ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಆಫರ್; ಅನುಕೂಲ್ನ ಒಪ್ಪಿದ್ದು ಹೇಗೆ?
ವೈಷ್ಣವಿ ಗೌಡ ಅವರು 300ಕ್ಕೂ ಹೆಚ್ಚು ಮದುವೆ ಪ್ರಸ್ತಾಪಗಳನ್ನು ಪಡೆದ ನಂತರ ಉದ್ಯಮಿ ಅನುಕೂಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಅವರಿಗೆ ಅಪಾರ ಮದುವೆ ಪ್ರಸ್ತಾಪಗಳು ಬಂದಿದ್ದವು ಎಂದು ವರದಿಯಾಗಿದೆ. ಆದರೆ, ತಮಗೆ ಹೊಂದುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವರು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
Updated on:Apr 15, 2025 | 11:06 AM

ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಕೊನೆಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಕಾಯ್ ಹೆಸರಿನ ಉದ್ಯಮಿ ಜೊತೆ ಅವರ ಎಂಗೇಜ್ಮೆಂಟ್ ನಡೆದಿದೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಗುಟ್ಟಾಗಿ ನಡೆದಿದೆ. ಅವರು ‘ಸೀತಾ ರಾಮ’ ಧಾರಾವಾಹಿ ಕೆಲಸಗಳ ಮಧ್ಯೆ ಬ್ರೇಕ್ ಪಡೆದು ಅದ್ದೂರಿಯಾಗಿ ತಮ್ಮ ವಿಶೇಷ ದಿನವನ್ನು ಆಚರಿಸಿದ್ದಾರೆ. ವೈಷ್ಣವಿ ಹಾಗೂ ಅಕಾಯ್ಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಆಗುತ್ತಿರುವ ಅಕಾಯ್ ಜೊತೆ ನಿಂತು ಅವರು ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಭರ್ಜರಿ ಲೈಕ್ಸ್ ಕೂಡ ಸಿಕ್ಕಿದೆ.

ವೈಷ್ಣವಿ ಗೌಡ ಅವರು ಬಿಗ್ ಬಾಸ್ ಸೀಸನ್ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ನಲ್ಲಿ ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗಿತ್ತು. ಕೊವಿಡ್ ಬಂದ ಕಾರಣ ಬಿಗ್ ಬಾಸ್ನ ಅರ್ಧಕ್ಕೆ ನಿಲ್ಲಿಸಿ ಆ ಬಳಿಕ ಶುರು ಮಾಡಲಾಯಿತು. ಮನೆಗೆ ಹೋಗಿ ಬಂದ ಗ್ಯಾಪ್ನಲ್ಲಿ ವೈಷ್ಣವಿಗೆ ಭರ್ಜರಿ ಮದುವೆ ಆಫರ್ಗಳು ಬಂದಿದ್ದವು.

‘43 ದಿನ ಹೊರಗಡೆ ಇದ್ರಿ, ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು’ ಎಂದು ವೇದಿಕೆ ಮೇಲೆ ಸುದೀಪ್ ಕೇಳಿದ್ದರು. ಆಗ ವೈಷ್ಣವಿ, ‘200ರಿಂದ 300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಸಾರ್’ ಎಂದಿದ್ದರು ವೈಷ್ಣವಿ.

ಈ ವೇಳೆ ವೈಷ್ಣವಿ ಮತ್ತೂ ಒಂದು ಮಾತು ಹೇಳಿದ್ದರು. ‘ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ’ ಎಂದಿದ್ದರು. ಈಗ ಅಕಾಯ್ ವೈಬ್ಗೆ ವೈಷ್ಣವಿ ಕನೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಅವರು ಮದುವೆ ಆಗಲು ಒಪ್ಪಿದ್ದಾರೆ.
Published On - 8:44 am, Tue, 15 April 25



















