AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ

ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಸಿನಿಮಾರಂಗದಲ್ಲಿ ಮಾಡಿರುವ ಸಾಧನೆ ಅಪಾರ. ವಿಶ್ವಮಟ್ಟದಲ್ಲಿ ಅವರು ಖ್ಯಾತಿ ಗಳಿಸಿದ್ದಾರೆ. ಅವರ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅಪರೂಪದ ಮಾಹಿತಿ ನೀಡುವಂತಹ ‘ಮಾಡರ್ನ್​ ಮಾಸ್ಟರ್ಸ್​’ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಿರುವ ಈ ಸಾಕ್ಷ್ಯಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ.

ಮದನ್​ ಕುಮಾರ್​
|

Updated on: Aug 06, 2024 | 3:12 PM

Share
ರಾಜಮೌಳಿ ಅವರ ಜೀವನದ ಹಲವು ವಿವರಗಳು ಈ ಸಾಕ್ಷ್ಯಚಿತ್ರದಲ್ಲಿ ಇವೆ. ಬಾಲ್ಯದಿಂದ ಹಿಡಿದು ಇಂದಿನ ತನಕ ಅವರು ಸಾಗಿಬಂದ ಹಾದಿಯ ಬಗ್ಗೆ ತಿಳಿದುಕೊಳ್ಳಲು ‘ಮಾಡರ್ನ್​ ಮಾಸ್ಟರ್ಸ್​’ ಸಾಕ್ಷ್ಯಚಿತ್ರ ಸಹಕಾರಿ ಆಗಿದೆ. ಅಭಿಮಾನಿಗಳಿಗೆ ಇದು ಸಖತ್​ ಇಷ್ಟ ಆಗಿದೆ.

1 / 5
ರಾಜಮೌಳಿ ಅವರು ನಿರ್ದೇಶನದ ಜೊತೆಗೆ ಸ್ವತಃ ಸ್ಟಂಟ್ಸ್​ ಮಾಡಬಲ್ಲಂತಹ ಸಾಹಸಿ ಕೂಡ ಹೌದು. ತೆರೆಯ ಹಿಂದೆ ಅವರು ಹೇಗೆ ಇರುತ್ತಾರೆ ಎಂಬುದನ್ನು ಕೂಡ ಈ ಡಾಕ್ಯುಮೆಂಟರಿ ವಿವರಿಸುತ್ತದೆ. ಪ್ರೇಕ್ಷಕರು ಬಹಳ ಅಚ್ಚರಿಯಿಂದ ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

2 / 5
ಸಾವಿರಾರು ನಿರ್ದೇಶಕರಿಗೆ ರಾಜಮೌಳಿ ಸ್ಫೂರ್ತಿಯಾಗಿದ್ದಾರೆ. ಈವರೆಗೂ ರಾಜಮೌಳಿ ಮಾಡಿದ ಸಿನಿಮಾಗಳು ಸೋತಿಲ್ಲ. ಆರಂಭದ ದಿನಗಳಲ್ಲಿ ಯುವ ನಿರ್ದೇಶಕನಾಗಿ ರಾಜಮೌಳಿ ಗುರುತಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿ ಮಾಹಿತಿ ಇದೆ.

3 / 5
ಬೇರೆಯವರಿಗೆ ಹೋಲಿಸಿದರೆ ರಾಜಮೌಳಿ ಅವರ ಸಿನಿಮಾಗಳಲ್ಲಿ ಅದ್ದೂರಿತನ ಎದ್ದುಕಾಣುತ್ತದೆ. ಬೃಹತ್​ ಸೆಟ್​ಗಳು, ಕಣ್ಮನ ಸೆಳೆಯುವಂತಹ ಗ್ರಾಫಿಕ್ಸ್​, ವಾವ್​ ಎನಿಸುವಂತಹ ಸಾಹಸ ದೃಶ್ಯಗಳು ಇರುತ್ತವೆ. ಅವುಗಳ ಬಗ್ಗೆಯೂ ಎಸ್​.ಎಸ್​. ರಾಜಮೌಳಿ ಅವರು ಮಾತನಾಡಿದ್ದಾರೆ.

4 / 5
ರಾಜಮೌಳಿ ಅವರು ಈಗ ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ಅವರು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆರ್​ಆರ್​ಆರ್​ ಸಿನಿಮಾದ ‘ನಾಟು ನಾಟು..’ ಹಾಡಿಗೆ ‘ಆಸ್ಕರ್​’ ಪ್ರಶಸ್ತಿ ಸಿಕ್ಕಿದ್ದು ಒಂದು ಅವಿಸ್ಮರಣೀಯ ಸಾಧನೆ.

5 / 5