ಶಿಕ್ಷಣ, ಆರೋಗ್ಯ ಮಾತ್ರವಲ್ಲ, ಪತಂಜಲಿ ಗುಲಾಬ್ ಸಿರಪ್‌ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’
Patajali's Moto: ಪತಂಜಲಿ ಆಯುರ್ವೇದವು ಕಾರ್ಬೊನೇಟೆಡ್ ಮತ್ತು ಕೆಫೀನ್ ಪಾನೀಯಗಳಿಗೆ ಪರ್ಯಾಯವಾಗಿ ನೈಸರ್ಗಿಕ ಭಾರತೀಯ ಪಾನೀಯಗಳನ್ನು ಪರಿಚಯಿಸಿದೆ. ಗುಲಾಬಿ, ಮಾವಿನ, ಮತ್ತು ಮರಸೇಬು ರಸಗಳು ಇದರ ಉದಾಹರಣೆಗಳು. ರೈತರಿಂದ ನೇರ ಖರೀದಿಯ ಮೂಲಕ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ಲಾಭದ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗಾಗಿ ಬಳಸಲಾಗುತ್ತದೆ, ಇದು ರಾಷ್ಟ್ರ ಸೇವೆಗೆ ಪತಂಜಲಿಯ ಬದ್ಧತೆಯನ್ನು ತೋರಿಸುತ್ತದೆ.

ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಆಯುರ್ವೇದವು (Patanjali Ayurveda) ಕಾರ್ಬೊನೇಟೆಡ್ ನೀರು ಆಧಾರಿತ ಪಾನೀಯಗಳು, ಸೋಡಾ ಆಧಾರಿತ ಪಾನೀಯಗಳು ಮತ್ತು ಕೆಫೀನ್ ಆಧಾರಿತ ಪಾನೀಯಗಳ ಹಾನಿಕಾರಕ ಪರಿಣಾಮಗಳಿಂದ (harmful effects) ದೇಶದ ಜನರನ್ನು ರಕ್ಷಿಸಲು ನೈಸರ್ಗಿಕ ಮತ್ತು ಸಾಂಪ್ರದಾಯಿಕ ಭಾರತೀಯ ಪಾನೀಯಗಳನ್ನು (natural drinks) ಪರಿಚಯಿಸಿದೆ. ಇವುಗಳಲ್ಲಿ, ಬೇಸಿಗೆಯಲ್ಲಿ ತಂಪಾಗಿಸಲು ನೆರವಾಗುವ ಗುಲಾಬಿ ಶರಬತ್ತು, ಮಾವಿನ ಹಣ್ಣಿನ ಜ್ಯೂಸ್, ಮರಸೇಬು ಹಣ್ಣಿನ ರಸ, ಗಸಗಸೆ ಪಾನೀಯ ಮೊದಲಾದುವು ಪ್ರಮುಖವಾದ ಪಾನೀಯಗಳಾಗಿವೆ. ಆದರೆ ಪತಂಜಲಿ ಆಯುರ್ವೇದ ಸಂಸ್ಥೆಯು ಈ ಶರಬತ್ಗಳ ಮೂಲಕ ಜನರ ಆರೋಗ್ಯ ಪಾಲನೆಗೆ ನೆರವಾಗುವುದರ ಜೊತೆಗೆ, ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತನ್ನ ತತ್ವದ ಮೇಲೂ ಕೆಲಸ ಮಾಡುತ್ತಿದೆ.
ಜನರ ಆರೋಗ್ಯ ಸೇವೆ
ಪತಂಜಲಿ ಆಯುರ್ವೇದವು ಗುಲಾಬ್ ಸಿರಪ್ ತಯಾರಿಕೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಪಾಕವಿಧಾನವನ್ನು ಬಳಸಿದೆ ಎಂದು ಹೇಳುತ್ತದೆ. ಇಷ್ಟೇ ಅಲ್ಲ, ಇದನ್ನು ತಯಾರಿಸುವ ವಿಧಾನವನ್ನು ಸಹ ನೈಸರ್ಗಿಕವಾಗಿಯೇ ಇಡಲಾಗಿದೆ. ಇದರಿಂದ ಗುಲಾಬಿಯ ನೈಸರ್ಗಿಕ ಗುಣಗಳನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ, ಪತಂಜಲಿ ಆಯುರ್ವೇದವು ರೈತರಿಂದ ನೇರವಾಗಿ ಗುಲಾಬಿಗಳನ್ನು ಖರೀದಿಸುತ್ತದೆ. ಇದರಿಂದ ಮಧ್ಯವರ್ತಿಗಳ ಪಾತ್ರ ಕಡಿಮೆ ಆಗುತ್ತದೆ. ಮಧ್ಯವರ್ತಿಗಳನ್ನು ಬಿಟ್ಟು ನೇರವಾಗಿಯೇ ರೈತರಿಂದ ಖರೀದಿ ಮಾಡುವುದರಿಂದ ಅಶುದ್ಧ ಗುಲಾಬಿಯ ಸರಬರಾಜಾಗುವುದು ಕಡಿಮೆ ಆಗುತ್ತದೆ.
ಅದೇ ರೀತಿ, ಇಸಾವಯಮ ಕೃಷಿಯಲ್ಲಿ ಬೆಳೆಯಲಾಗುವ ಇತರ ಗಿಡಮೂಲಿಕೆಗಳನ್ನು ಉತ್ತರಾಖಂಡದ ಪತಂಜಲಿಯ ಫುಡ್ ಪಾರ್ಕ್ನಲ್ಲಿ ವಿವಿಧ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ. ಪತಂಜಲಿ ಆಯುರ್ವೇದ ಸಂಸ್ಥೆಯು ಮರಸೇಬು ಮತ್ತು ಗಸಗಸೆ ಸಿರಪ್ ಅನ್ನು ನೈಸರ್ಗಿಕ ಮತ್ತು ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುತ್ತದೆ.
ಇದನ್ನೂ ಓದಿ: ಪತಂಜಲಿ ಗುಲಾಬ್ ಶರ್ಬತ್; ಬೇಸಿಗೆಯ ಬಿಸಿಲಿಗೆ ಪರಿಹಾರ, ರೈತರಿಗೂ ಆಧಾರ
ಪ್ರತಿ ಹನಿಯಲ್ಲೂ ‘ರಾಷ್ಟ್ರ ಸೇವೆ’ ನಂಬಿಕೆ
ಪತಂಜಲಿ ಆಯುರ್ವೇದ ತನ್ನ ಉತ್ಪನ್ನಗಳೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತದೆ. ಆಯುರ್ವೇದಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ, ಪತಂಜಲಿ ಈ ಉತ್ಪನ್ನಗಳಿಂದ ಬರುವ ಗಳಿಕೆಯ ದೊಡ್ಡ ಭಾಗವನ್ನು ಸಮಾಜದ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತದೆ. ಪತಂಜಲಿ ಆಯುರ್ವೇದವು ಗುಲಾಬಿ ಶರಬತ್ತು ಮಾತ್ರವಲ್ಲ, ಇತರ ಉತ್ಪನ್ನಗಳಿಂದಲೂ ಲಾಭ ಗಳಿಸುತ್ತದೆ. ಇದರ ಒಂದು ಭಾಗವನ್ನು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣ ಒದಗಿಸಲು ಬಳಸಲಾಗುತ್ತದೆ. ಅದಕ್ಕಾಗಿಯೇ ಪತಂಜಲಿ ಆಯುರ್ವೇದದ ಗುಲಾಬಿ ಸಿರಪ್‌ನ ಪ್ರತಿ ಹನಿಯೂ ‘ರಾಷ್ಟ್ರೀಯ ಸೇವೆ’ಯ ಭರವಸೆಯನ್ನು ನೀಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ