ಡ್ರಗ್ಸ್ ಕೇಸ್ನಲ್ಲಿ ನಟ ಶೈನ್ ಟಾಮ್ ಚಾಕೋ ಬಂಧನ; ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು
ನಟ ಶೈನ್ ಟಾಮ್ ಚಾಕೋ ಅವರು ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸಿದ್ದಾರೆ. ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ನಟನಿಗೆ ಸಂಕಷ್ಟ ಎದುರಾಗಿದೆ. ಆದರೆ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಅನೇಕ ಆರೋಪಗಳು ಎದುರಾದ ಕಾರಣ ಶೈನ್ ಟಾಮ್ ಚಾಕೋ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟ ಶೈನ್ ಟಾಮ್ ಚಾಕೋ (Shine Tom Chacko) ಮೇಲೆ ಹಲವು ಆರೋಪಗಳು ಎದುರಾಗಿವೆ. ಅವರು ಡ್ರಗ್ಸ್ (Drug) ಬಳಕೆ ಮಾಡುತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶನಿವಾರ (ಏಪ್ರಿಲ್ 19) ಬಂಧಿಸಲಾಯಿತು. ಆದರೆ ಕೆಲವೇ ಗಂಟೆಗಳಲ್ಲಿ ಅವರು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಡ್ರಗ್ಸ್ ಬಳಕೆ ಮಾತ್ರವಲ್ಲದೇ ನಟಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಕೂಡ ಶೈನ್ ಟಾಮ್ ಚಾಕೋ ಮೇಲಿದೆ. ಈ ಕಾರಣದಿಂದ ಅವರ ಇಮೇಜ್ ಹಾಳಾಗಿದೆ. ಅವರನ್ನು ಚಿತ್ರರಂಗದಿಂದ (Malayalam Film Industry) ಬ್ಯಾನ್ ಮಾಡುವ ಸಾಧ್ಯತೆ ಕೂಡ ಇದೆ ಎಂಬ ಮಾತು ಕೇಳಿಬರುತ್ತಿದೆ.
ಶೂಟಿಂಗ್ ವೇಳೆ ಶೈನ್ ಟಾಮ್ ಚಾಕೋ ಅವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ, ಶೈನ್ ಟಾಮ್ ಚಾಕೋ ಉಳಿದುಕೊಂಡಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅವರು ಪೊಲೀಸರ ಕೈಗೆ ಸಿಗದೇ ಪರಾರಿ ಆಗಿದ್ದರು. ಅವರು ಓಡಿಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಬಳಿಕ ನಟನಿಗೆ ನೋಟಿಸ್ ನೀಡಲಾಗಿತ್ತು.
#UPDATE | Ernakulam, Kerala | Malayalam actor Shine Tom Chacko released on bail.
The actor was earlier arrested today by Kochi City North Police for alleged drug use. pic.twitter.com/K68wX3hsIQ
— ANI (@ANI) April 19, 2025
ಕೊಚ್ಚಿ ನಗರ ಪೊಲೀಸರು ಶೈನ್ ಟಾಮ್ ಚಾಕೋ ಅವರನ್ನು ಬಂಧಿಸಿದರು. ಮಾದಕ ವಸ್ತು ಬಳಕೆ ಹಾಗೂ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕೇಸ್ನಲ್ಲಿ ಅವರ ಬಂಧನ ಆಯಿತು. ಹೋಟೆಲ್ನಿಂದ ಪರಾರಿಯಾಗಿ ಓಡಿ ಹೋಗಿದ್ದರ ಬಗ್ಗೆ ಪೊಲೀಸರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ನಟ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಯಾವುದೇ ಮಾದಕ ವಸ್ತು ಪತ್ತೆ ಆಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಬಳಕೆ, ನಟಿಗೆ ಕಿರುಕುಳ ಖ್ಯಾತ ನಟನ ಮೇಲೆ ನಿಷೇಧ ಹೇರುವ ಸಾಧ್ಯತೆ
2002ರಿಂದಲೂ ಶೈನ್ ಟಾಮ್ ಚಾಕೋ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಹಲವಾರು ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಲಯಾಳಂ ಚಿತ್ರರಂಗ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ. ವಿಲನ್ ಪಾತ್ರಗಳಲ್ಲಿ ಅವರು ಮಿಂಚಿದ್ದಾರೆ. ಈಗ ಗಂಭೀರ ಆರೋಪಗಳು ಎದುರಾದ ಕಾರಣ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೈನ್ ಟಾಮ್ ಚಾಕೋ ಅವರು ಜಾಮೀನು ಪಡೆದು ಹೊರಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:36 pm, Sat, 19 April 25