ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಫೋಟೋ ಹಂಚಿಕೊಂಡ ನಟಿ
ಸಮಂತಾ ರುತ್ ಪ್ರಭು ಅವರು ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 'ದಿ ಫ್ಯಾಮಿಲಿ ಮ್ಯಾನ್' ಮತ್ತು 'ಸಿಟಾಡೆಲ್' ಸರಣಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಮಂತಾ ಮತ್ತು ರಾಜ್, ಈಗ ಸಂಬಂಧದಲ್ಲಿ ಇದ್ದಾರೆ ಎಂದು ಅಭಿಮಾನಿಗಳು ನಂಬುತ್ತಿದ್ದಾರೆ.

ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಒಬ್ಬಂಟಿ ಆಗಿ ಇದ್ದರು. ಅತ್ತ ನಾಗ ಚೈತನ್ಯ ಮತ್ತೊಂದು ವಿವಾಹ ಆದರೆ, ಸಮಂತಾ ಮಾತ್ರ ಎಲ್ಲ ಕಡೆಗಳಲ್ಲಿ ಒಬ್ಬಂಟಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರಿಗೂ ಜೀವನದಲ್ಲಿ ಸಂಗಾತಿ ಸಿಕ್ಕರೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಸಮಂತಾ ಅವರು ನಿರ್ದೇಶಕ ರಾಜ್ ನಿದಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿಗೆ ಈಗ ಮತ್ತಷ್ಟು ಬಲ ಸಿಕ್ಕಿದೆ.
ಸಮಂತಾ ಹಾಗೂ ರಾಜ್ ಇತ್ತೀಚೆಗೆ ಹೆಚ್ಚು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ರಾಜ್ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಹಾಗೂ ‘ಸಿಟಾಡೆಲ್: ಹನಿ ಬನಿ’ ಸೀರಿಸ್ಗಳಲ್ಲಿ ಸಮಂತಾ ನಟಿಸಿದ್ದರು. ಆ ಸಂದರ್ಭದಲ್ಲಿ ಇವರ ಮಧ್ಯೆ ಆಪ್ತತೆ ಬೆಳೆದಿದೆ. ಇಷ್ಟು ದಿನ ಕದ್ದುಮುಚ್ಚಿ ಓಡಾಡುತ್ತಿದ್ದ ಇವರು ಈಗ ಓಪನ್ ಆಗಿ ಸುತ್ತಾಟ ಆರಂಭಿಸಿದ್ದು, ಇದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸಮಂತಾ ಅವರು ‘ಪಿಕಲ್ಬಾ್ ಟೂರ್ನ್ಮೆಂಟ್’ ಒಂದರಲ್ಲಿ ಭಾಗಿ ಆಗಿದ್ದರು. ಇದರಲ್ಲಿ ರಾಜ್ ಕೂಡ ಸಮಂತಾ ಜೊತೆ ಇದ್ದರು. ಈ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದು, ಅವರು ನಗು ನಗುತ್ತಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ನಿರ್ದೇಶಕನ ಕೈ ಹಿಡಿದು ನಿಂತಿದ್ದಾರೆ. ಇದು ಅನುಮಾಗಳನ್ನು ಹೆಚ್ಚಿಸಿದೆ.
View this post on Instagram
ರಾಜ್ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರು ಶ್ಯಾಮಲಿ ಡೇ ಅವರನ್ನು ಮದುವೆ ಆಗಿದ್ದರು. ಈಗ ಸಮಂತಾ ಜೊತೆ ವಿವಾಹ ಆಗುತ್ತಾರೆ ಎಂದರೆ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಬೇಕಿದೆ. ಈ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ‘ಮುಂದಿನ ಆರು ತಿಂಗಳು ನಗುತ್ತಾ ಇರುತ್ತೇನೆ’; ಅಭಿಮಾನಿಗಳಿಗಾಗಿ ಸಮಂತಾ ಪೋಸ್ಟ್
ಸಮಂತಾ ಹಂಚಿಕೊಂಡ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಸಮಂತಾ ಈ ವಿಚಾರವನ್ನು ಶೀಘ್ರವೇ ಅಧಿಕೃತ ಮಾಡಬಹುದು. ಅವರು ಹೀಗೆ ನಗುತ್ತಾ ಇರಬೇಕು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಕಳೆದು ಹೋದ ನಗು ಮತ್ತೆ ಸಿಕ್ಕಿದೆ’ ಎಂದು ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.