AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಯಿಂದ ಇತಿಹಾಸ ಕಲಿಯಬೇಡಿ; ನೆಹರು ಬಗ್ಗೆಯೇ ತಪ್ಪು ಹೇಳಿದ್ದಕ್ಕೆ ಬಿಜೆಪಿ ಸಂಸದ ವ್ಯಂಗ್ಯ

ರಾಹುಲ್ ಗಾಂಧಿ ಯೂಟ್ಯೂಬ್​ ಚಾನೆಲ್​ಗಾಗಿ ನೀಡಿದ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನೆಹರೂ ನಮಗೆ ರಾಜಕೀಯವನ್ನು ಕಲಿಸಲಿಲ್ಲ. ಅವರು ಭಯವನ್ನು ಎದುರಿಸಲು ಮತ್ತು ಸತ್ಯದ ಪರವಾಗಿ ನಿಲ್ಲಲು ಕಲಿಸಿದರು. ದಬ್ಬಾಳಿಕೆಯನ್ನು ವಿರೋಧಿಸಲು ಮತ್ತು ಅಂತಿಮವಾಗಿ ಸ್ವಾತಂತ್ರ್ಯವನ್ನು ಪಡೆಯಲು ಅವರು ಭಾರತೀಯರಿಗೆ ಧೈರ್ಯವನ್ನು ನೀಡಿದರು ಎಂದು ರಾಹುಲ್ ಹೇಳಿದ್ದರು. 92 ಲಕ್ಷ ಚಂದಾದಾರರನ್ನು ಹೊಂದಿರುವ ರಾಹುಲ್ ಗಾಂಧಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಮಹಾತ್ಮ ಗಾಂಧಿ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಅವರು ನೀಡಿದ ಕೆಲವು ಮಾಹಿತಿಗಳು ಸುಳ್ಳು ಎಂದು ಬಿಜೆಪಿ ಸಂಸದ ಲೆಹೆರ್ ಸಿಂಗ್ ಟೀಕಿಸಿದ್ದಾರೆ.

ರಾಹುಲ್ ಗಾಂಧಿಯಿಂದ ಇತಿಹಾಸ ಕಲಿಯಬೇಡಿ; ನೆಹರು ಬಗ್ಗೆಯೇ ತಪ್ಪು ಹೇಳಿದ್ದಕ್ಕೆ ಬಿಜೆಪಿ ಸಂಸದ ವ್ಯಂಗ್ಯ
Rahul Gandhi Interview
ಸುಷ್ಮಾ ಚಕ್ರೆ
|

Updated on: Apr 19, 2025 | 10:39 PM

Share

ನವದೆಹಲಿ, ಏಪ್ರಿಲ್ 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ನೀಡಿದ ಸಂದರ್ಶನದಲ್ಲಿ ನೆಹರು, ಮಹಾತ್ಮ ಗಾಂಧೀಜಿಯ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ, ಅವರ ಕುಟುಂಬ ಮತ್ತು ಬ್ರಿಟಿಷ್ ಆಡಳಿತದಿಂದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ವಿವರಿಸುವಲ್ಲಿನ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಟೀಕಿಸಿದ್ದಾರೆ. 92 ಲಕ್ಷ ಚಂದಾದಾರರನ್ನು ಹೊಂದಿರುವ ರಾಹುಲ್ ಗಾಂಧಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಮಹಾತ್ಮ ಗಾಂಧಿ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಮಾತನಾಡಿದ್ದಾರೆ ಮತ್ತು ರಾಜಕೀಯದಲ್ಲಿ ಅವರು ಕೈಗೊಂಡ ಪ್ರಯಾಣದ ಬಗ್ಗೆಯೂ ಈ ಸುದೀರ್ಘ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಸಾಹತುಶಾಹಿ ಶಕ್ತಿಯ ವಿರುದ್ಧ ಮಹಾತ್ಮ ಗಾಂಧಿಯವರ ಹೋರಾಟ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿರುವ ರಾಹುಲ್ ಗಾಂಧಿ “ಮಹಾತ್ಮಾ ಗಾಂಧಿಯನ್ನು ಯುಕೆಯಲ್ಲಿ ರೈಲಿನಿಂದ ಹೊರಗೆಸೆಯಲಾಯಿತು. ಅದಾದ ನಂತರ ನನ್ನ ಮುತ್ತಜ್ಜ ನೆಹರು ಮತ್ತು ಅವರ ಕಸಿನ್​ಗಳು ಸೇಡು ತೀರಿಸಿಕೊಂಡರು” ಎಂದು ಹೇಳಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಲಹರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇಂಗ್ಲೆಂಡ್​ನಲ್ಲಿ ಮಹಾತ್ಮಾ ಗಾಂಧಿಯನ್ನು ರೈಲಿನಿಂದ ಹೊರಗೆಸೆದ ಘಟನೆ ಎಂದಿಗೂ ಸಂಭವಿಸಿಯೇ ಇಲ್ಲ. ರಾಹುಲ್ ಗಾಂಧಿ ತಮ್ಮ ಮುತ್ತಜ್ಜ ಪಂಡಿತ್ ನೆಹರು ಬಗ್ಗೆ ಮಾತನಾಡುತ್ತಿದ್ದರಿಂದ ನಾನು ಈ ಸಂದರ್ಶನವನ್ನು ಕುತೂಹಲದಿಂದ ನೋಡಿದೆ. ಆದರೆ, ಅವರು (2 ನಿಮಿಷ 40 ಸೆಕೆಂಡುಗಳಲ್ಲಿ) ಇಂಗ್ಲೆಂಡ್‌ನಲ್ಲಿ ಮಹಾತ್ಮ ಗಾಂಧಿಯನ್ನು ರೈಲಿನಿಂದ ಹೊರಗೆಸೆಯಲಾಯಿತು ಎಂದು ಹೇಳಿದ್ದನ್ನು ಕೇಳಿದಾಗ ನನಗೆ ತುಂಬಾ ಆಘಾತವಾಯಿತು” ಎಂದು ಸಿರೋಯಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿ ರದ್ದು; ಅಹಮದಾಬಾದ್‌ನ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ

“ನಾನು ನನ್ನ ಇನ್ನೊಂದು ಫೋನ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ. ರಾಹುಲ್ ಗಾಂಧಿ ಈ ತಪ್ಪನ್ನು ಮರೆಮಾಚಲು ಎಡಿಟ್ ಮಾಡಬಹುದು ಎಂಬ ಕಾರಣಕ್ಕೆ ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ. ರಾಹುಲ್ ಗಾಂಧಿಯಿಂದ ಯಾರೂ ಇತಿಹಾಸವನ್ನು ಕಲಿಯಬಾರದು. ಹೆಚ್ಚು ಶಿಕ್ಷಣ ಪಡೆಯದ ನನ್ನಂತಹ ವ್ಯಕ್ತಿಗೂ ಗಾಂಧಿ ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರಗೆಸೆಯಲಾಗಿತ್ತು ಎಂದು ತಿಳಿದಿದೆ. ನೆಹರೂ ಕುಟುಂಬದ ಕುಡಿಯಾದ ರಾಹುಲ್ ಗಾಂಧಿಯ ಈ ತಪ್ಪನ್ನು ಬುದ್ಧಿವಂತ ಕಾಂಗ್ರೆಸ್ಸಿಗರು ಮತ್ತು ಸಂದೀಪ್ ದೀಕ್ಷಿತ್ ಅವರಂತಹ ಒಳ್ಳೆಯ ವ್ಯಕ್ತಿ ಕೂಡ ಗುರುತಿಸಲಿಲ್ಲ ಎಂದು ದುಃಖವಾಗಿದೆ” ಎಂದು ಬಿಜೆಪಿ ಸಂಸದ ಲೆಹೆರ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: National Herald case: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಸಿದ ಇಡಿ

ದಕ್ಷಿಣ ಆಫ್ರಿಕಾದ ನಟಾಲ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾಗ ಮಹಾತ್ಮ ಗಾಂಧಿಯವರು ಜೂನ್ 7, 1893ರಂದು ಡರ್ಬನ್‌ನಿಂದ ಪ್ರಿಟೋರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆ ರೈಲಿನ ಸೀಟಿನಿಂದ ಹೊರಗೆ ಎಸೆಯಲ್ಪಟ್ಟರು. “ಗಾಂಧಿ ಅವರ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ತಮ್ಮ ಮುತ್ತಜ್ಜನಾದ ನೆಹರು ಮತ್ತು ಅವರ ಕಸಿನ್​ಗಳು ಕೆಲವು ಬ್ರಿಟಿಷರನ್ನು ಪ್ರಥಮ ದರ್ಜೆಯ ಬೋಗಿಗಳಿಂದ ಹೊರಹಾಕಲು ಅಲಹಾಬಾದ್ ರೈಲ್ವೆ ನಿಲ್ದಾಣಕ್ಕೆ ಹೋದರು ಎಂದು ರಾಹುಲ್ ಸಂದರ್ಶನದಲ್ಲಿ ಹೇಳುತ್ತಾರೆ. ಆದರೆ, ಜೂನ್ 1893ರಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಅವರನ್ನು ರೈಲಿನಿಂದ ಹೊರಗೆಸೆದಾಗ ನೆಹರು ಜಿ ಕೇವಲ 4 ವರ್ಷ ವಯಸ್ಸಿನವರಾಗಿದ್ದರು. 4 ವರ್ಷದ ಮಗುವೊಂದು ಪ್ರತಿಭಟನೆ ನಡೆಸಲು ಅಲಹಾಬಾದ್‌ನ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದನೇ?” ಎಂದು ಸಿರೋಯಾ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ