- Kannada News Photo gallery Actress Samantha turned as producer, her first production movie ready to release
ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ
Samantha Ruth Prabhu: ನಟಿಯಾಗಿ ಬಹಳ ಹೆಸರು ಮಾಡಿರುವ, ಈಗಲೂ ಸಖತ್ ಬೇಡಿಕೆಯಲ್ಲಿರುವ ನಟಿ ಸಮಂತಾ ಇದೀಗ ನಿರ್ಮಾಪಕಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿರುವ ಸಮಂತಾ, ಮೊದಲ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದಾರೆ. ಸಮಂತಾ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇಲ್ಲಿದೆ ಆ ಹೊಸ ಸಿನಿಮಾದ ಬಗ್ಗೆ ಮಾಹಿತಿ...
Updated on:Mar 15, 2025 | 7:48 PM

ನಟ, ನಟಿಯರು ಸಿನಿಮಾ ನಿರ್ಮಾಣ ಮಾಡುವುದು ಹೊಸದೇನೂ ಅಲ್ಲ. ಮೊದಲೆಲ್ಲ ಸಿನಿಮಾ ನಟರು ಮಾತ್ರವೇ ನಿರ್ಮಾಣಕ್ಕೆ ಇಳಿಯುತ್ತಿದ್ದರು. ಇತ್ತೀಚೆಗೆ ಸಿನಿಮಾ ನಟಿಯರು, ಪೋಷಕ ನಟರು, ಹಾಸ್ಯ ನಟರುಗಳು ಸಹ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ.

ನಟಿಯಾಗಿ ಬಹಳ ಹೆಸರು ಮಾಡಿರುವ, ಈಗಲೂ ಸಖತ್ ಬೇಡಿಕೆಯಲ್ಲಿರುವ ನಟಿ ಸಮಂತಾ ಇದೀಗ ನಿರ್ಮಾಪಕಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿರುವ ಸಮಂತಾ, ಮೊದಲ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದಾರೆ.

ಸಮಂತಾ ನಿರ್ಮಾಣ ಮಾಡಿರುವ ಈ ಸಿನಿಮಾ ರೆಟ್ರೋ ಕಾಲದ ಕತೆ ಹೊಂದಿದ್ದು, ಹಾಸ್ಯ ಮಿಶ್ರಿತ ಕೌಟುಂಬಿಕ ಕತೆಯುಳ್ಳ ಸಿನಿಮಾ ಆಗಿದೆ. ಸಿನಿಮಾದಲ್ಲಿ ಹಲವು ಹೊಸ ನಟ-ನಟಿಯರು ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಸಹ ಹೊಸ ನಿರ್ದೇಶಕ.

ತಮ್ಮ ನಿರ್ಮಾಣದ ‘ಶುಭಂ’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಮಂತಾ, ನಮ್ಮ ‘ಶುಭಂ’ ಸಿನಿಮಾ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ರೆಡಿಯಾಗಿದೆ, ಇನ್ನಷ್ಟು ಸುದ್ದಿಗಳನ್ನು ಶೀಘ್ರವೇ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಸಮಂತಾ ಟ್ರಲಾಲ ಮೂವಿ ಪಿಕ್ಚರ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು, ನಿರ್ಮಾಣ ಸಂಸ್ಥೆಯ ಮೂಲಕ ‘ಶುಭಂ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣವಾಗಿದೆ.

ಸಮಂತಾ ಸಾಕಷ್ಟು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಿಕಲ್ ಬಾಲ್ ರಾಯಭಾರಿ ಆಗಿದ್ದಾರೆ. ಪಾಡ್ಕಾಸ್ಟ್ ಮಾಡುತ್ತಿದ್ದಾರೆ. ಕೆಲ ಫಿಟ್ನಸ್ ಬ್ರ್ಯಾಂಡ್ ಮೇಲೆ ಬಂಡವಾಳ ಹೂಡಿದ್ದಾರೆ. ಎನರ್ಜಿ ಡ್ರಿಂಕ್ಸ್ ಕಂಪೆನಿ ಆರಂಭಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
Published On - 7:45 pm, Sat, 15 March 25



















