ಸತತ ಸೋಲು, ಸಂಭಾವನೆಯಲ್ಲಿ ಇಳಿಕೆ; ಆದರೂ ನೂರಾರು ಕೋಟಿ ಒಡೆಯ ಚಿಯಾನ್ ವಿಕ್ರಮ್
ಚಿಯಾನ್ ವಿಕ್ರಮ್ ಅವರ ಇತ್ತೀಚಿನ ಚಿತ್ರಗಳು ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ, ಅವರ ಒಟ್ಟು ಆಸ್ತಿ ನೂರಾರು ಕೋಟಿ ರೂಪಾಯಿ ಇದೆ. ಪ್ರತಿ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು, ಈಗ 30 ಕೋಟಿಗೆ ಇಳಿಸಿಕೊಂಡಿದ್ದಾರೆ. ಆದರೂ, ಅವರ ಐಷಾರಾಮಿ ಜೀವನಶೈಲಿ ಮತ್ತು ಬಹುಕೋಟಿ ಮೌಲ್ಯದ ಆಸ್ತಿಗಳು ಅವರ ಜನಪ್ರಿಯತೆಯನ್ನು ಸೂಚಿಸುತ್ತವೆ.

ಚಿಯಾನ್ ವಿಕ್ರಮ್ (Chiyan Vikram) ಅವರಿಗೆ ಇಂದು (ಏಪ್ರಿಲ್ 17) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಚಿಯಾನ್ ವಿಕ್ರಮ್ ನಟನೆಯ ‘ವೀರ ಧೀರ ಸೂರನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಹೆಚ್ಚು ಸದ್ದು ಮಾಡಲೇ ಇಲ್ಲ. ಅವರ ನಟನೆಯ ‘ತಂಗಳಾನ್’ ಸಿನಿಮಾ ಕೂಡ ದೊಡ್ಡ ಯಶಸ್ಸು ಪಡೆದಿಲ್ಲ. ಅವರು ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಘೋಷಣೆ ಆಗೋ ಸಾಧ್ಯತೆ ಇದೆ. ಈಗ ವಿಕ್ರಮ್ ಅವರ ಒಟ್ಟೂ ಆಸ್ತಿ, ಅವರ ಸಂಭಾವನೆ ಬಗ್ಗೆ ನೋಡೋಣ.
ವಿಕ್ರಮ್ ಅವರು ಪ್ರತಿ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿಲ್ಲ. ಈ ಕಾರಣಕ್ಕೆ ಅವರು ಸಂಭಾವನೆಯನ್ನು 30 ಕೋಟಿ ರೂಪಾಯಿಗೆ ಇಳಿಸಿಕೊಂಡಿದ್ದಾರೆ. ವಿಕ್ರಮ್ ಅವರು ಪ್ರತಿಭಾನ್ವಿತ ನಟ. ಹೀಗಾಗಿ, ಅವರ ಕಾಲ್ಶೀಟ್ಗೆ ನಿರ್ಮಾಪಕರು ಕಾಯುತ್ತಾರೆ.
ವಿಕ್ರಮ್ ಅವರ ನೆಟ್ವರ್ತ್ 148 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಟಿವಿ ಕಮರ್ಷಿಯಲ್ಗಾಗಿ 1.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಚಿಯಾನ್ ವಿಕ್ರಮ್ ಅವರು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಚಿಯಾನ್ ವಿಕ್ರಮ್ ಅವರಿಗೆ ಕಾರುಗಳ ಬಗ್ಗೆ ಆಸಕ್ತಿ ಇದೆ. ಅವರ ಬಳಿ ಲ್ಯಾಂಡ್ ಕ್ರ್ಯೂಸರ್ ಪ್ರಾಡೋ, ಆಡಿ ಕ್ಯೂ ರೀತಿಯ ಕೋಟಿ ರೂಪಾಯಿ ಬೆಲೆಯ ಕಾರುಗಳು ಇವೆ. ಅಲ್ಲದೆ, ಆಡಿ ಎ8 (3 ಕೋಟಿ ರಪಾಯಿ), ಪೋರ್ಷಾ 911 ಟರ್ಬೋ (3.8 ಕೋಟಿ ರೂಪಾಯಿ) ಕಾರುಗಳು ಅವರ ಬತ್ತಳಿಕೆಯಲ್ಲಿ ಇವೆ.
ಚಿಯಾನ್ ವಿಕ್ರಮ್ ಅವರು ಚೆನ್ನೈನಲ್ಲಿ ಲಕ್ಷುರಿ ಮನೆ ಹೊಂದಿದ್ದಾರೆ. ಈ ಮನೆಯ ಬೆಲೆ ಕೂಡ ಕೋಟಿ ರೂಪಾಯಿ ಮೌಲ್ಯದಲ್ಲಿ ಇದೆ. ವಿಕ್ರಮ್ ಅವರು ಹೆಚ್ಚಿನ ಸಂಗತಿಯನ್ನು ಗುಪ್ತವಾಗಿ ಇಡೋಕೆ ಬಯಸುತ್ತಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಇದನ್ನೂ ಓದಿ: ‘ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎನಿಸುತ್ತಿದೆ’; ಚಿಯಾನ್ ವಿಕ್ರಮ್ ಭೇಟಿ ಮಾಡಿದ ರಿಷಬ್
ಚಿಯಾನ್ ವಿಕ್ರಮ್ ‘ಧ್ರುವ ನಾಚತಿರಾಮ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡಿದೆ. ಇದಲ್ಲದೆ, ಅವರ 63ನೇ ಸಿನಿಮಾ ಕೂಡ ಘೋಷಣೆ ಆಗಿದೆ. ವಿಕ್ರಮ್ ನಟನೆಯ ಹೊಸ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.