Kannada News Photo gallery National Handloom Day 2024 : These are the different types of Handloom Sarees in India Kannada News
National Handloom Day 2024 : ನಾರಿಯರ ಮನಸ್ಸು ಗೆದ್ದಿರುವ ಕೈಮಗ್ಗದ ಸೀರೆಗಳಿವು
ಕೈಮಗ್ಗ ಉದ್ಯಮವು ದೇಶದ ಪರಂಪರೆಯಾಗಿದ್ದು ಇದನ್ನು ಉಳಿಸಲು ಮತ್ತು ಕೈಮಗ್ಗದ ಪ್ರಾಮುಖ್ಯತೆಯನ್ನು ತಿಳಿಸಲು ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯ 100 ನೇ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ಮುಂದಾಯಿತು. ಈಗಾಗಲೇ ಮಾರುಕಟ್ಟೆಯಲ್ಲಿ ಕೈಮಗ್ಗದಿಂದ ತಯಾರಾದ ಸೀರೆಗಳು ಸೇರಿದಂತೆ ವಿವಿಧ ಉಡುಗೆಗಳು ಇವೆ. ಭಾರತೀಯ ಶ್ರೀಮಂತ ಪರಂಪರೆಯಾದ ಕೈಮಗ್ಗದಿಂದಲೇ ನಾರಿಯರ ಮನಸ್ಸು ಗೆದ್ದ ಸೀರೆಗಳ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.