್ಲಿ ಸೇವನೆ ಮಾಡುತ್ತಾರೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Indians take Dolo 650 like it’s cadbury gems
— Palaniappan Manickam (@drpal_manickam) April 14, 2025
ಇದನ್ನೂ ಓದಿ: Viral: ಕಬ್ಬಿನ ಹಾಲು ಮಾರಾಟ ಮಾಡುವ ಮಹಿಳೆಯ ವ್ಯಾಪಾರ ವಿಳಾಸವನ್ನು ಗೂಗಲ್ ಮ್ಯಾಪ್‌ಗೆ ಸೇರಿಸಿದ ಯುವತಿಯ ಕಾರ್ಯಕ್ಕೆ ಶ್ಲಾಘನೆ
ಈ ಪೋಸ್ಟ್ ಶೇರ್ ಮಾಡಿದಾಗಿನಿಂದ ಸುಮಾರು 1.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಈ ಪೋಸ್ಟ್ ನೋಡಿದವರು ತಮ್ಮ ಮನೆಯಲ್ಲಿಯೂ ಇದೆ ರೀತಿ ಪರಿಸ್ಥಿತಿ ಇದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು “ಡೋಲೊ 650 ಈಗ ದಿನನಿತ್ಯ ತೆಗೆದುಕೊಳ್ಳುವ ವಿಟಮಿನ್ ಆಗಿದೆ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಈ ರೀತಿಯ ಅಭ್ಯಾಸ ನಮ್ಮ ವೈದ್ಯಕೀಯ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ? ನಮ್ಮಲ್ಲಿ ಯಾವುದೇ ರೀತಿಯ ಪ್ರೋಟೋಕಾಲ್ ಇಲ್ಲದೆಯೇ ತಾವೇ ತಮಗೆ ವೈದ್ಯರಾಗಿರುತ್ತಾರೆ ಎಂದಿದ್ದಾರೆ”
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ