ಸಿನಿಮಾ ಗೆದ್ದರೆ ಮಾತ್ರ ಸಂಭಾವನೆ ಪಡೆಯುತ್ತಾರೆ ಅಕ್ಷಯ್ ಕುಮಾರ್; ನಟನಿಗೆ ಆದ ನಷ್ಟ ಎಷ್ಟು?
Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್, ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಏಕೈಕ ಸೂಪರ್ ಸ್ಟಾರ್ ನಟ. ಸಂಭಾವನೆ ಬಗ್ಗೆ ಬಹಳ ಕಟ್ಟು-ನಿಟ್ಟಾಗಿರುವ ಅಕ್ಷಯ್ ಕುಮಾರ್, ಕೆಲಸದ ವಿಷಯದಲ್ಲಿಯೂ ಅಷ್ಟೇ ಕಟ್ಟು-ನಿಟ್ಟು. ಅಂದಹಾಗೆ ಪೃಥ್ವಿರಾಜ್ ಸುಕುಮಾರ್ ಹೇಳಿರುವಂತೆ, ಸಿನಿಮಾ ಹಿಟ್ ಆಗದಿದ್ದರೆ ಸಂಭಾವನೆಯನ್ನೇ ತೆಗೆದುಕೊಳ್ಳುವುದಿಲ್ಲವಂತೆ ಅಕ್ಷಯ್ ಕುಮಾರ್.

ನಟ ಅಕ್ಷಯ್ ಕುಮಾರ್ (Akshay Kumar) ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ, ಈ ವರೆಗೆ ಸಂಭಾವನೆ ಬಗ್ಗೆ ಅವರು ಒಂದೇ ಒಂದು ಹೇಳಿಕೆ ನೀಡಿಲ್ಲ. ಆದರೆ, ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಅವರು ಈ ಬಗ್ಗೆ ಮಾತನಾಡಿದ್ದರು. ಅಕ್ಷಯ್ ಕುಮಾರ್ ಅವರು ಸಿನಿಮಾ ಹಿಟ್ ಆದರೆ ಮಾತ್ರ ಸಂಭಾವನೆ ಪಡೆಯುತ್ತಾರೆ ಎನ್ನುವ ಮೂಲಕ ಶಾಕಿಂಗ್ ವಿಚಾರವನ್ನು ಹೇಳಿಕೊಂಡಿದ್ದರು.
2023ರಲ್ಲಿ ಬಂದ ‘ಸೆಲ್ಫೀ’ ಸಿನಿಮಾ ಸೋತಿದೆ. ಈ ಚಿತ್ರಕ್ಕೆ ಪೃಥ್ವಿರಾಜ್ ಕೂಡ ನಿರ್ಮಾಪಕರಲ್ಲಿ ಒಬ್ಬರು. ಇದಕ್ಕೆ ಕಾರಣವೂ ಇದೆ. ಏಕೆಂದರೆ, ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ನಿರ್ಮಾಣ ಮಾಡಿದ್ದು ಪೃಥ್ವಿರಾಜ್. ಇದರ ಹಿಂದಿ ರಿಮೇಕ್ಗೆ ಪೃಥ್ವಿರಾಜ್ ಕೂಡ ನಿರ್ಮಾಪಕರಾದರು. ಇವರು ಅಕ್ಷಯ್ ಕುಮಾರ್ ಸಂಭಾವನೆ ವಿಚಾರವಾಗಿ ಮಾತನಾಡಿದ್ದಾರೆ.
‘ನಾನು ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡಿದೆ. ಆದರೆ, ಒಂದೇ ಒಂದು ರೂಪಾಯಿ ಪಡೆದಿಲ್ಲ. ಸಿನಿಮಾ ಹಣ ಮಾಡಿದರೆ ಮಾತ್ರ ಸಂಭಾವನೆ ಪಡೆಯುತ್ತೇನೆ ಎಂದರು. ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಲ್ಲ. ಹೀಗಾಗಿ, ಅವರು ಸಂಭಾವನೆ ಪಡೆದಿಲ್ಲ’ ಎಂದು ಪೃಥ್ವಿರಾಜ್ ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಅಕ್ಷಯ್ ಕುಮಾರ್ ಅವರ ಈ ನಿರ್ಧಾರದಿಂದ ಅವರಿಗೆ ಸಾಕಷ್ಟು ನಷ್ಟ ಆಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಅಕ್ಷಯ್ ಕುಮಾರ್ ಜೊತೆ ನಟಿಸಲಿರುವ ‘ಸೂರ್ಯಕಾಂತಿ’ ನಟಿ
ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ದೊಡ್ಡ ಯಶಸ್ಸು ಅನ್ನೋದು ಕಂಡಿದ್ದು 2021ರಲ್ಲಿ ಬಂದ ‘ಸೂರ್ಯವಂಶಿ’. ಇದಾದ ಬಳಿಕ ಅಕ್ಷಯ್ ಕುಮಾರ್ ನಟನೆಯ 10ಕ್ಕೂ ಅಧಿಕ ಸಿನಿಮಾಗಳು ಬಂದಿವೆ. ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳು ಮಕಾಡೆ ಮಲಗಿವೆ. ಅಂದರೆ, ಅಕ್ಷಯ್ ಕುಮಾರ್ ಅವರು ಈ ಎಲ್ಲಾ ಸಿನಿಮಾ ನಿರ್ಮಾಪಕರಿಂದ ಸಂಭಾವನೆಯನ್ನೇ ಪಡೆದಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಇನ್ನು, ‘ಬಡೆ ಮಿಯಾ ಚೋಟೆ ಮಿಯಾ’ ಸೋತಾಗ ನಿರ್ಮಾಪಕರು ಕೂಡ ಅಕ್ಷಯ್ ಬಗ್ಗೆ ಮಾತನಾಡಿದ್ದರು. ಅಕ್ಷಯ್ ಕುಮಾರ್ ಅವರು ಉಳಿದ ಕಲಾವಿದರೆ ಸಂಭಾವನೆ ಕೊಟ್ಟು ಆ ಬಳಿಕ ಹಣ ಇದ್ದರೆ ನನಗೆ ನೀಡಿ ಎಂದು ಹೇಳಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ