AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪತ್ರಿಕೆಯಲ್ಲಿ ₹ 500 ಇಟ್ಟು, ನನ್ನ ಲವ್ ನಿಮ್ಮ ಕೈಯಲ್ಲಿದೆ ಸರ್, ಪಾಸು ಮಾಡಿ ಅಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ

ಉತ್ತರ ಪತ್ರಿಕೆಯಲ್ಲಿ ₹ 500 ಇಟ್ಟು, ನನ್ನ ಲವ್ ನಿಮ್ಮ ಕೈಯಲ್ಲಿದೆ ಸರ್, ಪಾಸು ಮಾಡಿ ಅಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2025 | 8:31 PM

Share

ವಿದ್ಯಾರ್ಥಿಯ ಕನ್ನಡವನ್ನು ಅರ್ಥಮಾಡಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಮೌಲ್ಯಮಾಪಕನಿಗೆ ಅವನು ₹ 500 ತೆಗೆದುಕೊಂಡು ಹೋಗಿ ಚಹಾ ಕುಡಿಯುವಂತೆ ಬರೆಯುತ್ತಾನೆ. ವರ್ಷವಿಡೀ ಲವ್ವು, ರೀಲ್ಸ್, ಸೆಲ್ಫೀ, ಸಿನಿಮಾ ಅಂತ ಹೊತ್ತು ಕಳೆಯುವ ಇವನಂಥ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಈ ಗಿಮಿಕ್ಕುಗಳನ್ನು ಮಾಡುತ್ತಾರೆ. ಇತ್ತೀಚಿಗೆ ಈ ಟ್ರೆಂಡ್ ಕಡಿಮೆಯಾಗಿತ್ತು ಅಥವಾ ಬೆಳಕಿಗೆ ಬಂದಿರಲಿಲ್ಲ.

ಬೆಳಗಾವಿ, ಏಪ್ರಿಲ್ 19: ಇದು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಗತಿ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜರುಗುವಾಗ ಇಂಥ ಘಟನೆಗಳು ಬೆಳಕಿಗೆ ಬರುತ್ತವೆ. ವಿಷಯ ಏನು ಅಂತ ನಿಮಗೆ ಕಾಣಿಸುತ್ತಿದೆ. ಹತ್ತನೇ ತರಗತಿ ಪರೀಕ್ಷೆ (SSLC exams) ಬರೆದಿರುವ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ₹ 500 ರ ನೋಟೊಂದನ್ನು ಇಟ್ಟು ತನ್ನನ್ನು ಪಾಸ್ ಮಾಡುವಂತೆ ಕೋರಿದ್ದಾನೆ. ಈ ಉತ್ತರ ಪತ್ರಿಕೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ. ಅವನು ಪಾಸಾದರೆ ಮಾತ್ರ ಹುಡುಗಿ ಲವ್ ಮಾಡುತ್ತಾಳಂತೆ ಮತ್ತು ಅಪ್ಪ ಅಮ್ಮ ಕಾಲೇಜಿಗೆ ಕಳಿಸುತ್ತಾರಂತೆ!

ಇದನ್ನೂ ಓದಿ:   2nd PUC Result: ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಕೊನೆ ದಿನಾಂಕ, ಅರ್ಜಿ ಶುಲ್ಕ ಎಷ್ಟು?​ ಇಲ್ಲಿದೆ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More