ಚಿತ್ರರಂಗದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪವನ್ ಕಲ್ಯಾಣ್; ಇನ್ನಾದರೂ ಬದಲಾಗ್ತಾರಾ?
ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಚಿತ್ರ ಸೆಟ್ಟೇರಿ ಐದು ವರ್ಷಗಳಾಗಿವೆ. ಆದಾಗ್ಯೂ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂಬುದು ಅಭಿಮಾನಿಗಳ ಕೊರಗು. ರಾಜಕೀಯ ಚಟುವಟಿಕೆಗಳು, ಆರೋಗ್ಯ ಸಮಸ್ಯೆಗಳು ಮತ್ತು VFX ಕೆಲಸಗಳ ಅಪೂರ್ಣತೆಯಿಂದಾಗಿ ಚಿತ್ರದ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದೆ .

ಪವನ್ ಕಲ್ಯಾಣ್ (Pawan Kalyan) ಅವರು ಟಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೊಡ್ಡ ಅಭಿಮಾನಿ ಬಳಗ ಅವರಿಗೆ ಇದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಬ್ಯುಸಿ ಆಗಿರುವ ಕಾರಣಕ್ಕೆ ಸಿನಿಮಾ ಶೂಟ್ಗೆ ಡೇಟ್ಸ್ ಕೊಡಲು ಅವರ ಬಳಿ ಸಮಯವೇ ಇಲ್ಲ. ಈ ಕಾರಣದಿಂದಲೇ ಪವನ್ ಕಲ್ಯಾಣ್ ಪಾಲಿಗೆ ಈಗ ಅತ್ಯಂತ ಕಳಪೆ ದಾಖಲೆಯೊಂದು ಸೇರಿಕೊಂಡಿದೆ. ಅಷ್ಟಕ್ಕೂ ಏನು ಅದು? ಪವನ್ ಕಲ್ಯಾಣ್ ಈ ಘಟನೆಯಿಂದ ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸಾಮಾನ್ಯವಾಗಿ ಒಂದು ಸಿನಿಮಾ ಘೋಷಣೆ ಆದ ಬಳಿಕ ಅದನ್ನು ಗರಿಷ್ಠ ಎಂದರೆ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಆದರೆ, ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾ ಸೆಟ್ಟೇರಿ ಐದು ವರ್ಷ ಕಳೆದರೂ ಅದರ ರಿಲೀಸ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಚಿತ್ರ ಈಗಾಗಲೇ ಹಲವು ಬಾರಿ ಪೋಸ್ಟ್ಪೋನ್ ಆಗಿದೆ. ಈಗ ಸಿನಿಮಾ ಮತ್ತೊಮ್ಮೆ ಮುಂದಕ್ಕೆ ಹೋಗುವ ಸೂಚನೆ ಸಿಕ್ಕಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಮತ್ತೊಮ್ಮೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ ಎಂದು ವರದಿ ಆಗಿದೆ. ಪವನ್ ಕಲ್ಯಾಣ್ ಅವರು ಇತ್ತೀಚೆಗೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇಷ್ಟೇ ಅಲ್ಲ, ಅವರ ಮಗ ಮಾರ್ಕ್ ಶಂಕರ್ ಅಗ್ನಿ ಅವಘಡದಿಂದ ತೊಂದರೆ ಅನುಭವಿಸಿದ್ದಾನೆ. ಈ ಎಲ್ಲಾ ಕಾರಣದಿಂದ ಪವನ್ ಕಲ್ಯಾಣ್ ಅವರು ಶೂಟ್ನಲ್ಲಿ ಭಾಗಿ ಆಗಿಲ್ಲ.
‘ಹರಿ ಹರ ವೀರ ಮಲ್ಲು’ ಸಿನಿಮಾದ ವಿಎಫ್ಎಕ್ಸ್ ಕೆಲಸಗಳು ಕೂಡ ಸಾಕಷ್ಟು ಬಾಕಿ ಉಳಿದುಕೊಂಡಿವೆ. ಇವುಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಮತ್ತೊಮ್ಮೆ ಮುಂದಕ್ಕೆ ಹೋಗಲಿದೆ. ಟಾಲಿವುಡ್ ಇತಿಹಾಸವೊಂದರಲ್ಲಿ ಇಷ್ಟು ದೀರ್ಘ ಸಮಯದಿಂದ ಬಾಕಿ ಉಳಿದುಕೊಂಡಿರೋ ಎಕೈಕ ಸಿನಿಮಾ ಎಂಬ ಕುಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.
ಇದನ್ನೂ ಓದಿ: ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಕಲ್ಯಾಣ್ ಪತ್ನಿ
ಈ ರೀತಿ ಸಾಕಷ್ಟು ಗ್ಯಾಪ್ಗಳು ಉಂಟಾದಾಗ ದೃಶ್ಯಗಳ ಕಾಂಬಿನೇಷನ್ ಹೋಗಿ ಬಿಡುತ್ತದೆ. ಒಂದು ದೃಶ್ಯದಿಂದ ಮತ್ತೊಂದು ದೃಶ್ಯಕ್ಕೆ ಸಾಕಷ್ಟು ವ್ಯತ್ಯಾಸ ಕಾಣುತ್ತದೆ. ಇದು ಸಿನಿಮಾ ಸೋಲಿಗೂ ಕಾರಣ ಆಗಬಹುದು. ಈ ಭಯ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.