ಪೂಜೆಯಲ್ಲಿ ಇದನ್ನು ಬಳಸಿ: ನಾಗ ಪಂಚಮಿ ಪೂಜೆಯನ್ನು ಮಾಡುವಾಗ ಬೆಳ್ಳಿ, ಕೆಂಪು ಮಣ್ಣು, ಗೋವಿನ ಸಗಣಿ, ಮರ ಅಥವಾ ಕಲ್ಲಿನಿಂದ ಮಾಡಿದ ಹಾವಿನ ಚಿತ್ರ ಅಥವಾ ವಿಗ್ರಹ ಅಥವಾ ಹಾವಿನ ಚಿತ್ರ, ಮುಂತಾದ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಸರಿಯಾಗಿ ಬಳಸುವುದು ಅತ್ಯವಶ್ಯಕ. ಹಾಲು , ಸಿಹಿತಿಂಡಿಗಳು, ಹಣ್ಣುಗಳು, ಹೂವುಗಳು, ಕಾಳುಗಳು, ಅರಿಶಿನ, ಕರ್ಪೂರ, ಮೊಳಕೆಯೊಡೆದ ಧಾನ್ಯಗಳು, ಅಗರಬತ್ತಿಗಳು ಇವೇ ಮುಂತಾದ ವಸ್ತುಗಳನ್ನು ಬಳಸಬೇಕಾಗುತ್ತದೆ.