ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
ಶಿವರಾಜ್ ಕುಮಾರ್ ಅವರು ಸುಧಾರಾಣಿ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುಧಾರಾಣಿ ನಿರ್ಮಿಸಿ ನಟಿಸಿರುವ ‘ಘೋಸ್ಟ್’ ಶಾರ್ಟ್ ಫಿಲ್ಮ್‌ಗೆ ಶಿವಣ್ಣ, ಶುಭ ಹಾರೈಸಿದರು. ತಮ್ಮ ದೀರ್ಘಕಾಲದ ಗೆಳೆತನ ಮತ್ತು ಪರಸ್ಪರ ವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸುಧಾರಾಣಿ (Sudharani) ಹಾಗೂ ಶಿವರಾಜ್ಕುಮಾರ್ ಮಧ್ಯೆ ಇರುವ ಗೆಳೆತನಕ್ಕೆ ಹಲವು ದಶಕಗಳು ಕಳೆದಿವೆ. 1986ರಲ್ಲಿ ಬಂದ ‘ಆನಂದ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಬಳಿಕ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಈ ಫ್ರೆಂಡ್ಶಿಪ್ ಈಗಲೂ ಮುಂದುವರಿದಿದೆ. ಈ ಕಾರಣದಿಂದಲೇ ಸುಧಾರಾಣಿ ನಿರ್ಮಾಣ ಮಾಡಿ, ನಟಿಸಿರೋ ‘ಘೋಸ್ಟ್’ ಶಾರ್ಟ್ ಫಿಲ್ಮ್ ಪೋಸ್ಟರ್ ಬಿಡುಗಡೆ ಮಾಡಿ ಶಿವಣ್ಣ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ಸುಧಾರಾಣಿಗೆ ಪ್ರೀತಿಯಿಂದ ಕರೆಯೋದು ಏನು ಎಂಬುದನ್ನೂ ರಿವೀಲ್ ಮಾಡಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ಚುಮ್ಮಿ, ನಾನು ಸುಧಾರಾಣಿಯನ್ನು ಪ್ರೀತಿಯಿಂದ ಹೀಗೆ ಕರೆಯೋದು. ಅವರನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದೇನೆ. ಹೀರೋಯಿನ್ ಆದ್ಮೇಲೆ ಇದೊಂದು ಅವತಾರ ನೋಡುತ್ತಿದ್ದೇನೆ. ಘೋಸ್ಟ್, ದಿ ದೆವ್ವ ಹೆಸರಿನ ಶಾರ್ಟ್ ಫಿಲ್ಮ್ನ ನಿರ್ಮಾಣ ಮಾಡಿದ್ದಾರೆ. ಪೋಸ್ಟರ್ ಚೆನ್ನಾಗಿದೆ’ ಎಂದಿದ್ದಾರೆ ಶಿವರಾಜ್ಕುಮಾರ್.
‘ಸೈಕಲಾಜಿಕಲ್ ಥ್ರಿಲ್ಲರ್ ರೀತಿ ಅನಿಸುತ್ತಿದೆ. ಸುದೇಶ್ ಕೆ. ರಾವ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಅವರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತೇನೆ’ ಎಂದು ವಿಶ್ ಮಾಡಿದ್ದಾರೆ ಶಿವರಾಜ್ಕುಮಾರ್. ‘ನಮ್ಮಿಬ್ಬರದ್ದು ಯಾವ ರೀತಿಯ ಸಂಬಂಧ ಎಂದು ಹೇಳೋಕೆ ಸಾಧ್ಯವಿಲ್ಲ. ಒಳ್ಳೆಯ ಗೆಳತಿ, ಸಹ ಕಲಾವಿದೆ. ನನಗಾಗಿ ಅವರು ಯಾವಾಗಲೂ ಇದ್ದಾರೆ. ಅತ್ತಾಗ, ನಕ್ಕಾಗ, ಸಕ್ಸಸ್ ನೋಡಿದಾಗ ಜೊತೆಗಿದ್ದರು. ನಾವಿಬ್ಬರೂ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇವೆ’ ಎಂದು ಶಿವಣ್ಣ ಸಂತಸ ಹೊರಹಾಕಿದರು.
ಇದನ್ನೂ ಓದಿ: ‘ಇತ್ತೀಚೆಗೆ ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಆಗಲೇ ಇಲ್ಲ’; ಬೇಸರ ಹೊರಹಾಕಿದ ಸುಧಾರಾಣಿ
‘ನಮ್ಮ ಮಧ್ಯೆ ಇನ್ನೂ ಇಷ್ಟು ಫ್ರೆಂಡ್ಶಿಪ್ ಇದೆ ಎಂದರೆ ನಮ್ಮಿಬ್ಬರ ನಡುವೆ ಪ್ರೀತಿ-ವಿಶ್ವಾಸ ಕಾರಣ. ಈ ಸಿನಿಮಾ ಯುಕೆಯಲ್ಲಿ ಪ್ರೀಮಿಯರ್ ಆಗುತ್ತಿದೆ. ಅಲ್ಲಿನ ಕನ್ನಡಿಗರು ನೋಡಿ. ನಾನು ನೋಡುತ್ತೇನೆ’ ಎಂದು ಶಿವಣ್ಣ ಭರವಸೆ ನೀಡಿದ್ದಾರೆ.
View this post on Instagram
ಸುಧಾರಾಣಿ ಅವರು ರಾಜ್ಕುಮಾರ್ ಕುಟುಂಬದ ಮೂರು ಜನರೇಶನ್ ಜೊತೆ ಕೆಲಸ ಮಾಡಿದ್ದಾರೆ. ಈ ಮೊದಲು ರಾಜ್ಕುಮಾರ್ ಜೊತೆ ಅವರು ನಟಿಸಿದ್ದರು. ಆ ಬಳಿಕ ಶಿವರಾಜ್ಕುಮಾರ್ ಜೊತೆ ಬಣ್ಣ ಹಚ್ಚಿದರು. ಈಗ ರಾಜ್ಕುಮಾರ್ ಮೊಮ್ಮೊಗ ಯುವ ರಾಜ್ಕುಮಾರ್ ಜೊತೆ ‘ಯುವ’ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಅಪರೂಪದ ಸಾಧನೆಯನ್ನು ಅವರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.