‘ಪೀರಿಯಡ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ’; ಸಮಂತಾ ಬೇಸರ
ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಋತುಚಕ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ಈ ವಿಷಯದ ಬಗ್ಗೆ ಮೌನ ವಹಿಸುವುದನ್ನು ಅವರು ಖಂಡಿಸಿದ್ದಾರೆ. ನಟನೆ ಮತ್ತು ನಿರ್ಮಾಣದಲ್ಲಿ ತೊಡಗಿರುವ ಸಮಂತಾ, 'ಶುಭಂ' ಚಿತ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇತ್ತೀಚೆಗೆ ಸಿನಿಮಾ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿಲ್ಲ. ‘ಖುಷಿ’ ಬಳಿಕ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲ. ಅನಾರೋಗ್ಯದ ಕಾರಣದಿಂದ ಅವರು ಸಿನಿಮಾ ಕೆಲಸ ಕಡಿಮೆ ಮಾಡಿದ್ದಾರೆ. ವೆಬ್ ಸೀರಿಸ್ಗಳತ್ತ ಅವರ ಗಮನ ಇದೆ. ಇವುಗಳ ಜೊತೆ ಸಮಂತಾ ಅವರು ಸಾಮಾಜಿಕ ಕಳಕಳಿ ತೋರಿಸುವ ಕೆಲಸ ಮಾಡುತ್ತಾರೆ. ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆ. ಈಗ ಅವರು ಋತುಚಕ್ರದ ಬಗ್ಗೆ ಮಾತನಾಡಿದ್ದು, ಈ ವಿಚಾರವನ್ನು ಓಪನ್ ಆಗಿ ಮಾತನಾಡಲು ಮುಜುಗರಪಟ್ಟುಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ಹೊರಹಾಕಿದ್ದಾರೆ.
‘ಮಹಿಳೆಯರಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಋತುಚಕ್ರದ ವಿಚಾರಗಳ ಬಗ್ಗೆ ಮಾತನಾಡುವಾಗ ಇನ್ನೂ ಮೌನ ವಹಿಸುತ್ತೇವೆ. ಪಿಸುಮಾತುಗಳಿಂದ ಹೇಳುತ್ತೇವೆ. ಅವಮಾನ ಎಂದು ಭಾವಿಸುತ್ತೇವೆ’ ಎಂದು ಸಮಂತಾ ಅವರು ಬೇಸರ ಹೊರಹಾಕಿದ್ದಾರೆ. ಈ ಮನಸ್ಥಿತಿ ಬದಲಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ವರ್ಷವೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ಸಮಂತಾ ಅಭಿಪ್ರಾಯಪಟ್ಟಿದ್ದಾರೆ.
ಸಮಂತಾ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಶುಭಂ’ ಚಿತ್ರ ರಿಲೀಸ್ಗೆ ರೆಡಿ ಇದೆ. ಇತ್ತೀಚೆಗೆ ಇದರ ಟೀಸರ್ ರಿಲೀಸ್ ಆಗಿದೆ. ಇದರ ಜೊತೆಗೆ ಸಮಂತಾ ಅವರು ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು, ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್ಡಮ್’ ಹೆಸರಿನ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಸಮಂತಾಗೆ ಭಾರಿ ದೊಡ್ಡ ಅವಕಾಶ, ವೃತ್ತಿ ಜೀವನದ ಬಿಗ್ಬಜೆಟ್ ಸಿನಿಮಾದಲ್ಲಿ ನಟನೆ
ಇನ್ನು, ರಾಜ್ ಜೊತೆ ಸಮಂತಾ ಡೇಟಿಂಗ್ ಮಾಡತ್ತಿರುವ ಬಗ್ಗೆ ವರದಿಗಳೂ ಇವೆ. ಆದರೆ, ಇದನ್ನು ಸಮಂತಾ ಅವರು ಖಚಿತಪಡಿಸಿಲ್ಲ. ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರ ಜೊತೆ ಸಮಂತಾ ಕಾಣಿಸಿಕೊಂಡಿರೋದು ಅಚ್ಚರಿ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.