AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ತಾಪ್ಸಿ ಪನ್ನು; ಮಹಿಳೆಯರಿಗೆ ಎಚ್ಚರಿಕೆ

ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಮಾತನಾಡಿರುವ ತಾಪ್ಸಿ ಪನ್ನು ಅವರು, ಮಹಿಳೆಯರ ದೇಹದ ಹಾರ್ಮೋನ್ ಬದಲಾವಣೆಗಳು ಮತ್ತು ಸ್ವಾಭಾವಿಕ ರಚನೆಯನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಈ ಮೊದಲು ತಾವು ಕೂಡ ಹೊಟ್ಟೆಯ ಬೊಚ್ಚು ಕರಗಿಸಲು ಹೋಗಿ ತೊಂದರೆಗೆ ಸಿಲುಕಿರುವುದಾಗಿ ಹೇಳಿದ್ದಾರೆ.

ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ತಾಪ್ಸಿ ಪನ್ನು; ಮಹಿಳೆಯರಿಗೆ ಎಚ್ಚರಿಕೆ
Taapsee Pannu
ಮದನ್​ ಕುಮಾರ್​
|

Updated on: Jun 01, 2026 | 4:40 PM

Share

ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಪರ್ಫೆಕ್ಟ್ ಫಿಗರ್, ಅದರಲ್ಲೂ ಪ್ರಮುಖವಾಗಿ ಚಪ್ಪಟೆಯಾದ ಹೊಟ್ಟೆ (Flat Midriff) ಹೊಂದಿರಬೇಕು ಎಂಬ ಕ್ರೇಜ್ ಯುವತಿಯರಲ್ಲಿ ಹೆಚ್ಚಾಗಿದೆ. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲು ಹೋಗಿ ತಮ್ಮ ದೇಹವನ್ನು ದಂಡಿಸಬೇಡಿ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ತಾವೂ ಕೂಡ ಒಂದು ಕಾಲದಲ್ಲಿ ಇಂತಹದ್ದೇ ಹುಚ್ಚಿಗೆ ಬಿದ್ದು ದೇಹಕ್ಕೆ ಅತಿಯಾದ ಹಿಂಸೆ ನೀಡಿದ್ದಾಗಿ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ನಾನು ಬೆಳೆಯುವಾಗ ಅತ್ಯಂತ ಫಿಟ್ ಆಗಿದ್ದೆ. ಆದರೂ ನನ್ನ ಕೆಳಹೊಟ್ಟೆಯ ಬೊಜ್ಜು ಏಕೆ ಕರಗುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಆ ಫ್ಲಾಟ್ ಬೆಲ್ಲಿ ಹೊಂದುವ ಹಠಕ್ಕೆ ಬಿದ್ದು, ನಾನು ಮಿತಿ ಮೀರಿ ವರ್ಕೌಟ್ ಮಾಡಲು ಶುರುಮಾಡಿದೆ. ನನ್ನ ದೇಹಕ್ಕೆ ನಾನೇ ಅತಿಯಾದ ಒತ್ತಡ ಹೇರಿದೆ. ಆದರೆ ನಾವು ಯಾವಾಗ ದೇಹವನ್ನು ಮಿತಿ ಮೀರಿ ದಂಡಿಸುತ್ತೇವೋ, ಆಗ ಮೆದುಳು ನಮ್ಮ ದೇಹಕ್ಕೆ ರಕ್ಷಣೆಯ ಅಗತ್ಯವಿದೆ ಎಂಬ ಅಲಾರಾಂ ಸಂದೇಶ ರವಾನಿಸುತ್ತದೆ’ ಎಂದು ತಾಪ್ಸಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ನಾವು ಅತಿಯಾಗಿ ದಂಡಿಸಿದಾಗ ದೇಹವು ನೀರನ್ನು ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಆ ಕೆಳಹೊಟ್ಟೆಯಲ್ಲಿ ಕಾಣಿಸುವುದು ಕೇವಲ ಕೊಬ್ಬು ಮಾತ್ರವಲ್ಲ, ಅದು ನೀರು ಕೂಡ ಆಗಿರುತ್ತದೆ. ಅತಿಯಾದ ವರ್ಕೌಟ್‌ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಕರಗುವುದಿಲ್ಲ. ಹೀಗಾಗಿ ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.

ಮಹಿಳೆಯರ ದೇಹದ ರಚನೆಯ ಬಗ್ಗೆ ಮಾತನಾಡಿರುವ ತಾಪ್ಸಿ, ‘ಪ್ರತಿಯೊಬ್ಬ ಮಹಿಳೆಯ ದೇಹದ ಪ್ರಕೃತಿಯೂ ವಿಭಿನ್ನವಾಗಿರುತ್ತದೆ. ನನಗೂ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಸಾಕಷ್ಟು ಹಿಂಸೆ ಅನುಭವಿಸಿದ ಬಳಿಕವಷ್ಟೇ ನನಗೆ ಸತ್ಯದ ಅರಿವಾಯಿತು. ನನ್ನ ನ್ಯೂಟ್ರಿಷನಿಸ್ಟ್ ಮುನ್‌ಮುನ್ ಗನೇರಿವಾಲ್ ಈ ಬಗ್ಗೆ ನನಗೆ ಸ್ಪಷ್ಟನೆ ನೀಡಿದ್ದರು. ಮಹಿಳೆಯರ ಕೆಳಹೊಟ್ಟೆಯ ಭಾಗದಲ್ಲಿ ಸ್ವಲ್ಪ ಕೊಬ್ಬು ಮತ್ತು ನೀರಿನಂಶ ಇರುವುದು ಅತ್ಯಂತ ಅವಶ್ಯಕ. ಏಕೆಂದರೆ ಅಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳಿರುತ್ತವೆ. ಅವುಗಳ ರಕ್ಷಣೆಗಾಗಿ ಪ್ರಕೃತಿಯೇ ಈ ರಚನೆ ಮಾಡಿದೆ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ ಪನ್ನು?

‘ಇದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಪರ್ಫೆಕ್ಟ್‌ ಆಗಿ ಬರಲಿ ಎಂಬ ಒಂದೇ ಕಾರಣಕ್ಕೆ ನಿಮ್ಮ ದೇಹಕ್ಕೆ ಹಿಂಸೆ ಕೊಡಬೇಡಿ. ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಉಬ್ಬು ಇರುವುದು ಸಹಜ ಮತ್ತು ಆರೋಗ್ಯಕರ. ಪ್ಲೀಸ್, ನಿಮ್ಮ ದೇಹಕ್ಕೆ ನೀವೇ ಟಾರ್ಚರ್ ಮಾಡಬೇಡಿ’ ಎಂದು ತಾಪ್ಸಿ ಪನ್ನು ಮಹಿಳೆಯರಲ್ಲಿ ವಿನಂತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ಮೈಸೂರು ದಸರಾ 2026: ಅಧಿಕೃತ ವೇಳಾಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ದಾವಣಗೆರೆ: ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ಟ್ರಕ್-ಟೆಂಪೋ ಡಿಕ್ಕಿಗೆ 7 ಮಂದಿ ಸಾವು, 19 ಜನರಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​