ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ
ಬಿಗ್ ಬಾಸ್ ಕನ್ನಡದಲ್ಲಿ ತ್ರಿವಿಕ್ರಂ ಮತ್ತು ಭವ್ಯಾ ಗೌಡರ ನಡುವೆ ಆಪ್ತ ಸಂಬಂಧ ಬೆಳೆಯಿತು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇಬ್ಬರೂ ತಮ್ಮ ವೃತ್ತಿಪರ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಂಬಂಧ ಗೆಳೆತನದ ಮಟ್ಟದಲ್ಲೇ ಮುಂದುವರಿದಿದೆ ಎಂದು ತಿಳಿದುಬಂದಿದೆ. ತ್ರಿವಿಕ್ರಂ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಮತ್ತು ಭವ್ಯಾ ಗೌಡ 'ಕರ್ಣ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತ್ರಿವಿಕ್ರಂ ಅವರ ನಟನೆಯ ‘ಮುದ್ದು ಸೊಸೆ’ ಧಾರಾವಾಹಿ (Muddu Sose Serial) ಇತ್ತೀಚೆಗೆ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಪ್ರತಿಮಾ ಠಾಕೂರ್ ಅವರು ಈ ಧಾರಾವಾಹಿಗೆ ನಾಯಕಿ. ‘ಬಿಗ್ ಬಾಸ್’ನಿಂದ ಸಿಕ್ಕ ಖ್ಯಾತಿಯಿಂದ ಅವರಿಗೆ ಈ ಆಫರ್ ದೊರೆತಿದೆ ಎಂದೇ ಹೇಳಬಹುದು. ಇನ್ನು, ಬಿಗ್ ಬಾಸ್ನಲ್ಲಿ ಅವರ ಆಪ್ತ ಎನಿಸಿಕೊಂಡಿದ್ದ ಭವ್ಯಾ ಗೌಡ ಕೂಡ ಹೊಸ ಧಾರಾವಾಹಿಯಲ್ಲಿ ನಟಿಸಲು ರೆಡಿ ಆಗಿದ್ದಾರೆ. ಹಾಗಾದರೆ, ಭವ್ಯಾ ಗೌಡ ತ್ರಿವಿಕ್ರಂ ಸಂಬಂಧ ಹೇಗಿದೆ? ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಕ್ಲೋಸ್ ಆಗಿದ್ದರು. ಇಬ್ಬರ ಮಧ್ಯೆ ಸಾಕಷ್ಟು ಬಾಂಧವ್ಯ ಬೆಳೆಯಿತು. ತ್ರಿವಿಕ್ರಂ ಅವರು ಪರೋಕ್ಷವಾಗಿ ಪ್ರಪೋಸ್ ಕೂಡ ಮಾಡಿದ್ದರು. ಆದರೆ, ಭವ್ಯಾ ಗೌಡ ಕಡೆಯಿಂದ ಇದಕ್ಕೆ ನೇರವಾಗಿ ಉತ್ತರ ಸಿಕ್ಕಿರಲಿಲ್ಲ. ದೊಡ್ಮನೆಯಿಂದ ಬಂದ ಬಳಿಕ ಇವರ ಸಂಬಂಧ ಹೇಗಿದೆ? ಆ ಬಗ್ಗೆ ತಿಳಿದುಕೊಳ್ಳೋಣ.
ಬಿಗ್ ಬಾಸ್ ಮುಗಿದ ಬಳಿಕ ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಈವರೆಗೆ ಹೆಚ್ಚು ಎಂದರೆ ಎರಡು ಬಾರಿ ಮಾತ್ರ ಭೇಟಿ ಆಗಿದ್ದಾರಂತೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಆದರೆ, ಇಬ್ಬರೂ ಅವರದ್ದೇ ಆದ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಗೆಳೆತನ ಮುಂದುವರಿದರೂ ಅದಕ್ಕೆ ಬೇರೆ ಅರ್ಥ ಇಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ತ್ರಿವಿಕ್ರಂ ಅವರು ಬಿಗ್ ಬಾಸ್ ಮುಗಿದ ಬಳಿಕ ಸಿಸಿಎಲ್ನಲ್ಲಿ ಬ್ಯುಸಿ ಆದರು. ಆ ಬಳಿಕ ಅವರಿಗೆ ‘ಮುದ್ದು ಸೊಸೆ’ ಧಾರಾವಾಹಿಯಿಂದ ಆಫರ್ ಬಂತು. ಅವರು ಇದರಲ್ಲಿ ಭದ್ರೇ ಗೌಡ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇನ್ನು, ಭವ್ಯಾ ಗೌಡ ಅವರಿಗೆ ದೊಡ್ಡ ಆಫರ್ ಸಿಕ್ಕಿದೆ. ಜೀ ಕನ್ನಡದ ‘ಕರ್ಣ’ ಹೆಸರಿನ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಪ್ರೋಮೋ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಈ ಧಾರಾವಾಹಿಗೆ ಕಿರಣ್ ರಾಜ್ ಹೀರೋ. ನಮ್ರತಾ ಗೌಡ ಅವರು ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ವರದಿ ಆಗಿದೆ. ಈಗಲೂ ತ್ರಿವಿಕ್ರಂ ಹಾಗೂ ಭವ್ಯಾ ಮದುವೆ ಆಗಬೇಕು ಎಂದು ಬಯಸುವ ಅನೇಕರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.