Karela Juice: ರುಚಿ ಕಹಿಯಾಗಿದ್ದರೂ ಆರೋಗ್ಯ ಸುಧಾರಿಸುವ ಉತ್ತಮ ಮಾರ್ಗ ಹಾಗಲಕಾಯಿ ಜ್ಯೂಸ್
ಕೆಲವರು ಹಾಗಲಕಾಯಿ ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಕಹಿ ಇರುವ ಕಾರಣ ಹೆಚ್ಚು ಜನರು ಇಷ್ಟಪಡುವುದಿಲ್ಲ. ಆದರೆ ದೇಹಕ್ಕೆ ಖಾರ, ಉಪ್ಪು, ಹುಳಿಯ ಅಂಶ ಹೇಗೆ ಹಿತಮಿತವಾಗ ಬೇಕೋ ಅದೇ ರೀತಿ ಕಹಿ ಅಂಶ ಕೂಡಾ ಮುಖ್ಯ.
ನಾವು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಅತ್ಯವಶ್ಯಕ. ಅವುಗಳನ್ನು ತರಕಾರಿಗಳು, ಹಣ್ಣುಗಳು ಮತ್ತು ನಾವು ಸೇವಿಸುವ ಆಹಾರದಿಂದ ಪಡೆದುಕೊಳ್ಳಬಹುದು. ಕೆಲವರು ಹಾಗಲಕಾಯಿ ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಕಹಿ ಇರುವ ಕಾರಣ ಹೆಚ್ಚು ಜನರು ಇಷ್ಟಪಡುವುದಿಲ್ಲ. ಆದರೆ ದೇಹಕ್ಕೆ ಖಾರ, ಉಪ್ಪು, ಹುಳಿಯ ಅಂಶ ಹೇಗೆ ಹಿತಮಿತವಾಗ ಬೇಕೋ ಅದೇ ರೀತಿ ಕಹಿ ಅಂಶ ಕೂಡಾ ಮುಖ್ಯ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ವೈರಸ್ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಹಾಗಲಕಾಯಿ ರಸವು ಮಧುಮೇಹಿಗಳು ತುಂಬಾ ಉಪಯುಕ್ತ ಆಹಾರ. ಇದು ಚರಟಿನ್ ಮತ್ತು ಮೊಮೊರ್ಡಿಸ್ಅನ್ನು ಒಳಗೊಂಡಿರುತ್ತದೆ. ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಪ್ರತಿನಿತ್ಯ ಬೆಳಗ್ಗೆ ಹಾಗಲಕಾಯಿ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಹಾಗಲಕಾಯಿ ಸೇವನೆ ಆರೋಗ್ಯ ಪ್ರಯೋಜನಗಳು ಹಾಗಲಕಾಯಿ ರಸದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯಕ್ಕೆ ಇದು ಪ್ರಯೋಜನಕಾರಿ.
ಹಾಗಲಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಇರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ.
ಇದು ಪ್ರೊವಿಟಮಿನ್ ಎ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಕಣ್ಣಿನ ಆರೋಗ್ಯ ಮತ್ತು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಾಗಲಕಾಯಿ ಕ್ಯಾಟೆಚಿನ್, ಗ್ಯಾಲಿಕ್ ಆಸಿಡ್, ಎಪಿಕಟೆಚಿನ್ ಮತ್ತು ಕ್ಲೋರೊಜೆನಿಕ್ ಆಸಿಡ್ನ ಉತ್ತಮ ಮೂಲವಾಗಿದೆ. ಈ ಎಲ್ಲಾ ಶಕ್ತಿಶಾಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ನಿಮ್ಮ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Women Health: ನಿಮ್ಮ ಮಗು ಆರೋಗ್ಯವಾಗಿ ಮತ್ತು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗಾಗಿ ಕೆಲವೊಂದಿಷ್ಟು ಟಿಪ್ಸ್ಗಳು
(Health tips karela juice and its very healthy)