- Kannada News Photo gallery Modern Masters Netflix documentary shows rare and unknown facts about SS Rajamouli Entertainment News in Kannada
Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸಿನಿಮಾರಂಗದಲ್ಲಿ ಮಾಡಿರುವ ಸಾಧನೆ ಅಪಾರ. ವಿಶ್ವಮಟ್ಟದಲ್ಲಿ ಅವರು ಖ್ಯಾತಿ ಗಳಿಸಿದ್ದಾರೆ. ಅವರ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅಪರೂಪದ ಮಾಹಿತಿ ನೀಡುವಂತಹ ‘ಮಾಡರ್ನ್ ಮಾಸ್ಟರ್ಸ್’ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಾಗಿರುವ ಈ ಸಾಕ್ಷ್ಯಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ.
Updated on: Aug 06, 2024 | 3:12 PM

ರಾಜಮೌಳಿ ಅವರ ಜೀವನದ ಹಲವು ವಿವರಗಳು ಈ ಸಾಕ್ಷ್ಯಚಿತ್ರದಲ್ಲಿ ಇವೆ. ಬಾಲ್ಯದಿಂದ ಹಿಡಿದು ಇಂದಿನ ತನಕ ಅವರು ಸಾಗಿಬಂದ ಹಾದಿಯ ಬಗ್ಗೆ ತಿಳಿದುಕೊಳ್ಳಲು ‘ಮಾಡರ್ನ್ ಮಾಸ್ಟರ್ಸ್’ ಸಾಕ್ಷ್ಯಚಿತ್ರ ಸಹಕಾರಿ ಆಗಿದೆ. ಅಭಿಮಾನಿಗಳಿಗೆ ಇದು ಸಖತ್ ಇಷ್ಟ ಆಗಿದೆ.

ರಾಜಮೌಳಿ ಅವರು ನಿರ್ದೇಶನದ ಜೊತೆಗೆ ಸ್ವತಃ ಸ್ಟಂಟ್ಸ್ ಮಾಡಬಲ್ಲಂತಹ ಸಾಹಸಿ ಕೂಡ ಹೌದು. ತೆರೆಯ ಹಿಂದೆ ಅವರು ಹೇಗೆ ಇರುತ್ತಾರೆ ಎಂಬುದನ್ನು ಕೂಡ ಈ ಡಾಕ್ಯುಮೆಂಟರಿ ವಿವರಿಸುತ್ತದೆ. ಪ್ರೇಕ್ಷಕರು ಬಹಳ ಅಚ್ಚರಿಯಿಂದ ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಸಾವಿರಾರು ನಿರ್ದೇಶಕರಿಗೆ ರಾಜಮೌಳಿ ಸ್ಫೂರ್ತಿಯಾಗಿದ್ದಾರೆ. ಈವರೆಗೂ ರಾಜಮೌಳಿ ಮಾಡಿದ ಸಿನಿಮಾಗಳು ಸೋತಿಲ್ಲ. ಆರಂಭದ ದಿನಗಳಲ್ಲಿ ಯುವ ನಿರ್ದೇಶಕನಾಗಿ ರಾಜಮೌಳಿ ಗುರುತಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿ ಮಾಹಿತಿ ಇದೆ.

ಬೇರೆಯವರಿಗೆ ಹೋಲಿಸಿದರೆ ರಾಜಮೌಳಿ ಅವರ ಸಿನಿಮಾಗಳಲ್ಲಿ ಅದ್ದೂರಿತನ ಎದ್ದುಕಾಣುತ್ತದೆ. ಬೃಹತ್ ಸೆಟ್ಗಳು, ಕಣ್ಮನ ಸೆಳೆಯುವಂತಹ ಗ್ರಾಫಿಕ್ಸ್, ವಾವ್ ಎನಿಸುವಂತಹ ಸಾಹಸ ದೃಶ್ಯಗಳು ಇರುತ್ತವೆ. ಅವುಗಳ ಬಗ್ಗೆಯೂ ಎಸ್.ಎಸ್. ರಾಜಮೌಳಿ ಅವರು ಮಾತನಾಡಿದ್ದಾರೆ.

ರಾಜಮೌಳಿ ಅವರು ಈಗ ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ಅವರು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆರ್ಆರ್ಆರ್ ಸಿನಿಮಾದ ‘ನಾಟು ನಾಟು..’ ಹಾಡಿಗೆ ‘ಆಸ್ಕರ್’ ಪ್ರಶಸ್ತಿ ಸಿಕ್ಕಿದ್ದು ಒಂದು ಅವಿಸ್ಮರಣೀಯ ಸಾಧನೆ.




