- Kannada News Photo gallery Cricket photos Lockie Ferguson Injury: Punjab Kings Face Major Blow in IPL 2025
IPL 2025: ಪಂಜಾಬ್ ಕಿಂಗ್ಸ್ಗೆ ಬಿಗ್ ಶಾಕ್; ಟೂರ್ನಿಯಿಂದ ಹೊರಬಿದ್ದ ತಂಡದ ಸ್ಟಾರ್ ಪ್ಲೇಯರ್
Lockie Ferguson Injury: 2025ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ವೇಗಿ ಲಾಕಿ ಫರ್ಗುಸನ್ ಗಾಯಗೊಂಡು ಇಡೀ ಸೀಸನ್‌ನಿಂದ ಹೊರಗುಳಿದಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಅವರ ಗಾಯ ಗಂಭೀರವಾಗಿದ್ದು, ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಫರ್ಗುಸನ್ ಅವರ ಬದಲಿಯಾಗಿ ವಿಜಯಕುಮಾರ್ ವೈಶಾಕ್ ಆಯ್ಕೆಯಾಗುವ ಸಾಧ್ಯತೆ ಇದೆ.
Updated on: Apr 14, 2025 | 7:47 PM

2025 ರ ಐಪಿಎಲ್‌ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು 2 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತನ್ನ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳಿಂದ ಸೋತಿದ್ದ ಪಂಜಾಬ್ ತಂಡ ಮತ್ತೊಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಪಂಜಾಬ್ ಕಿಂಗ್ಸ್ ತಂಡದ ವೇಗಿ ಲಾಕಿ ಫರ್ಗುಸನ್ ಇಡೀ ಸೀಸನ್‌ನಿಂದ ಹೊರಬಿದಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಲಾಕಿ ಫರ್ಗುಸನ್ ಅವರ ಗಾಯವು ಗಂಭೀರವಾಗಿದ್ದು, ಅವರು ಆಡುವುದು ಅಸಾಧ್ಯವಾಗಿದೆ. ಅದಕ್ಕಾಗಿಯೇ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ ಎಂದು ವರದಿ ಮಾಡಿವೆ.

ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡಿರುವ ಫರ್ಗುಸನ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾಗಿ ಅವರು ಈ ಟೂರ್ನಿಯಲ್ಲಿ ಆಡುವುದು ಬಹುತೇಕ ಅಸಾಧ್ಯ ಎಂದು ಮಾಹಿತಿ ನೀಡಿದ್ದಾರೆ.

ಈ ಸೀಸನ್ನಲ್ಲಿ ಪಂಜಾಬ್ ಪರ ನಾಲ್ಕು ಪಂದ್ಯಗಳನ್ನಾಡಿರುವ ಲಾಕಿ ಫರ್ಗುಸನ್ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ತಂಡದ ಬೌಲಿಂಗ್ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫರ್ಗುಸನ್ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದಲ್ಲದೆ ಅವರಿಗೆ ಸರಿಸಾಟಿಯಾದ ಬದಲಿ ಆಟಗಾರ ತಂಡದಲ್ಲಿ ಇಲ್ಲದೆ ಇರುವುದು ಪಂಜಾಬ್ ತಂಡವನ್ನು ಚಿಂತೆಗೀಡುಮಾಡಿದೆ.

ಲಾಕಿ ಫರ್ಗುಸನ್ ಅವರ ಬದಲಿಯಾಗಿ ಅಫ್ಘಾನಿಸ್ತಾನದ ಆಲ್‌ರೌಂಡರ್ ಅಜ್ಮತುಲ್ಲಾ ಉಮರ್ಜೈ ತಂಡದಲ್ಲಿ ಇದ್ದಾರಾದರೂ ಅವರು ಲಾಕಿ ಫರ್ಗುಸನ್ ಅವರಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಫರ್ಗುಸನ್ ಅವರ ಬದಲಿಯಾಗಿ ಕನ್ನಡಿಗ ವಿಜಯಕುಮಾರ್ ವೈಶಾಕ್ ತಂಡಕ್ಕೆ ಆಯ್ಕೆಯಾಗಬಹುದು.



















