AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡ ಸಮಂತಾ, ಆದರೆ ಬೇಸರವೇನಿಲ್ಲ

Samantha Ruth Prabhu: ನಟಿ ಸಮಂತಾ ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಪ್ರತಿ ಸಿನಿಮಾಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನು ಸಮಂತಾ ಪಡೆಯುತ್ತಾರೆ. ಅಂದಹಾಗೆ ಸಮಂತಾ ಕಳೆದ ವರ್ಷ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಿದರಂತೆ. ಆದರೆ ಹಣ ನಷ್ಟವಾಗಿದ್ದಕ್ಕೆ ನಟಿ ಸಮಂತಾಗೆ ಬೇಸರ ಏನಿಲ್ಲ, ಬದಲಿಗೆ ಸಂತೋಷವೇ ಇದೆಯಂತೆ. ಏನಿದು ಸಮಾಚಾರ? ಇಲ್ಲಿ ತಿಳಿಯಿರಿ...

ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡ ಸಮಂತಾ, ಆದರೆ ಬೇಸರವೇನಿಲ್ಲ
Samantha Ruth Prabhu
ಮಂಜುನಾಥ ಸಿ.
|

Updated on: Apr 13, 2025 | 3:08 PM

Share

ನಟಿ ಸಮಂತಾ (Samantha Ruth Prabhu), ದಕ್ಷಿಣ ಭಾರತದಲ್ಲಿ (South India) ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು. ಈಗ ತೆಲುಗು ಚಿತ್ರರಂಗದಲ್ಲಿ ತುಸು ಬೇಡಿಕೆ ಕಡಿಮೆ ಆಗಿದೆ. ಆದರೆ ಬಾಲಿವುಡ್​ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಒಂದರ ಹಿಂದೊಂದು ಬಿಗ್​ಬಜೆಟ್ ವೆಬ್ ಸರಣಿಗಳಲ್ಲಿ ಸಮಂತಾ ಋತ್ ಪ್ರಭು ನಟಿಸುತ್ತಿದ್ದಾರೆ. ಸಮಂತಾ, ನಾಗ ಚೈತನ್ಯ ವಿಚ್ಛೇದನದ ಬಳಿಕ ತುಸು ಹೆಚ್ಚಾಗಿ ಉದ್ದಿಮೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ವಿಚ್ಛೇದನದಿಂದ ಯಾವುದೇ ಪರಿಹಾರ ಧನ ಪಡೆಯದ ಸಮಂತಾ, ಸ್ವಂತವಾಗಿ ದುಡಿದು ಐಶಾರಾಮಿ ಜೀವನವನ್ನೇ ನಡೆಸುತ್ತಿದ್ದಾರೆ. ಆದರೆ ಸಮಂತಾಗೆ ಕಳೆದ ವರ್ಷ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ. ಆದರೆ ಆ ಬಗ್ಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ ಚೆಲುವೆ.

ಸಮಂತಾ, ಸಿನಿಮಾ, ವೆಬ್ ಸರಣಿಗಳು ಮಾತ್ರವೇ ಅಲ್ಲದೆ ಹಲವು ಜಾಹೀರಾತುಗಳಲ್ಲಿಯೂ ನಟಿಸುತ್ತಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಆರೋಗ್ಯದ ಕಡೆಗೆ ಬಹಳ ಗಮನ ಹರಿಸಿರುವ ನಟಿ ಸಮಂತಾ, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಯೂಟ್ಯೂಬ್ ಚಾನೆಲ್ ತೆರೆದು ಪಾಡ್​ಕಾಸ್ಟ್​ಗಳನ್ನು ಮಾಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ, ಟ್ವಿಟ್ಟರ್ ಬಳಸಿಕೊಂಡು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರಣದಿಂದಾಗಿಯೇ ಸಮಂತಾ ಹಲವು ಆರೋಗ್ಯಕ್ಕೆ ಹಾನಿಕಾರಕ ಆಗಬಹುದಾದಂಥಹಾ ಜಾಹೀರಾತುಗಳಲ್ಲಿ ನಟಿಸಿಲ್ಲವಂತೆ. ಕಳೆದ ವರ್ಷ ಅವರಿಗೆ ಹಲವು ಪೇಯಗಳು, ಚಾಕಲೇಟ್ ಇನ್ನಿತರೆ ದೇಹಕ್ಕೆ ಹಾನಿಕಾರಕ ಆಗಬಹುದಾದ ಜಾಹೀರಾತುಗಳಲ್ಲಿ ನಟಿಸುವ ಅವಕಾಶ ಒದಗಿ ಬಂತಂತೆ ಆದರೆ ಸಮಂತಾ ಅವುಗಳನ್ನೆಲ್ಲ ರಿಜೆಕ್ಟ್ ಮಾಡಿದ್ದಾರೆ. ಇದರಿಂದಾಗಿ ಸಮಂತಾಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆದರೆ ಆ ಬಗ್ಗೆ ಅವರಿಗೆ ಬೇಸರ ಇಲ್ಲ, ಬದಲಿಗೆ ಸಂತೋಷವೇ ಇದೆಯಂತೆ.

ಇದನ್ನೂ ಓದಿ:ಡಿಫರೆಂಟ್ ಆಗಿದೆ ಸಮಂತಾ ರುತ್ ಪ್ರಭು ಡ್ರೆಸ್ ವಿನ್ಯಾಸ

ಫೂಡ್ ಫಾರ್ಮರ್ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸಮಂತಾ, ‘ಈಗ ನಾನು ತಪ್ಪು ಮಾಡುವಂತಿಲ್ಲ. ಈಗ ನಾನು ಒಂದು ಹಂತ ತಲುಪಿದ್ದೀನಿ, ಇಲ್ಲಿ ನಾನು ಮಾಡುವ ತಪ್ಪು ಹಲವು ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು’ ಎಂದಿದ್ದಾರೆ. ಅಲ್ಲದೆ ‘ನಾನು 20ರ ವಯಸ್ಸಿನಲ್ಲಿದ್ದಾಗ ಮಾಡಿದ ಕೆಲವು ತಪ್ಪುಗಳಿಂದ ಅಥವಾ 20ರ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳದ ಕಾರಣ ಈಗ ನಾನು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಯಾರೂ ಸಹ ಯುವಕರಾಗಿದ್ದಾಗ ನಾವು ಆರೋಗ್ಯವಾಗಿರುತ್ತೇವೆ ಏನು ಬೇಕಾದರೂ ಮಾಡಬಹುದು ಎಂಬ ಭ್ರಮೆಗೆ ಒಳಗಾಗುವುದು ಬೇಡ, ಆಗ ಮಾಡುವ ತಪ್ಪು ಮುಂದಿನ ದಿನಗಳಲ್ಲಿ ಕಾಡಲಿದೆ’ ಎಂದು ಎಚ್ಚರಿಕೆ ನುಡಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ