- Kannada News Photo gallery Rishab Shetty met Chiyan Vikram In Bangalore her is why he met him Entertainment News In Kannada
‘ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎನಿಸುತ್ತಿದೆ’; ಚಿಯಾನ್ ವಿಕ್ರಮ್ ಭೇಟಿ ಮಾಡಿದ ರಿಷಬ್
ನಟ ರಿಷಬ್ ಶೆಟ್ಟಿ ಅವರು ಕಾಲಿವುಡ್ ನಟ ಚಿಯಾನ್ ವಿಕ್ರಮ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ವಿಕ್ರಮ್ ಅವರು ವಿವಿಧ ಪಾತ್ರಗಳ ಮೂಲಕ ಅನೇಕರಿಗೆ ಸ್ಫೂರ್ತಿ. ರಿಷಬ್ ಶೆಟ್ಟಿ ಅವರಿಗೂ ವಿಕ್ರಮ್ ಸ್ಫೂರ್ತಿ ನೀಡಿದ್ದಾರೆ. ಹೀಗಾಗಿ ರಿಷಬ್ಗೆ ಈ ಭೇಟಿ ವಿಶೇಷ ಎನಿಸಿಕೊಂಡಿದೆ.
Updated on: Aug 07, 2024 | 7:50 AM

ರಿಷಬ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ಏಕೆ ಮುಖ್ಯ ಎಂಬುದನ್ನು ಅವರು ವಿವರಿಸಿದ್ದಾರೆ.

ಸಿನಿಮಾ ಬಗ್ಗೆ ಪ್ರೀತಿ ಮೂಡಿದಾಗಿನಿಂದಲೂ ರಿಷಬ್ ಶೆಟ್ಟಿ ಅವರಿಗೆ ಚಿಯಾನ್ ವಿಕ್ರಮ್ ಅವರೇ ಮಾದರಿ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ರಿಷಬ್. ಈ ಕಾರಣಕ್ಕೆ ರಿಷಬ್ ಅವರಿಗೆ ವಿಕ್ರಮ್ ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಇತ್ತು.

‘ತಂಗಲಾನ್’ ಸಿನಿಮಾದ ಪ್ರೆಸ್ಮೀಟ್ ಬೆಂಗಳೂರಲ್ಲಿ ಆಗಸ್ಟ್ 6ರಂದು ನಡೆದಿದೆ. ಈ ಸಿನಿಮಾದಲ್ಲಿ ವಿಕ್ರಮ್ ನಟಿಸಿದ್ದಾರೆ. ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರಿಷಬ್ ಹಾಗೂ ವಿಕ್ರಮ್ ಭೇಟಿ ಆಗಿದೆ.

ಕಳೆದ 24 ವರ್ಷಗಳಿಂದ ವಿಕ್ರಮ್ ಅವರನ್ನು ಭೇಟಿ ಆಗಬೇಕು ಎಂಬುದು ರಿಷಬ್ ಕನಸಾಗಿತ್ತು. ಆ ಕನಸು ಕೊನೆಗೂ ಈಡೇರಿದೆ. ಖುಷಿಯ ಕ್ಷಣಗಳ ಫೋಟೋಗಳನ್ನು ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನಿಮ್ಮನ್ನು ಭೇಟಿ ಆದೆ. ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದಕ್ಕಾಗಿ ಧನ್ಯವಾದಗಳು’ ಎಂದು ರಿಷಬ್ ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಸದ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟಿಂಗ್ ಕುಂದಾಪುರದ ಸಮೀಪ ನಡೆಯುತ್ತಿದೆ.



















