ಹೊಸ ಬಾಯ್ಫ್ರೆಂಡ್ ಜೊತೆ ತಿರುಪತಿಗೆ ಬಂದು ಪೂಜೆ ಸಲ್ಲಿಸಿದ ಸಮಂತಾ
ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಸಮಂತಾ ರುತ್ ಪ್ರಭು ಬಂದಿದ್ದಾರೆ. ಅವರ ಜೊತೆ ರಾಜ್ ನಿಧಿಮೋರು ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಸಮಂತಾ ಮತ್ತು ರಾಜ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಸಾಕಷ್ಟು ದಿನಗಳಿಂದ ಕೇಳಿಬರುತ್ತಿದೆ. ಅದಕ್ಕೆ ಈಗ ಸಾಕ್ಷಿ ಕೂಡ ಸಿಗುತ್ತಿದೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಯಾವಾಗ ಎರಡನೇ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ನಾಗ ಚೈತನ್ಯಗೆ ಡಿವೋರ್ಸ್ ನೀಡಿದ ಬಳಿಕ ಸಮಂತಾ (Samantha) ಸಿಂಗಲ್ ಆಗಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಅವರ ಬದುಕಿನಲ್ಲಿ ಕೂಡ ಹೊಸ ವ್ಯಕ್ತಿಯ ಎಂಟ್ರಿ ಆಗಿದೆ. ನಿರ್ದೇಶಕ ರಾಜ್ ನಿಧಿಮೋರು ಜೊತೆ ಸಮಂತಾ ಅವರು ಓಡಾಡುತ್ತಿದ್ದಾರೆ. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬರುತ್ತಿದೆ. ಅದಕ್ಕೆ ಸಾಕ್ಷಿ ನೀಡುವಂತೆ ಈಗ ಹೊಸ ವಿಡಿಯೋ ವೈರಲ್ ಆಗಿದೆ. ಸಮಂತಾ ಮತ್ತು ರಾಜ್ ನಿಧಿಮೋರು (Raj Nidimoru) ಅವರು ಜೊತೆಯಾಗಿ ತಿರುಪತಿಗೆ ಬಂದಿದ್ದಾರೆ.
ಈ ವರ್ಷ ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಸಮಂತಾ ರುತ್ ಪ್ರಭು ಅವರು ತಮಗೆ ಪ್ರೀತಿ ಚಿಗುರಿರುವ ಬಗ್ಗೆ ಸೂಚನೆ ನೀಡಿದ್ದರು. ಆದರೆ ಯಾರ ಜೊತೆ ಲವ್ ಆಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ಬಳಿಕ ಅವರು ರಾಜ್ ನಿಧಿಮೋರು ಜೊತೆ ಹೆಚ್ಚಾಗಿ ಓಡಾಡುತ್ತಿರುವುದು ಗಮನಿಸಿದ ಎಲ್ಲರಿಗೂ ಅನುಮಾನ ಮೂಡಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿರಬಹುದು ಎಂಬ ಗುಮಾನಿ ಕಾಡುತ್ತಿದೆ.
ಸಮಂತಾ ರುತ್ ಪ್ರಭು ಅವರು ಈಗ ನಿರ್ಮಾಪಕಿ ಕೂಡ ಹೌದು. ‘ಶುಭಂ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಆ ಸಿನಿಮಾ ಮೇ 9ರಂದು ಬಿಡುಗಡೆ ಆಗಲಿದೆ. ರಿಲೀಸ್ ದಿನಾಂಕ ಹತ್ತಿರ ಆಗುತ್ತಿರುವುದರಿಂದ ಅವರು ತಿರುಪತಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ ನಿಧಿಮೋರು ಕೂಡ ಸಾಥ್ ನೀಡಿರುವುದು ಎಲ್ಲರ ಕಣ್ಣು ಕುಕ್ಕಿದೆ. ಅವರಿಬ್ಬರು ಜೊತೆಯಾಗಿ ದೇವಸ್ಥಾನಕ್ಕೆ ಬಂದ ವಿಡಿಯೋ ವೈರಲ್ ಆಗಿದೆ.
View this post on Instagram
ರಾಜ್ ನಿಧಿಮೋರು ಮತ್ತು ಸಮಂತಾ ರುತ್ ಪ್ರಭು ಅವರು ‘ಫ್ಯಾಮಿಲಿ ಮ್ಯಾನ್ 2’, ‘ಸಿಟಾಡೆಲ್: ಹನಿಬನಿ’ ಮುಂತಾದ ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಬ್ಬರ ನಡುವೆ ಆಪ್ತತೆ ಹೆಚ್ಚಾಗಿದೆ. ಈಗ ಅವರು ವೈಯಕ್ತಿಕ ಜೀವನದಲ್ಲೂ ಹೆಚ್ಚು ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ತಮ್ಮಿಬ್ಬರ ರಿಲೇಷನ್ಶಿಪ್ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ವೆಬ್ ಸೀರಿಸ್ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
ಅತ್ತ, ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ ಜೊತೆ ಮದುವೆಯಾಗಿ ಹಾಯಾಗಿದ್ದಾರೆ. ಸಮಂತಾ ಕೂಡ ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:40 pm, Sat, 19 April 25