ಕೃಷ್ಣ ಜನ್ಮಾಷ್ಟಮಿಯಂದು ಮಧುಮೇಹಿಗಳು ಸಿಹಿ ತಿಂಡಿಗಳನ್ನು ತ್ಯಾಗ ಮಾಡಬೇಕಾಗಿಲ್ಲ; ನೀವು ಸವಿಯಬಹುದಾದ ಪಾಕವಿಧಾನಗಳು ಇಲ್ಲಿವೆ

Krishna Janmashtami 2021: ಕೃಷ್ಣ ಜನ್ಮಾಷ್ಟಮಿಯ ದಿನದಂದು ಮಧುಮೇಹ ಸಮಸ್ಯೆ ಹೊಂದಿರುವವರು ತ್ಯಾಗ ಮಾಡಬೇಕಾಗಿಲ್ಲ. ಈ ರುಚಿಕರವಾದ ರೆಸಿಪಿಗಳನ್ನು ಮಾಡಿ ಸವಿಯಬಹುದು. 

ಕೃಷ್ಣ ಜನ್ಮಾಷ್ಟಮಿಯಂದು ಮಧುಮೇಹಿಗಳು ಸಿಹಿ ತಿಂಡಿಗಳನ್ನು ತ್ಯಾಗ ಮಾಡಬೇಕಾಗಿಲ್ಲ; ನೀವು ಸವಿಯಬಹುದಾದ ಪಾಕವಿಧಾನಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
| Updated By: shruti hegde

Updated on:Aug 30, 2021 | 11:50 AM

ಸಿಹಿ ತಿನಿಸುಗಳಿಲ್ಲದೇ ಭಾರತೀಯ ಹಬ್ಬವು ಸಂಪೂರ್ಣಗೊಳ್ಳುವುದಿಲ್ಲ. ಸಿಹಿ ಹಂಚುತ್ತಾ ಹಬ್ಬವನ್ನು ಖುಷಿಯಿಂದ ಸಂಭ್ರಮಿಸುತ್ತಾರೆ ಭಾರತೀಯರು. ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಸಿಹಿ ತಿನ್ನಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಆರೋಗ್ಯ ತೊಂದರೆಗಳಿಂದಾಗಿ ಕೆಲವರು ಸಿಹಿ ತಿನ್ನುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಹಾಗೆಂದು ಚಿಂತಿಸಬೇಕಿಲ್ಲ. ಹಬ್ಬದ ದಿನದಂದು ನೀವೂ ಸಿಹಿ ತಿನ್ನಬಹುದು. ಮಧುಮೇಹ ಸಮಸ್ಯೆ ಇರುವವರು ದಿಢೀರ್​ಆಗಿ ಸಿಗಿ ತಯಾರಿಸಿ ಸವಿಯಬಹುದಾದ ಸಿಹಿ ತಿಂಡಿಗಳು ಯಾವುವುದು ಎಂಬುದನ್ನು ತಿಳಿಯೋಣ.

ಕೃಷ್ಣ ಜನ್ಮಾಷ್ಟಮಿಯ ದಿನದಂದು ಮಧುಮೇಹ ಸಮಸ್ಯೆ ಹೊಂದಿರುವವರು ತ್ಯಾಗ ಮಾಡಬೇಕಾಗಿಲ್ಲ. ಈ ರುಚಿಕರವಾದ ರೆಸಿಪಿಗಳನ್ನು ಮಾಡಿ ಸವಿಯಬಹುದು.

ಪನೀರ್ ಖೀರ್ ಹಾಲನ್ನು ನಾನ್​ಸ್ಟಿಕ್​ ಪ್ಯಾನ್​ನಲ್ಲಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹಾಲು ಚೆನ್ನಾಗಿ ಕುದಿಯಬೇಕು. ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್​ಗಳನ್ನು ಪ್ಯಾನ್​ಗೆ ಹಾಕಿ. ಜತೆಗೆ ಪನೀರ್​ಅನ್ನು ಪ್ಯಾನ್​ಗೆ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಪನೀರ್ ಖೀರ್ ಸಿದ್ಧವಾಗಿದೆ. ತಣ್ಣಗಾದ ಬಳಿಕ ನೀವು ಖೀರ್​ಅನ್ನು ಸೇವಿಸಬಹುದು.

ಶುಗರ್ ಫ್ರೀ ಶ್ರಿಖಂಡ ಒಂದು ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಳ್ಳಿ. ಕೇಸರಿ ಎಳೆಗಳನ್ನು ಸೇರಿಸಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ಬಟ್ಟಲಿನಲ್ಲಿದ್ದ ಏಲಕ್ಕಿ ಪುಡಿ ಮತ್ತು ಮೊಸರನ್ನು ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸಕ್ಕರೆ ಮುಕ್ತ ಪದಾರ್ಥಗಳನ್ನು ಸೇರಿಸಿ ಮತ್ತೆ ಮಿಶ್ರಣ ಮಾಡಿ. ತಣ್ಣಗಾದರೆ ಶುಗರ್ ಫ್ರೀ ಶ್ರೀಖಂಡ ಸವಿಯಲು ಸಿದ್ಧ.

ತೆಂಗಿನಕಾಯಿ ಬರ್ಫಿ ತೆಂಗಿನ ತುರಿಯನ್ನು ತೆಗೆದುಕೊಂಡು 2 ರಿಂದ 3 ಚಮಚ ತುಪ್ಪದೊಂದಿಗೆ ಪ್ಯಾನ್​ನಲ್ಲಿ ಹುರಿಯಿರಿ. ಶುಗರ್ ಫ್ರೀ ಪದಾರ್ಥಗಳನ್ನು ಸದಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ರುಚಿಗಾಗಿ ಸ್ವಲ್ಪ ಸೇರಿಸಿ. ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. ಬಟ್ಟಲಿಗೆ ಸ್ವಲ್ಪ ತುಪ್ಪ ಸವರಿ ನಂತರ ಅದನ್ನು ಬಟ್ಟಲಿನಲ್ಲಿ ಹಾಕಿ ಬರ್ಫಿ ಆಕಾರದಲ್ಲಿ ಕತ್ತರಿಸಿ. ಫ್ರಿಜ್​ನಲ್ಲಿಯೂ ಸಹ ಇಟ್ಟು ಕೋಲ್ಡ್ ಮಾಡಬಹುದು. ಇದೀಗ ತೆಂಗಿನ ತುರಿ ಬರ್ಫಿ ಸವಿಯಲು ಸಿದ್ಧ.

ಇದನ್ನೂ ಓದಿ:

Krishna Janmashtami 2021 ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ಸಂಗತಿಗಳು

Krishna Janmashtami 2021: ಶ್ರೀ ಕೃಷ್ಣನ 50 ಹೆಸರುಗಳು

(Krishna Janmashtami 2021 quick recipes for diabetes)

Published On - 11:46 am, Mon, 30 August 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್