Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಹೊಸ್ತಿಲಲ್ಲಿ ವೈಷ್ಣವಿ ಗೌಡ; ‘ಸೀತಾ ರಾಮ’ ಧಾರಾವಾಹಿ ಕಥೆ ಏನು?

ವೈಷ್ಣವಿ ಗೌಡ ಅವರು ಭಾರತೀಯ ವಾಯುಪಡೆಯ ಅನುಕೂಲ್ ಮಿಶ್ರಾ ಅವರನ್ನು ವಿವಾಹವಾಗುತ್ತಿದ್ದಾರೆ. ಇದರಿಂದ ಅವರ 'ಸೀತಾ ರಾಮ' ಧಾರಾವಾಹಿ ಮುಂದುವರಿಯುತ್ತದೆಯೇ ಎಂಬ ಅನುಮಾನ ಮೂಡಿದೆ. ಕೆಲವು ಹೀರೋಯಿನ್​ಗಳು ಮದುವೆ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದುಕೊಂಡ ಉದಾಹರಣೆ ಇದೆ. ಆದರೆ, ವೈಷ್ಣವಿ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಾಗಿದೆ.

ವಿವಾಹದ ಹೊಸ್ತಿಲಲ್ಲಿ ವೈಷ್ಣವಿ ಗೌಡ; ‘ಸೀತಾ ರಾಮ’ ಧಾರಾವಾಹಿ ಕಥೆ ಏನು?
ವೈಷ್ಣವಿ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Apr 16, 2025 | 2:54 PM

ವೈಷ್ಣವಿ ಗೌಡ (Vaishnavi Gowda) ಅವರ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಸಿಕ್ಕಿದೆ. ‘ನಿಮ್ಮ ಮದುವೆ ಯಾವಾಗ?’ ಎಂದೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ. ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೈಷ್ಣವಿ ಮದುವೆ ಆಗುತ್ತಿದ್ದಾರೆ ಎಂದಾಗ ಅವರು ನಟಿಸುತ್ತಿರುವ ‘ಸೀತಾ ರಾಮ’ ಧಾರಾವಾಹಿ ಗತಿ ಏನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದ್ದೂ ಇದೆ. ಇದಕ್ಕೆ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.

‘ಸೀತಾ ರಾಮ’ ಧಾರಾವಾಹಿ ಈಗಾಗಲೇ 400ಕ್ಕೂ ಅಧಿಕ ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಳಿದ ಧಾರಾವಾಹಿಗಳಂತೆ ಈ ಧಾರಾವಾಹಿಯಲ್ಲೂ ಅತ್ತೆ-ಸೊಸೆ ಜಗಳ ಇಲ್ಲವೇ ಇಲ್ಲ ಎಂದೇನೂ ಅಲ್ಲ. ಇದರ ಜೊತೆ ಇನ್ನೂ ಕೆಲವು ವಿಚಾರಗಳನ್ನು ಸೇರಿಸಿ ಧಾರಾವಾಹಿಯನ್ನು ಕಟ್ಟಿಕೊಡಲಾಗುತ್ತಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಅವರು ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ವೈಷ್ಣವಿ ಮದುವೆ ಆದರೂ ಅದು ಧಾರಾವಾಹಿಯ ಮೇಲೆ ಯಾವುದೇ ಪರಿಣಾಮ ಬೀರದು ಎನ್ನಲಾಗಿದೆ.

ಇದನ್ನೂ ಓದಿ
Image
ಮತ್ತೆ ಅರೆಸ್ಟ್ ಆದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್; ಕಾರಣ ಏನು?
Image
ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
Image
ರಶ್ಮಿಕಾ ಸಸ್ಯಾಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಆಗುವುದೇ ಇಲ್ಲ
Image
ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; 5 ಕೋಟಿಗೆ ಡಿಮ್ಯಾಂಡ್

ಕೆಲವು ಹೀರೋಯಿನ್​​ಗಳು ಮದುವೆ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದುಕೊಂಡ ಉದಾಹರಣೆ ಇದೆ. ಇದಕ್ಕೆ ಹಿರಿತೆರೆ ಹಾಗೂ ಕಿರುತೆರೆ ಎಂಬ ಬೇಧವಿಲ್ಲ. ವೈಷ್ಣವಿ ಗೌಡ ಕೂಡ ಈಗ ಬಣ್ಣದ ಲೋಕದಿಂದ ದೂರ ಆಗುತ್ತಾರಾ? ‘ಸೀತಾ ರಾಮ’ ಧಾರಾವಾಹಿ ಕೊನೆ ಆಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ, ಆ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

ವೈಷ್ಣವಿ ಅವರು ವಿವಾಹದ ಬಳಿಕವೂ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸೋದನ್ನು ಮುಂದುವರಿಸುತ್ತಾರೆ. ಅವರು ಮದುವೆ ಬಳಿಕ ಬಣ್ಣ ಹಚ್ಚುವುದಕ್ಕೆ ಅವರ ಭಾವಿ ಪತಿ ಅನುಕೂಲ್ ಮಿಶ್ರಾ ಕಡೆಯಿಂದ ಯಾವುದೇ ವಿರೋಧ ಇಲ್ಲ. ಹೀಗಾಗಿ, ವೈಷ್ಣವಿ ಮದುವೆ ಬಳಿಕವೂ ‘ಸೀತಾ ರಾಮ’ ಧಾರಾವಾಹಿ ಮುಂದುವರಿಯಲಿದೆ. ಇದನ್ನು ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಆಫರ್; ಅನುಕೂಲ್​​ನ ಒಪ್ಪಿದ್ದು ಹೇಗೆ?

ಬಣ್ಣದ ಲೋಕದಲ್ಲಿ ತೊಡಗಿಕೊಂಡಿರುವವರು ವಿವಾಹ ಆಗುವಾಗ ಸಾಕಷ್ಟು ಆಲೋಚನೆ ಮಾಡುತ್ತಾರೆ. ಚಿತ್ರರಂಗ/ಧಾರಾವಾಹಿ ರಂಗದಲ್ಲೇ ಇದ್ದವರಾದರೆ ಅವರಿಗೆ  ಒಳ-ಹೊರವುಗಳು ಗೊತ್ತಿರುತ್ತವೆ. ಆದರೆ, ಚಿತ್ರರಂಗದ ಹೊರಗಿನವರನ್ನು ಮದುವೆ ಆಗಬೇಕು ಎಂದಾಗ ಸಾಕಷ್ಟು ಆಲೋಚಿಸಬೇಕಾಗುತ್ತದೆ. ಈಗ ವೈಷ್ಣವಿ ಗೌಡ ಅವರು ತಮ್ಮ ವೃತ್ತಿ ಜೀವನಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಮುಂದಿನ ಆಲೋಚನೆಗಳನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:52 pm, Wed, 16 April 25